WhatsApp Channels: ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಮೆಟಾ ಕಂಪನಿಯು ವಾಟ್ಸಾಪ್ ಚಾನೆಲ್‌ಗಳನ್ನು ಆರಂಭಿಸಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್ ಚಾನೆಲ್‌ಗಳನ್ನು ಘೋಷಿಸಿದ್ದು, ಬಳಕೆದಾರರು ಹೊಚ್ಚ ಹೊಸ ನವೀಕರಣಗಳನ್ನು ಪಡೆಯಲು ಇದು ಖಾಸಗಿ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ವಾಟ್ಸಾಪ್ ಚಾನೆಲ್‌ಗಳು ವಾಟ್ಸಾಪ್ ಚಾಟ್‌ಗಳಿಂದ ಪ್ರತ್ಯೇಕವಾಗಿರುತ್ತವೆ ಎಂದವರು ಸ್ಪಷ್ಟಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನು ವಾಟ್ಸಾಪ್ ಚಾನೆಲ್‌ಗಳನ್ನು ಘೋಷಿಸುವಾಗ ಮಾತನಾಡಿರುವ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ನಿಮ್ಮೆಲ್ಲರನ್ನೂ ವಾಟ್ಸಾಪ್ ಚಾನೆಲ್‌ಗಳಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ವಾಟ್ಸಾಪ್ ಚಾನೆಲ್‌ಗಳು ನೀವು ಅನುಸರಿಸುವ ಜನರು ಮತ್ತು ಸಂಸ್ಥೆಗಳಿಂದ ನವೀಕರಣಗಳನ್ನು ಪಡೆಯಲು ಹೊಸ ಖಾಸಗಿ ಮಾರ್ಗವಾಗಿದೆ. ಮೆಟಾ ಸುದ್ದಿ ಮತ್ತು ನವೀಕರಣಗಳನ್ನು ಹಂಚಿಕೊಳ್ಳಲು ನಾನು ಈ ಚಾನಲ್ ಅನ್ನು ಪ್ರಾರಂಭಿಸುತ್ತಿದ್ದೇನೆ. ಪ್ರಪಂಚದಾದ್ಯಂತ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಎದುರುನೋಡುತ್ತಿದ್ದೇನೆ ಎಂದು ತಿಳಿಸಿದರು. 


ವಾಟ್ಸಾಪ್ ಚಾನೆಲ್‌ಗಳೊಂದಿಗೆ, ಲಭ್ಯವಿರುವ ಅತ್ಯಂತ ಖಾಸಗಿ ಪ್ರಸಾರ ಸೇವೆಯನ್ನು ನಿರ್ಮಿಸುವುದು ವಾಟ್ಸಾಪ್‌ನ ಗುರಿಯಾಗಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಚಾನೆಲ್‌ಗಳು ಚಾಟ್‌ಗಳಿಂದ ಪ್ರತ್ಯೇಕವಾಗಿರುತ್ತವೆ ಮತ್ತು ನೀವು ಯಾರನ್ನು ಅನುಸರಿಸಲು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಇತರ ಅನುಯಾಯಿಗಳಿಗೆ ಗೋಚರಿಸುವುದಿಲ್ಲ. "ನಾವು ನಿರ್ವಾಹಕರು ಮತ್ತು ಅನುಯಾಯಿಗಳ ವೈಯಕ್ತಿಕ ಮಾಹಿತಿಯನ್ನು ಸಹ ರಕ್ಷಿಸುತ್ತೇವೆ" ಎಂದು ಹೇಳಿಕೆ ತಿಳಿಸಿದೆ.


