iPhone 14 Price Drop: ಬಹು ನಿರೀಕ್ಷಿತ ಆಪಲ್ ಐಫೋನ್ 15 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಬೆನ್ನಲ್ಲೇ ಆಪಲ್ ಕಂಪನಿ ತನ್ನ ಬಹು ಬೇಡಿಕೆಯ ಐಫೋನ್ 14ರ ಬೆಲೆಯಲ್ಲಿ ಭರ್ಜರಿ ಕಡಿತವನ್ನು ಘೋಷಿಸಿದೆ. ಆಪಲ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು ಆಪಲ್ ಐಫೋನ್ 14ರ ಬೆಲೆಯಲ್ಲಿ ಬರೋಬ್ಬರಿ ಹತ್ತು ಸಾವಿರ ರೂಪಾಯಿಗಳನ್ನು ಕಡಿಮೆ ಮಾಡಿರುವುದಾಗಿ ತಿಳಿಸಿದೆ.
ಆಪಲ್ ಕಂಪನಿಯು ತನ್ನ Apple iPhone 14 Pro ಮತ್ತು Plus ಜೊತೆಗೆ Apple iPhone 14 ಅನ್ನು ಕಳೆದ ವರ್ಷ 79,900ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತ್ತು. ಆದರೀಗ ಟೆಕ್ ದೈತ್ಯ ಆಪಲ್ ತನ್ನ ಐಫೋನ್ 14ರ ಬೆಲೆಯಲ್ಲಿ 10,000 ರೂ. ಕಡಿಮೆ ಮಾಡಿದ್ದು ಪ್ರಸ್ತುತ ಆಪಲ್ನ ಅಧಿಕೃತ ಅಂಗಡಿಯಲ್ಲಿ ಗ್ರಾಹಕರು ಈ ಫೋನ್ ಅನ್ನು 69,900 ರೂ. ಗಳಿಗೆ ಖರೀದಿಸಬಹುದಾಗಿದೆ. Apple iPhone 14 ನ 256GB ಮತ್ತು 512GB ಸ್ಟೋರೇಜ್ ರೂಪಾಂತರಗಳು ಈಗ ಕ್ರಮವಾಗಿ 79,900 ಮತ್ತು 99,900 ರೂ.ಗಳಿಗೆ ಲಭ್ಯವಾಗಲಿವೆ.
ಇದನ್ನೂ ಓದಿ- ಫ್ಲಿಪ್ಕಾರ್ಟ್ನಿಂದ OnePlus 11 5G ಸ್ಮಾರ್ಟ್ಫೋನ್ ಬುಕ್ ಮಾಡಿದ್ದ ಗ್ರಾಹಕನಿಗೆ ಶಾಕ್
ಇನ್ನೂ ಇದರ ಜೊತೆಗೆ 54,900 ರೂ.ಗಿಂತ ಹೆಚ್ಚಿನ ಆರ್ಡರ್ಗಳಲ್ಲಿ ಅರ್ಹ ಗ್ರಾಹಕರಿಗೆ ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳೊಂದಿಗೆ 8,000 ರೂ.ವರೆಗೆ ತ್ವರಿತ ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ. ಇದಲ್ಲದೆ ಪ್ರಮುಖ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳೊಂದಿಗೆ ಐಫೋನ್ ಖರೀದಿಸುವ ಗ್ರಾಹಕರಿಗೆ 6 ತಿಂಗಳ ಕಾಲ ನೋ ಕಾಸ್ಟ್ ಇಎಂಐ ಪ್ರಯೋಜನವೂ ಸಿಗಲಿದೆ.
ಇದನ್ನೂ ಓದಿ- WhatsApp ಪಿನ್ ಮರೆತಿದ್ದೀರಾ? ಇಲ್ಲಿದೆ ಪರಿಹಾರ
Apple iPhone 14 Plus ಫೋನ್ ದೊಡ್ಡ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ ಆಪಲ್ನ ಶಕ್ತಿಯುತ A15 ಬಯೋನಿಕ್ ಚಿಪ್ಸೆಟ್ನಿಂದ ಚಾಲಿತವಾಗಿದೆ ಮತ್ತು iOS 16 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹ್ಯಾಂಡ್ಸೆಟ್ 128GB, 256GB ಮತ್ತು 512GB ಮೂರು ಶೇಖರಣಾ ಆಯ್ಕೆಗಳಲ್ಲಿ ಲಭ್ಯವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.