ನವದೆಹಲಿ: Modi Governments Sandes App - ಇತ್ತೀಚಿಗೆ  ಸರ್ಕಾರ ಮತ್ತು ಸಾಮಾನ್ಯ ಬಳಕೆದಾರರು ಡೇಟಾ ಗೌಪ್ಯತೆಯ ಬಗ್ಗೆ ಭಾರಿ ಚಿಂತಿತರಾಗಿದ್ದಾರೆ. ಒಂದೆಡೆ, ವಾಟ್ಸಾಪ್ನ ಹೊಸ ಗೌಪ್ಯತಾ ನೀತಿ  ಸಾಮಾನ್ಯ ಬಳಕೆದಾರರನ್ನು ಕೆರಳಿಸಿದ್ದರೆ, ಇನ್ನೊಂದೆಡೆ ಸರ್ಕಾರವು ಕೂಡ ತನ್ನವತಿಯಿಂದ ಇದಕ್ಕೆ ಪರಿಹಾರ ಸಿದ್ಧಪಡಿಸಿದೆ. ಮೋದಿ ಸರ್ಕಾರ ದೇಶಕ್ಕಾಗಿ ತನ್ನ ನೂತನ ಮೆಸೇಜಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ಗಳನ್ನು ಪ್ರಸ್ತುತ ಸರ್ಕಾರಿ ನೌಕರರು ಬಳಸುತ್ತಿದ್ದಾರೆ. ಆದರೆ ಶೀಘ್ರದಲ್ಲೇ ಇದನ್ನು ಸಾಮಾನ್ಯ ಬಳಕೆದಾರರಿಗಾಗಿ ಪ್ರಾರಂಭಿಸಲಾಗುವುದು ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಬಿಡುಗಡೆಯಾದ 'Sandes' ಆಪ್ 
ದತಾಂಶ ಕಳ್ಳತನ ಹಾಗೂ ಪ್ರವೆಸಿಯ ಹಿನ್ನೆಲೆ ಕೇಂದ್ರ ಸರ್ಕಾರ ನೂತನ Sandes App ಬಿಡುಗಡೆಗೊಳಿಸಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇದೊಂದು ಇನ್ಸ್ಟೆಂಟ್ ಮೆಸ್ಸೇಜಿಂಗ್ ಆಪ್ ಆಗಿದ್ದು, ಪ್ರಸ್ತುತ ಇದನ್ನು ಕೇವಲ ಸರ್ಕಾರಿ ನೌಕರರ ಬಳಕೆಗಾಗಿ ಬಿಡುಗಡೆ ಮಾಡಲಾಗಿದೆGovernment Instant Messaging Systam (GIMS)  ಎಂದೂ ಕೂಡ ಕರೆಯಲಾಗುತ್ತಿದೆ.


ಇದನ್ನು ಓದಿ-Fact Check: 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 1 ಲಕ್ಷ ರೂ.! ನಿಜಾನಾ?


ಪ್ರಸ್ತುತ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಎಕ್ಸಸ್ ನೀಡಲಾಗಿದೆ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಈ ನೂತನ ಅಪ್ಪ್ಲಿಕೆಶನ್ ಅನ್ನು gims.gov.in ನಿಂದ ಎಕ್ಸಸ್ ಮಾಡಬಹುದು. ಆದರೆ, ಪ್ರಸ್ತುತ ಜನಸಾಮಾನ್ಯರಿಗೆ ಈ ಆಪ್ ಬಳಕೆ ಮಾಡಲು ಅನುಮತಿ ನೀಡಲಾಗಿಲ್ಲ. ಒಂದು ವೇಳೆ ಯಾರಾದರು ಸೈಟ್ ಮೇಲೆ ಈ ಕುರಿತಾದ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಅವರಿಗೆ  'This authentication method is applicable for authorised government officials'ಸಂದೇಶ ಕಾಣಿಸಿಕೊಳ್ಳಲಿದೆ.


ಇದನ್ನು ಓದಿ- Budget 2021: Defence Budget- ಸತತ 7ನೇ ಬಾರಿಗೆ ರಕ್ಷಣಾ ಬಜೆಟ್ ನಲ್ಲಿ ಹೆಚ್ಚಳ


ಕಳೆದ ಕೆಲ ವರ್ಷಗಳಲ್ಲಿ ದತ್ತಾಂಶ ಕಳ್ಳತನದ ಕುರಿತು ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ ಕೇಂದ್ರ ಸರ್ಕಾರ ಎಲ್ಲಾ ಇಂಟರ್ನೆಟ್ ಕಂಪನಿಗಳಿಗೆ ಭಾರತದಲ್ಲಿಯೇ ಸರ್ವರ್ ಸ್ಥಾಪಿಸುವಂತೆ ಕೇಳಿಕೊಳ್ಳುತ್ತಿದೆ. ಆದರೆ, ಯಾವುದೇ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳು ಇದುವರೆಗೆ ಹೇಳಿಕೊಳ್ಳುವ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರ (Modi Government) ದತ್ತಾಂಶಗಳ ಕುರಿತು ಭಾರಿ ಗಂಭೀರವಾಗಿದೆ.


ಇದನ್ನು ಓದಿ- Data Leak - Airtel Network ಭೇದಿಸಿ ಸೇನಾ ಆರ್ಮಿ ಜವಾನರ ದತ್ತಾಂಶಕ್ಕೆ ಕನ್ನ, ಹ್ಯಾಕರ್ ಕೈಸೇರಿದ ದೇಶಾದ್ಯಂತದ ಚಂದಾದಾರರ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.