WhatsApp ತನ್ನ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಪಡೆದುಕೊಳ್ಳುವ ಅವಕಾಶ ನೀಡುತ್ತಿದೆ. ಹೌದು, ಭಾರತದಲ್ಲಿ ವಾಟ್ಸ್ ಆಪ್ ಬಳಕೆದಾರರಿಗೆ ರೂ.105 ಕ್ಯಾಶ್ ಬ್ಯಾಕ್ ಕೊಡುಗೆ ರೂಪದಲ್ಲಿ ಸಿಗುತ್ತಿದೆ. ಒಂದು ವೇಳೆ ನಿಮಗೂ ತಿಳಿದಿಲ್ಲ ಎಂದಾದರೆ, ಈ ತ್ವರಿತ ಸಂದೇಶ ರವಾನಿಸುವ ಆಪ್ ನಲ್ಲಿ ಬಳಕೆದಾರರು ಕೇವಲ ವಿಡಿಯೋ, ಸಂದೇಶ ಹಾಗೂ ವೈಸ್ ಕಾಲ್ ಮಾಡುವುದರ ಜೊತೆಗೆ ಹಣ ಪಾವತಿಯನ್ನು ಕೂಡ ಮಾಡಬಹುದು.


COMMERCIAL BREAK
SCROLL TO CONTINUE READING

ಭಾರತೀಯ ಬಳಕೆದಾರರನ್ನು ವಾಟ್ಸ್ ಆಪ್ ಪೇನತ್ತ ಆಕರ್ಷಿಸಲು ವಾಟ್ಸ್ ಆಪ್ ಈ ಹೆಜ್ಜೆಯನ್ನಿಟ್ಟಿದೆ. ಈ ಕ್ಯಾಶ್ ಬ್ಯಾಕ್ ಕೊಡುಗೆಯ ಲಾಭವನ್ನು ಹೇಗೆ ಪಡೆಯಬೇಕು ತಿಳಿದುಕೊಳ್ಳೋಣ ಬನ್ನಿ,


ವಾಟ್ಸ್ ಆಪ್ ಬಳಕೆದಾರರಿಗೆ ಈ ರೀತಿ ಕ್ಯಾಶ್ ಬ್ಯಾಕ್ ಸಿಗುತ್ತಿದೆ
ವಾಟ್ಸ್ ಆಪ್ ಪೇಮೆಂಟ್ ವೈಶಿಷ್ಟ್ಯವನ್ನು ಬಳಸಿ ಆನ್ಲೈನ್ ಪೇಮೆಂಟ್ ಮಾಡಿದರೆ ಬಳಕೆದಾರರಿಗೆ ಒಟ್ಟು 105 ರೂ. ಕ್ಯಾಶ್ ಬ್ಯಾಕ್ ಸಿಗುತ್ತಿದೆ. ಇದಲ್ಲದೆ ಮುಂದಿನ ಮೂರು ಪೇಮೆಂಟ್ ಗಳಿಗಾಗಿ ವಾಟ್ಸ್ ಆಪ್ ತಲಾ 35-35 ಕ್ಯಾಶ್ ಬ್ಯಾಕ್ ನೀಡುತ್ತಿದೆ. ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಲು ಪ್ರಸ್ತುತ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಅಂದರೆ ನೀವು 1 ರೂ. ವಾಟ್ಸ್ ಆಪ್ ಪೇ ಮೂಲಕ ಪಾವತಿಸಿ ರೂ.35 ಪಡೆಯಬಹುದು. ಆದರೆ, ಈ ಕೊಡುಗೆ ಕೇವಲ ಸೀಮಿತ ಸಮಯಕ್ಕೆ ಮತ್ತು ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ನೀವೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯ ಪೇಮೆಂಟ್ ಸೆಕ್ಷನ್ ಗೆ ಬೇಟಿ ನೀಡಿ ನಿಮಗೂ ಈ ಕ್ಯಾಶ್ ಬ್ಯಾಕ್ ಕೊಡುಗೆ ಅನ್ವಯಿಸುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು. 

