ನವದೆಹಲಿ: ಬಹುತೇಕ ಜನರು ಅರೆಕ್ಷಣವೂ ಬಿಟ್ಟಿರಲಾರದ ವಸ್ತು ಎಂದರೆ ಅದು ಫೋನ್. ಈ ದಿನಗಳಲ್ಲಿ ವಾಟ್ಸಾಪ್ ಜನರ ಜೀವನಾಡಿ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕವಾಗಿ ಮಾತ್ರವಲ್ಲ ಕಚೇರಿ ಕೆಲಸಗಳಿಗೂ ವಾಟ್ಸಾಪ್ ಅತ್ಯಗತ್ಯ.  ಆದರೆ ಇನ್ನೂ ಹಲವರಿಗೆ ವಾಟ್ಸಾಪ್‌ನಲ್ಲಿರುವ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ದಿನಗಳಲ್ಲಿ ಹೆಚ್ಚಿನ ಜನರು ಗೌಪ್ಯತೆಗಾಗಿ ವಾಟ್ಸಾಪ್ ಕರೆ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಅನೇಕ ಸಂದರ್ಭಗಳಲ್ಲಿ ವಾಟ್ಸಾಪ್ ಕರೆಯನ್ನು ರೆಕಾರ್ಡ್ ಮಾಡಲು ಬಯಸುತ್ತೀರಿ. ಆದರೆ ಹಲವರಿಗೆ ವಾಟ್ಸಾಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆಂದು ತಿಳಿದಿರುವುದಿಲ್ಲ. ಆದರೆ ವಾಟ್ಸಾಪ್ ಕರೆಗಳನ್ನು ಸಹ ರೆಕಾರ್ಡ್ ಮಾಡಬಹುದು. ಅದಕ್ಕಾಗಿ ಕೆಲವು ಸಿಂಪಲ್ ಟ್ರಿಕ್ ಗಳನ್ನು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

ಇತರ ಫೋನ್‌ನಿಂದ ರೆಕಾರ್ಡ್ ಮಾಡಬಹುದು:
ವಾಟ್ಸಾಪ್ (WhatsApp) ಕರೆಯನ್ನು ರೆಕಾರ್ಡ್ ಮಾಡಲು ಇದು ಮೊದಲ ಮಾರ್ಗವಾಗಿದೆ. ನಿಮ್ಮ ಫೋನ್‌ನಲ್ಲಿ ನೀವು ವಾಟ್ಸಾಪ್ ಕರೆಯನ್ನು ಸ್ಪೀಕರ್‌ಗೆ ಹಾಕಿ ಅದನ್ನು ಮತ್ತೊಂದು ಸ್ಮಾರ್ಟ್‌ಫೋನ್‌ನಿಂದ ರೆಕಾರ್ಡ್ ಮಾಡಬಹುದು. ಆದರೆ ಈ ರೀತಿಯಾಗಿ ರೆಕಾರ್ಡಿಂಗ್‌ನಲ್ಲಿನ ಧ್ವನಿ ಗುಣಮಟ್ಟ ಕಳಪೆಯಾಗಿರುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ - WhatsApp Businessನಲ್ಲಿ ಬಹು ಬೇಡಿಕೆಯ feature ಲಾಂಚ್


