ಬೆಂಗಳೂರು : 23 ಲಕ್ಷಕ್ಕೂ ಹೆಚ್ಚು ನಕಲಿ ಖಾತೆಗಳನ್ನು ನಿಷೇಧಿಸಿರುವ ಬಗ್ಗೆ ವಾಟ್ಸಾಪ್  ವರದಿ ಬಿಡುಗಡೆ ಮಾಡಿದೆ. ಈ ಖಾತೆಗಳನ್ನು ನಿಷೇಧಿಸಿರುವ ಬಗ್ಗೆ  WhatsApp ಹೊಸ ವರದಿಯಲ್ಲಿ ಬಹಿರಂಗಪಡಿಸಿದೆ. ಅಕ್ಟೋಬರ್ 1 ಮತ್ತು ಅಕ್ಟೋಬರ್ 31 ರ ನಡುವೆ, ವಾಟ್ಸಾಪ್ ಒಟ್ಟು 23,24 ,000 WhatsApp ಖಾತೆಗಳನ್ನು ನಿಷೇಧಿಸಿರುವುದಾಗಿ ಹೇಳಿದೆ. ಈ ಪೈಕಿ 8,11,00 ಖಾತೆಗಳನ್ನು ಸಕ್ರಿಯ ಫಾರ್ಮ್‌ನಿಂದಲೇ ಹೊರಗಿಡಲಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.  


COMMERCIAL BREAK
SCROLL TO CONTINUE READING

ದೂರಿನ ಮೇರೆಗೆ ಕ್ರಮ  ಕೈಗೊಂಡಿರುವ ವಾಟ್ಸಾಪ್  : 
ಭಾರತದಲ್ಲಿ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ಪೈಕಿ 701 ದೂರುಗಳನ್ನು ಕಂಪನಿ ಸ್ವೀಕರಿಸಿದ್ದು, 34 ಪ್ರಕರಣಗಳ ವಿರುದ್ದ ಕ್ರಮ ಜರುಗಿಸಿದೆ. “ಐಟಿ ನಿಯಮ 2021 ರ ಪ್ರಕಾರ, ಅಕ್ಟೋಬರ್ 2022 ರ ವರದಿಯನ್ನು ಪ್ರಕಟಿಸಿರುವುದಾಗಿ ಕಂಪನಿ ಹೇಳಿದೆ.   ಇತ್ತೀಚಿನ ಮಾಸಿಕ ವರದಿಯಲ್ಲಿ ದಾಖಲಾಗಿರುವಂತೆ, ಅಕ್ಟೋಬರ್ ತಿಂಗಳಲ್ಲಿ WhatsApp 2.3 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ.


ಇದನ್ನೂ ಓದಿ : YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ


ಸುಧಾರಿತ ಐಟಿ ನಿಯಮ 2021 ರ ಅಡಿಯಲ್ಲಿ, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕಾಗುತ್ತದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟರ್ನೆಟ್‌ ಆಧಾರದ ಮೇಲೆ ಕಂಪನಿ ಕ್ರಮ ಕೈಗೊಳ್ಳುತ್ತಿದೆ.  'ಡಿಜಿಟಲ್ ನಾಗರಿಕರ' ಹಕ್ಕುಗಳನ್ನು ರಕ್ಷಿಸುವ ಸಲುವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕೆಲವು ತಿದ್ದುಪಡಿಗಳನ್ನು ಸೂಚಿಸಲಾಗಿದೆ.


ಈ ತಿದ್ದುಪಡಿಯ ಪ್ರಕಾರ ಕೆಲವೊಂದು ಕಂಟೆಂಟ್ ಗಳನ್ನು ಅಪ್‌ಲೋಡ್ ಮಾಡದಂತೆ ತಡೆಯುವ ಎಲ್ಲಾ ಪ್ರಯತನಗಳನು ನಡೆಸಲಾಗುತ್ತಿದೆ. ಕಾನುಉನು ಉಲ್ಲಂಘಿಸಿ ಅಪ್ ಲೋಡ್ ಆಗುವ ಕೆಲವು ವಿಷಯಗಳನ್ನು ತಡೆಯುವ ಉದ್ದೇಶದಿಂದ ವಾಟ್ಸಾಪ್  ಈ ಕ್ರಮ ಕೈಗೊಂಡಿದೆ. 
 
ಇದನ್ನೂ ಓದಿ : New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.