WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?
WhatsApp - ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
WhatsApp - ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು (WhatsApp New Feature) ಬಿಡುಗಡೆ ಮಾಡಿದೆ. ಕಂಪನಿಯು ಬಿಡುಗಡೆ ಮಾಡಿದ ನವೀಕರಣದ ನಂತರ, ಈಗ ಫೋಟೋಗಳು ಮತ್ತು ವೀಡಿಯೊಗಳು ವಾಟ್ಸಾಪ್ ಚಾಟ್‌ನಲ್ಲಿ ಮೊದಲಿಗಿಂತ ದೊಡ್ಡದಾಗಿ ಕಾನಿಸಲಿವೆ. ಕಂಪನಿಯು ಟ್ವೀಟ್ ಮೂಲಕಈ ವೈಶಿಷ್ಟ್ಯವನ್ನು ಘೋಷಿಸಿದೆ, ಜೊತೆಗೆ ಈ ಹೊಸ ವೈಶಿಷ್ಟ್ಯವು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಉದಾಹರಣೆ ಕೂಡ ನೀಡಿದೆ.
ಗೂಗಲ್ ಫೋಟೋದಲ್ಲಿ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್ ಮಾಡಿಕೊಳ್ಳುವುದು ಹೇಗೆ ತಿಳಿಯಿರಿಫೋಟೋ ಹೊರತುಪಡಿಸಿ, ವಿಡಿಯೋಗಳಿಗೂ ಕೂಡ ಈ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಇದು ವಾಟ್ಸ್ ಆಪ್ ನ ಅತಿ ದೊಡ್ಡ ಬದಲಾವಣೆಯಲ್ಲದಿದ್ದರು ಕೂಡ ನಿಮ್ಮ ಕೆಲಸಕ್ಕೆ ಬರುವ ವೈಶಿಷ್ಟ್ಯ (Whatsap Latest News) ಇದಾಗಿದೆ. ಇದಕ್ಕೂ ಮೊದಲು ವಾಟ್ಸ್ ಆಪ್ ಈ ವೈಶಿಷ್ಟ್ಯ ವನ್ನು iOS ಬಳಕೆದಾರರಿಗಾಗಿ ಕಳೆದ ತಿಂಗಳು ಆಪ್ ಸ್ಟೋರ್ ಮೇಲೆ ಅಪ್ಡೇಟ್ ವರ್ಶನ್ 2.21.71ರಲ್ಲಿ ಪರಿಚಯಿಸಿದೆ. ಆದರೆ, ಇದೀಗ ಈ ವೈಶಿಷ್ಟ್ಯ ಎಲ್ಲ ವಾಟ್ಸ್ ಆಪ್ ಬಳಕೆದಾರರಿಗೆ ರೋಲ್ ಔಟ್ ಮಾಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ಗೆಲಾಕ್ಸಿ ಬುಕ್ ಪ್ರೊ ಸೀರಿಸ್ Laptop ಲಾಂಚ್ ಮಾಡಿದ Samsung
Twitter ಕೂಡ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ
ಇತ್ತೀಚೆಗಷ್ಟೇ ಟ್ವಿಟ್ಟರ್ ಕೂಡ ತನ್ನ ಟೈಮ್ ಲೈನ್ ಮೇಲೆ ಫುಲ್ ವ್ಯೂ ಫೋಟೋ ಟೆಸ್ಟಿಂಗ್ ಆರಂಭಿಸಿದೆ. ಪ್ರಸ್ತುತ ಟ್ವಿಟ್ಟರ್ ಮೇಲೆ ಪೋಸ್ಟ್ ಮಾಡಲಾಗುವ ಫೋಟೋಗಳು ಕೇವಲ ಅರ್ಧದಷ್ಟು ಮಾತ್ರ ಕಾಣಿಸುತ್ತವೆ. ಸಂಪೂರ್ಣ ಫೋಟೋ ವಿಕ್ಷೀಸಲು ಬಳಕೆದಾರರು ಫೋಟೋ ಮೇಲೆ ಕ್ಲಿಕ್ಕಿಸಬೇಕಾಗುತ್ತದೆ. ಹೊಸ ಬದಲಾವಣೆಯ ಬಳಿದ ಟ್ವೀಟ್ ಕಂಪೋಸ್ ಮಾಡುವಾಗ ಯಾವ ಆಕಾರದ ಫೋಟೋ ಇರಲಿದೆಯೋ ಅದೇ ಆಕಾರದ ಫೋಟೋ ಟ್ವೀಟ್ ಗಳಲ್ಲಿ ಕಾಣಿಸಲಿದೆ.
ಇದನ್ನೂ ಓದಿ- Internet Speed: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.