ಐಫೋನ್‌ನಲ್ಲಿ ವಾಟ್ಸಾಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ ?
ಅಂದಹಾಗೆ, ಆಪಲ್‌ನ ಐಫೋನ್‌ಗಳು (iPhone) ಈಗಾಗಲೇ ಸ್ಕ್ರೀನ್ ರೆಕಾರ್ಡರ್ ಅನ್ನು ಹೊಂದಿವೆ. ಆದರೆ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಈ ಆಯ್ಕೆಯು ಕಾರ್ಯನಿರ್ವಹಿಸುವುದಿಲ್ಲ. ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ನೀವು ಇನ್ನೊಂದು ವಿಧಾನವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಮ್ಯಾಕ್‌ಬುಕ್ (MacBook) ಸಹ ಬೇಕಾಗುತ್ತದೆ. ಲೈಟ್ನಿಂಗ್ ಕೇಬಲ್ ಸಹಾಯದಿಂದ ಮೊದಲು ನಿಮ್ಮ ಐಫೋನ್ ಅನ್ನು ಮ್ಯಾಕ್‌ಬುಕ್‌ಗೆ ಸಂಪರ್ಕಪಡಿಸಿ. ಬಳಿಕ ನೀವು ಅದರಲ್ಲಿ ಹೊಸ ಆಡಿಯೊ ರೆಕಾರ್ಡಿಂಗ್ ಫೈಲ್ ಅನ್ನು ತೆರೆಯಬೇಕಾಗಿದೆ. ನಂತರ ನೀವು ಯಾರ ಕರೆಯನ್ನು ರೆಕಾರ್ಡ್ ಮಾಡಲು ಬಯಸುವಿರೋ ಅವರಿಗೆ ವಾಟ್ಸಾಪ್ ಕರೆ ಮಾಡಿ. ಕರೆ ಸಂಪರ್ಕಗೊಂಡ ತಕ್ಷಣ, ನಿಮ್ಮ ಐಮ್ಯಾಕ್‌ನಿಂದ ರೆಕಾರ್ಡಿಂಗ್ ಬಟನ್ ಒತ್ತಿರಿ. ಆಗ ಅದರಲ್ಲಿ ಕರೆಯನ್ನು ರೆಕಾರ್ಡ್ ಮಾಡಬಹುದು.


ಇದನ್ನೂ ಓದಿ- WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ


ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್ ಕರೆಯನ್ನು ಹೇಗೆ ರೆಕಾರ್ಡ್ ಮಾಡುವುದು?
ಆದಾಗ್ಯೂ, ಐಫೋನ್‌ನಲ್ಲಿ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಸ್ವಲ್ಪ ಕಷ್ಟ. ಆದರೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇಂತಹ ಅನೇಕ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿವೆ, ಇದರ ಸಹಾಯದಿಂದ ನೀವು ವಾಟ್ಸಾಪ್ ಕರೆಗಳನ್ನು ಬಹಳ ಸುಲಭವಾಗಿ ರೆಕಾರ್ಡ್ ಮಾಡಬಹುದು. ನಿಮ್ಮ ಆಂಡ್ರಾಯ್ಡ್ ಫೋನ್‌ನಿಂದ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು, ಮೊದಲು ನೀವು ಕ್ಯೂಬ್ ಕಾಲ್ ರೆಕಾರ್ಡರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅಪ್ಲಿಕೇಶನ್ ತೆರೆಯಿರಿ ಮತ್ತು ಅದನ್ನು ಮಿನಿಮೈಜ್ ಮಾಡಿ ಬಳಿಕ  ವಾಟ್ಸಾಪ್ ಕರೆ ಮಾಡಿ. ಈ ಸಮಯದಲ್ಲಿ ನೀವು ಕ್ಯೂಬ್ ಕಾಲ್ ವಿಜೆಟ್ ಅನ್ನು ನೋಡಿದರೆ ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆ ಎಂದರ್ಥ. ನಿಮ್ಮ ಫೋನ್‌ನಲ್ಲಿ ದೋಷ ತೋರಿಸುತ್ತಿದ್ದರೆ, ಮತ್ತೊಮ್ಮೆ ನೀವು ಕ್ಯೂಬ್ ಕಾಲ್ ರೆಕಾರ್ಡರ್ ತೆರೆಯಿರಿ. ಈ ಸಮಯದಲ್ಲಿ ನೀವು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಧ್ವನಿ ಕರೆಯಲ್ಲಿ Force Voip ಕ್ಲಿಕ್ ಮಾಡಿ. ಈ ಸಂಪೂರ್ಣ ಪ್ರಕ್ರಿಯೆಯ ನಂತರ, ನೀವು ಮತ್ತೊಮ್ಮೆ ವಾಟ್ಸಾಪ್ ಕರೆ ಮಾಡಿ. ಇದರ ನಂತರವೂ ಕ್ಯೂಬ್ ಕಾಲ್ ರೆಕಾರ್ಡರ್ ಕಾಣದಿದ್ದರೆ, ಅದು ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದರ್ಥ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.