ಇದನ್ನೂ ಓದಿ- iPhone 15 ಬಿಡುಗಡೆ ಬೆನ್ನಲ್ಲೇ iPhone 14 ಬೆಲೆಯಲ್ಲಿ ಭಾರೀ ಕಡಿತ ಘೋಷಿಸಿದ ಆಪಲ್


ನೀವೂ ವಾಟ್ಸಾಪ್ ಚಾನೆಲ್‌ಗಳನ್ನು ಬಳಸಲು ಉತ್ಸುಕರಾಗಿದ್ದರೆ ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ: 
ವಾಟ್ಸಾಪ್ ಚಾನೆಲ್‌ನಲ್ಲಿ ನವೀಕರಣಗಳು ಎಂಬ ಹೊಸ ಟ್ಯಾಬ್‌ನಲ್ಲಿ ಚಾನಲ್‌ಗಳನ್ನು ಕಾಣಬಹುದು ಮತ್ತು ಇದರ ಅಡಿಯಲ್ಲಿ ಬಳಕೆದಾರರು ತಾವು ಅನುಸರಿಸಲು ಬಯಸುವ  ಚಾನಲ್‌ಗಳನ್ನು ಕಾಣಬಹುದು. 


ವಾಟ್ಸಾಪ್ ಚಾನೆಲ್‌ಗಳನ್ನು ಹೇಗೆ ಬಳಸುವುದು? 
Step 1: 

ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ / ಆಪಲ್ ಪ್ಲೇ ಸ್ಟೋರ್ ಗೆ ಹೋಗಿ ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ನವೀಕರಿಸಿ. 


Step 2: 
ನಂತರ ವಾಟ್ಸಾಪ್ ತೆರೆಯಿರಿ. ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಲಭ್ಯವಿರುವ ನವೀಕರಣಗಳ ಟ್ಯಾಬ್ ಅನ್ನು ಟ್ಯಾಪ್ ಮಾಡಿ ಅದರಲ್ಲಿ ಲಭ್ಯವಿರುವ ಪಟ್ಟಿಯಲ್ಲಿ ನಿಮಗಿಷ್ಟವಾದ ಚಾನೆಲ್‌ಗಳನ್ನು ಫಾಲೋ ಮಾಡಿ. 


Step 3: 
ನೀವೂ ಯಾವುದೇ ಚಾನೆಲ್ ಅನ್ನು ಫಾಲೋ ಮಾಡಲು ಅದರ ಹೆಸರಿನ ಮುಂದಿರುವ '+' ಬಟನ್ ಅನ್ನು ಟ್ಯಾಪ್ ಮಾಡಿ. ಪ್ರೊಫೈಲ್ ಮತ್ತು ವಿವರಣೆಯನ್ನು ವೀಕ್ಷಿಸಲು, ನೀವು ಕೇವಲ ಚಾನಲ್ ಹೆಸರನ್ನು ಟ್ಯಾಪ್ ಮಾಡಬಹುದು.


Step 4: 
ಚಾನಲ್ ಅಪ್‌ಡೇಟ್‌ಗೆ ಪ್ರತಿಕ್ರಿಯೆಯನ್ನು ಸೇರಿಸಲು ಮೆಸೇಜ್ ಅನ್ನು ಲಾಂಗ್ ಫ್ರೇಶ್ ಮಾಡಿ. 


ಇದನ್ನೂ ಓದಿ- WhatsApp ಪಿನ್ ಮರೆತಿದ್ದೀರಾ? ಇಲ್ಲಿದೆ ಪರಿಹಾರ


ಮೆಟಾ ಕಂಪನಿಯ ಮೂಲಗಳಿಂದ ದೊರೆತಿರುವ ಮಾಹಿತಿಯ ಪ್ರಕಾರ, ದೇಶವನ್ನು ಆಧರಿಸಿ, ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಲಾದ ಚಾನಲ್‌ಗಳನ್ನು ಅನುಸರಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಒಂದೊಮ್ಮೆ ಬಳಕೆದಾರರು ಹೊಸ ಹೆಚ್ಚು ಸಕ್ರಿಯಾದ ಜನಪ್ರಿಯವಾಗಿರುವ ಚಾನಲ್‌ಗಳನ್ನು ವೀಕ್ಷಿಸಲು ಬಯಸಿದರೆ ಅದೂ ಕೂಡ ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.