ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ನಮ್ಮ ಜೀವನಶೈಲಿಯ ಒಂದು ಭಾಗವಾಗಿ ಪರಿಣಮಿಸಿವೆ. ಪ್ರತಿ ಸ್ಮಾರ್ಟ್ಫೋನ್ ಬಳಕೆದಾರರು ಒಂದಿಲ್ಲ ಒಂದು ಅಥವಾ ಅದಕ್ಕಿಂತ ಹೆಚ್ಚು ಸಾಮಾಜಿಕ ಮಾಧ್ಯಮ(ಗಳನ್ನು) ಬಳಸುತ್ತಿದ್ದಾರೆ. ನಾವು ಯಾವುದೇ ನಿರ್ಬಂಧವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಅಷ್ಟೇ ಅಲ್ಲ ನಮ್ಮಲ್ಲಿ ಹಲವು ಬಳಕೆದಾರರು ನಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂತೋಷವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ.
ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಫೋಟೋ, ವೀಡಿಯೊ ಹಾಗೂ ತಮ್ಮ ಆಲೋಚನೆಗಳನ್ನು ಅನುಯಾಯಿಗಳು ಮತ್ತು ಸ್ನೇಹಿತರೊಂದಿಗೆ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುತ್ತಾರೆ. ಅಷ್ಟೇ ಯಾಕೆ, ಬೇರೆ ಯಾವುದೇ ಬಳಕೆದಾರರು ಹಂಚಿಕೊಂಡ ಪೋಸ್ಟ್ ಇಷ್ಟವಾದರೂ ಕೂಡ ಅದನ್ನೂ ಕೂಡ ಹಂಚಿಕೊಳ್ಳುತ್ತಾರೆ.
ಆದರೆ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಖಾತೆಯನ್ನು ರಚಿಸುವುದು ಮತ್ತು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಎಷ್ಟು ಸುಲಭವೋ, ಅದನ್ನು ಸುರಕ್ಷಿತವಾಗಿ ಬಳಸುವುದು ಅಷ್ಟೇ ಕಷ್ಟ. ಹೊಸ ಬಳಕೆದಾರರು ಆಗಾಗ್ಗೆ ಇಂತಹ ಅನೇಕ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರ ವೈಯಕ್ತಿಕ ಮಾಹಿತಿಯು ಸಾರ್ವಜನಿಕವಾಗುತ್ತದೆ ಮತ್ತು ಸೈಬರ್ ಅಪರಾಧಿಗಳ ಕೈಗೆ ಬೀಳುತ್ತದೆ. ಇದೇ ವೇಳೆ ವೇದಿಕೆಯ ಹಳೆಯ ಬಳಕೆದಾರರು ತಿಳಿದೋ ಅಥವಾ ತಿಳಿಯದೆಯೋ ಅನೇಕ ತಪ್ಪುಗಳನ್ನು ಮಾಡುತ್ತಾರೆ, ಅವು ನಂತರ ಗಂಬೀರ ಪರಿಣಾಮಗಳಿಗೆ ಕಾರಣವಾಗುತ್ತವೆ.
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಸಾಮಾಜಿಕ ಮಾಧ್ಯಮವನ್ನು ಸುರಕ್ಷಿತವಾಗಿ ಬಳಸಲು 8 ಸಲಹೆಗಳನ್ನು ನೀಡಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸುರಕ್ಷಿತವಾಗಿ ಬಳಸಲು 8 ಸಲಹೆಗಳು
1. ಪಬ್ಲಿಕ್ ಸರ್ಚ್ ನಿಂದ ನಿಮ್ಮ ಪ್ರೊಫೈಲ್ ಅನ್ನು ನಿರ್ಬಂಧಿಸಿ, ಅಂದರೆ, ನಿಮ್ಮ ಯಾವುದೇ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಡಿ ಮತ್ತು ಸರ್ಚ್ ಎಂಜಿನ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿ.
2. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ಬಳಸಿದ ನಂತರ, ನಿಮ್ಮ ಪ್ರೊಫೈಲ್‌ನಿಂದ ಲಾಗ್ ಔಟ್ ಮಾಡಲು ಮರೆಯಬೇಡಿ, ಇದರಿಂದ ನಿಮ್ಮ ಪ್ರೊಫೈಲ್ ಅನ್ನು ಬೇರೆ ಯಾರೂ ಬಳಸಲಾಗುವುದಿಲ್ಲ. ಅಲ್ಲದೆ, ನಿಮ್ಮ ಖಾತೆ ಹ್ಯಾಕ್ ಆಗುವ ಅಪಾಯವಿರುವುದಿಲ್ಲ.
3. ನಿಮ್ಮ ಸಾಮಾಜಿಕ ಮಾಧ್ಯಮದ ಕ್ರೆಡೆನ್ಸಿಯಲ್ ಗಳನ್ನು ಅಂದರೆ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
4. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪರಿಚಿತ ಬಳಕೆದಾರರ ಫ್ರೆಂಡ್ ರಿಕ್ವೆಸ್ಟ್ ಎಂದಿಗೂ ಸ್ವೀಕರಿಸಬೇಡಿ. ಆ ಬಳಕೆದಾರರ ಬಗ್ಗೆ ನಿಮಗೆ ಮೊದಲೇ ತಿಳಿದಿದ್ದರೆ ಕೇವಲ ಅಂತಹ ಬಳಕೆದಾರರ ಸ್ನೇಹ ವಿನಂತಿಯನ್ನು ಮಾತ್ರ ಸ್ವೀಕರಿಸಿ.
5. ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ನಿಮ್ಮ ಮನೆ ಮತ್ತು ಕಚೇರಿ ವಿಳಾಸ ಮತ್ತು ಸ್ಥಳವನ್ನು ಎಂದಿಗೂ ಹಂಚಿಕೊಳ್ಳಬೇಡಿ.
6. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮಗೆ ಕಳುಹಿಸಲಾದ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಕ್ರೆಡೆನ್ಸಿಯಲ್ ಗಳನ್ನು ಸೈಬರ್ ಅಪರಾಧಿಗಳ ಕೈಸೇರಬಹುದು ಮತ್ತು ನಿಮ್ಮ ಖಾತೆಯನ್ನು ಹ್ಯಾಕ್ ಅವರು ಮಾಡಬಹುದು.
7. ನೀವು ಬಳಸುತ್ತಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಗೌಪ್ಯತಾ ಸೆಟ್ಟಿಂಗ್‌ಗಳನ್ನು ಉನ್ನತ ಮಟ್ಟಕ್ಕೆ ಅಥವಾ ನಿರ್ಬಂಧಿತ ಮಟ್ಟಕ್ಕೆ ಹೊಂದಿಸಿ, ಇದರಿಂದ ನಿಮ್ಮ ವಿವರಗಳು ಸಾರ್ವಜನಿಕವಾಗುವುದಿಲ್ಲ ಮತ್ತು ಯಾರೂ ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು ಇದರಿಂದ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ-UPI ಸೇವೆ ಪ್ರಾರಂಭಿಸಿದ Xpay life ಸಂಸ್ಥೆಗೆ 3ನೇ ವಾರ್ಷಿಕೋತ್ಸವದ ಸಂಭ್ರಮ
8. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಛಾಯಾಚಿತ್ರ, ಸ್ಥಿತಿ ಅಥವಾ ಕಾಮೆಂಟ್ ಅನ್ನು ಹಂಚಿಕೊಳ್ಳುವ ಮೊದಲು, ಪ್ರತಿಯೊಂದು ಸಣ್ಣ ವಿಷಯವನ್ನು ಗಮನಿಸಿ, ಇದರಿಂದ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯು ಆಕಸ್ಮಿಕವಾಗಿ ಇತರ ಬಳಕೆದಾರರ ಕೈಗೆ ಬೀಳುವುದಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.