WhatsApp New Feature - ವಾಟ್ಸಾಪ್ ಮಂಗಳವಾರ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರಿಗಾಗಿ ವಿಶೇಷ ವೈಶಿಷ್ಟ್ಯವನ್ನು (WhatsApp New Feature) ಹೊರತಂದಿದೆ. ವ್ಯಕ್ತಿಯ ವೈಯಕ್ತಿಕ ಚಾಟ್ ಅನ್ನು ಮರೆಮಾಡಲು ಬಯಸುವವರಿಗೆ ಈ ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ವಾಟ್ಸಾಪ್ ತನ್ನ ಆರ್ಕೈವ್ ಮಾಡಿದ ಚಾಟ್ ಸೆಟ್ಟಿಂಗ್‌ಗಳ ವೈಶಿಷ್ಟ್ಯದಲ್ಲಿ ಬದಲಾವಣೆ ಮಾಡಿದೆ. ಈ ವೈಶಿಷ್ಟ್ಯದ ಅನುಷ್ಠಾನದ ನಂತರ, ವಾಟ್ಸಾಪ್ ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ (WhatsApp Archived Chats) ಹೊಸ ಸಂದೇಶ ಬಂದರೂ, ಚಾಟ್‌ಗಳು ಆರ್ಕೈವ್ ಆಗಲಿವೆ. ಅಂದರೆ, ಹೊಸ ಸಂದೇಶಕ್ಕೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಪಾಪ್-ಅಪ್ ನಿಮಗೆ ಕಾಣಿಸುವುದಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- BSNL: ಒಂದೇ ದಿನದಲ್ಲಿ 1600 GB ಡೇಟಾ ಖರ್ಚು ಮಾಡಿ, Disney+Hotstar ಜೊತೆಗೆ ಉಚಿತ ಕಾಲಿಂಗ್ ಆನಂದ ಪಡೆಯಿರಿ


ಅಷ್ಟೇ ಅಲ್ಲ ಆರ್ಕೈವ್ ಚಾಟ್‌ನಲ್ಲಿ ಹೊಸ ಸಂದೇಶ ಬಂದ ಕೂಡಲೇ ಅವು ಆರ್ಕೈವ್ ಆಗುವುದಿಲ್ಲ. ಈ ವೈಶಿಷ್ಟ್ಯವನ್ನು ಬಳಸುವ ಮೊದಲು, ಹೊಸ ನವೀಕರಣವನ್ನು ಅನುಭವಿಸಲು ನೀವು ವಾಟ್ಸಾಪ್‌ನ (WhatsApp) ಇತ್ತೀಚಿನ ಆವೃತ್ತಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇತ್ತೀಚಿನ ನವೀಕರಣವು ಬಳಕೆದಾರರಿಗೆ ತಮ್ಮ ಇನ್‌ಬಾಕ್ಸ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಉದ್ದೇಶವನ್ನು ಹೊಂದಿದೆ ಮತ್ತು ಅವುಗಳನ್ನು ಅವರ ಪ್ರಮುಖ ಚಾಟ್‌ಗಳ ಮೇಲೆ ಇರಿಸಿಕೊಳ್ಳುತ್ತದೆ ಎಂದು ಫೇಸ್‌ಬುಕ್ ಒಡೆತನದ ಕಂಪನಿ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಈ ವೈಶಿಷ್ಟ್ಯದ ಅನುಕೂಲಗಳು ಮತ್ತು ಆರ್ಕೈವ್ ಮಾಡಿದ ಚಾಟ್ (Archived Chat)ಸೆಟ್ಟಿಂಗ್‌ಗಳನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಇದನ್ನೂ ಓದಿ- Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ


ಈ ಹೊಸ ವೈಶಿಷ್ಟ್ಯದ ಲಾಭವೇನು?
ಹೊಸ ಆರ್ಕೈವ್ ಮಾಡಿದ ಚಾಟ್ (Archived Chat) ಸೆಟ್ಟಿಂಗ್‌ಗಳ ಪ್ರಯೋಜನವೆಂದರೆ ಆರ್ಕೈವ್ ಮಾಡಿದ ಚಾಟ್‌ನಲ್ಲಿ ಯಾವುದೇ ಹೊಸ ಸಂದೇಶ ಬಂದರೆ ಅದು ಆರ್ಕೈವ್ ಮಾಡಿದ ಚಾಟ್ ಫೋಲ್ಡರ್‌ನಲ್ಲಿ ಉಳಿಯುತ್ತದೆ. ಇದು ಮುಖ್ಯ ಚಾಟ್ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಇದರೊಂದಿಗೆ, ನೀವು ಬಳಕೆದಾರರ ಚಾಟ್ ಅನ್ನು ಹಸ್ತಚಾಲಿತವಾಗಿ ಸಂಗ್ರಹಿಸದ ಹೊರತು, ಚಾಟ್ ಆರ್ಕೈವ್ ಫೋಲ್ಡರ್‌ನಲ್ಲಿ ಉಳಿಯಲಿದೆ. ವಾಟ್ಸ್ ಆಪ್ ನ ಹಲವು ಬಳಕೆದಾರರು ಈ ಹೊಸ ವೈಶಿಷ್ಟ್ಯದ ಕುರಿತು ಬೇಡಿಕೆ ಸಲ್ಲಿಸಿದ್ದರು ಎಂದು ವಾಟ್ಸ್ ಆಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಹೀಗಾಗಿ ಆರ್ಕೈವ್ಡ್ ಚಾಟ್ ಸೆಟಿಂಗ್ ನಲ್ಲಿ ಬದಲಾವಣೆ ತರಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.


ಇದನ್ನೂ ಓದಿ-Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ


ಚಾಟ್ ಗಳನ್ನು ಹೇಗೆ ಆರ್ಕೈವ್ ಮಾಡಬಹುದು?
>> ಇದಕ್ಕಾಗಿ ಮೊದಲು ನೀವು ಮರೆಮಾಚಲು ಬಯಸುವ ನಿಮ್ಮ ವಾಟ್ಸ್ ಆಪ್ ಖಾತೆಯ ಚಾಟ್ ವಿಭಾಗಕ್ಕೆ ಭೇಟಿ ನೀಡಬೇಕು. 
>> ಈ ಗುಂಡಿಯನ್ನು ಸ್ವಲ್ಪ ಸೆಕೆಂಡ್ ಅದುಮಿ ಹಿಡಿದ ಬಳಿಕ ನಿಮಗೆ ಆರ್ಕೈವ್ ಆಪ್ಶನ್ ಕಾಣಿಸಲಿದೆ. 
>>iPhone ಬಳಕೆದಾರರು ತಾವು ಮರೆಮಾಚಬೇಕಾದ ಚಾಟ್ ಅನ್ನು ಬಲ ಭಾಗಕ್ಕೆ ಸ್ಲೈಡ್ ಮಾಡಬಹುದು ಮತ್ತು ಆರ್ಕೈವ್ ಆಪ್ಶನ್ ಅನ್ನು ಪತ್ತೆಹಚ್ಚಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