ವಾಟ್ ಆಪ್ ಮೂಲಕ ಈ ರೀತಿ ಪೇಮೆಂಟ್ ಮಾಡಿ
>> ಇದಕ್ಕಾಗಿ ಮೊಟ್ಟಮೊದಲು ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯಬೇಕು.
>> ಬಳಿಕ ಬಲಭಾಗದಲ್ಲಿ ಎಲ್ಲಕ್ಕಿಂತ ಮೇಲೆ ನೀಡಲಾಗಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ಕಿಸಿ, ಅದರಲ್ಲಿನ ಪೇಮೆಂಟ್ಸ್ ಆಯ್ಕೆಯನ್ನು ಆಯ್ದುಕೊಳ್ಳಿ.
>> ಈಗ ನಿಮಗೆ ಆಡ್ ಪೇಮೆಂಟ್ ಮೆಥಡ್ ಕಾಣಿಸಿಕೊಳ್ಳಲಿದೆ ಮತ್ತು ಅದರ ಮೇಲೆ ಕ್ಲಿಕ್ಕಿಸಿ.
>> ಬಳಿಕ ಸ್ಕ್ರೀನ್ ಮೇಲೆ ಬಿತ್ತರಗೊಳ್ಳುವ ನೀತಿ-ನಿಯಮಗಳನ್ನು ನೀವು ಒಪ್ಪಿಕೊಳ್ಳಬೇಕು. 
>> ಈಗ ನಿಮ್ಮ ಮುಂದೆ ಬ್ಯಾಂಕ್ ಗಳ ಪಟ್ಟಿ ಪ್ರಕಟಗೊಳ್ಳಲಿದ್ದು, ಅದರಿಂದ ನೀವು ನಿಮ್ಮ ಬ್ಯಾಂಕ್ ಅನ್ನು ಆಯ್ದುಕೊಳ್ಳಬೇಕು.
>> ಬಳಿಕ ಖಾತೆ ನಿಮ್ಮ ಸ್ವಂತ ಖಾತೆಯಾಗಿದೆ ಎಂಬುದನ್ನು ನೀವು ಪುಷ್ಠಿಕರಿಸಬೇಕು. ಇದಕ್ಕಾಗಿ ನಿಮ್ಮ ಬಳಿ ಒಂದು ಸಂದೇಶ ಬರಲಿದ್ದು, ಆಪ್ ಗೆ ನೀವು ಇದಕ್ಕಾಗಿ ಅನುಮತಿ ನೀಡಬೇಕು.


ಇದನ್ನೂ ಓದಿ-Social Media Users Alert! ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

>> ಒಂದೇ ಫೋನ್ ಸಂಖ್ಯೆಗೆ ಹಲವು ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದರೂ ಕೂಡ ಎಲ್ಲಾ ಖಾತೆಗಳ ಲಿಸ್ಟ್ ನಿಮ್ಮ ಮುಂದೆ ಬಿತ್ತರಗೊಳ್ಳಲಿದೆ.
>> ಈಗ ನೀವು ನಿಮ್ಮ ಯಾವ ಖಾತೆಯನ್ನು ವಾಟ್ಸ್ ಆಪ್ ಪೇಗೆ ಜೋಡಿಸಲು ಬಯಸುತ್ತಿರುವಿರಿ ಎಂಬುದನ್ನು ಒಮ್ಮೆ ಖಚಿತಪಡಿಸಿ.
>> ಹಣವನ್ನು ಕಳುಹಿಸಲು ನೀವು ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ ಆರು ಅಂಕಿಗಳು ಹಾಗೂ ಕಾರ್ಡ್ ನಿಷ್ಕ್ರೀಯಗೊಳ್ಳುವ ದಿನಾಂಕವನ್ನು ನಮೂದಿಸಬೇಕು. 
>> ಇದಾದ ಬಳಿಕ ನೀವು UPI Pin ಸೆಟ್ ಮಾಡಬೇಕು. ಬಳಿಕ ನೀವು ಈ ಸೇವಯನ್ನು ಆನಂದಿಸಬಹುದು. 
>> ಈಗ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಯಾವುದೇ ವ್ಯಕ್ತಿಗೆ ಫೋಟೋ, ಸಂದೇಶ ಕಳುಹಿಸುವ ಹಾಗೆ ಹಣವನ್ನು ಕೂಡ ಕಳುಹಿಸಬಹುದು. 


ಇದನ್ನೂ ಓದಿ-Cheapest Recharge Plan: Airtel, Jio Or Vi: ನಿತ್ಯ ಡೇಟಾ ಲಿಮಿಟ್ ಖಾಲಿಯಾಯ್ತಾ? ಅತ್ಯಂತ ಅಗ್ಗದ ಬೆಲೆಯಲ್ಲಿ ಹೆಚ್ಚುವರಿ ಇಂಟರ್ನೆಟ್ ಈ ರೀತಿ ಪಡೆಯಿರಿ


ಇತ್ತೀಚೆಗಷ್ಟೇ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಈ ಹೊಸ ವೈಶಿಷ್ಟ್ಯ ಪರಿಚಯಿಸಿದೆ
ಕ್ಯಾಶ್ ಬ್ಯಾಕ್ ಕೊಡುಗೆ ಅಷ್ಟೇ ಅಲ್ಲ, ವಾಟ್ಸ್ ಆಪ್ ಇತ್ತೀಚಿಗೆ ತನ್ನ ಬಳಕೆದಾರಾರಿಗೆ ವಾಟ್ಸ್ ಆಪ್ ನ ಒಂದು ಗ್ರೂಪ್ ಚಾಟ್ ನಲ್ಲಿ 512 ಜನರನ್ನು ಸೇರಿಸುವ ಆಯ್ಕೆಯನ್ನು ನೀಡಿದೆ. ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ಒಂದು ವೇಳೆ ನಿಮ್ಮ ವಾಟ್ಸ್ ಆಪ್ ನಲ್ಲಿ ಕಾಣಿಸುತ್ತಿಲ್ಲ ಎಂದಾದಲ್ಲಿ ಚಿಂತಿಸುವ ಅವಶ್ಯಕತೆ ಇಲ್ಲ. 24 ಗಂಟೆಗಳೊಳಗೆ ನಿಮಗೆ ಈ ವೈಶಿಷ್ಟ್ಯ ಸಿಗಲಿದೆ. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.