ನವದೆಹಲಿ: ತ್ವರಿತ ಸಂದೇಶ ಸೇವೆ ಒದಗಿಸುವ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಸುಧಾರಿಸಲು ನವೀಕರಣಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತದೆ. ವೆಬ್ ಆವೃತ್ತಿಯಿಂದ ಅಂದರೆ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ನಿಂದಲೂ ವಾಟ್ಸಾಪ್ (Whatsapp) ಧ್ವನಿ ಮತ್ತು ವಿಡಿಯೋ ಕರೆಗಳನ್ನು ಪ್ರಾರಂಭಿಸಲಿದೆ ಎಂಬ ಸುದ್ದಿ ಬರುತ್ತಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಈ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ವೆಬ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ವಾಟ್ಸಾಪ್‌ನ ಹೊಸ ವೈಶಿಷ್ಟ್ಯಗಳ ಮೇಲೆ ನಿಗಾ ಇಡುವ WABetainfo ವೆಬ್‌ಸೈಟ್‌ನ ವರದಿಯ ಪ್ರಕಾರ ಕಂಪನಿಯು ಧ್ವನಿ ಮತ್ತು ವಿಡಿಯೋ ಕರೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವನ್ನು ಪರೀಕ್ಷಿಸಲು ವಾಟ್ಸಾಪ್ ಆಯ್ದ ಬಳಕೆದಾರರಿಗೆ ಸೌಲಭ್ಯವನ್ನು ನೀಡಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಸಿಕೊಂಡು ಹೊಸ ವಾಟ್ಸಾಪ್ ಬೀಟಾ ಆವೃತ್ತಿಯನ್ನು ತೋರಿಸಲಾಗಿದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯ ಮುಂದಿನ ಕೆಲವು ವಾರಗಳಲ್ಲಿ ವಾಟ್ಸಾಪ್ ವೆಬ್‌ಗಾಗಿ ಧ್ವನಿ ಮತ್ತು ವೀಡಿಯೊ ಕರೆ ಮಾಡುವ ಆಯ್ಕೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.


WhatsApp ಕರೆಗಳನ್ನೂ ಸಹ ರೆಕಾರ್ಡ್ ಮಾಡಬಹುದು, ಅದಕ್ಕಾಗಿ ಈ ಟ್ರಿಕ್ ಅಳವಡಿಸಿಕೊಳ್ಳಿ


ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ವೈಶಿಷ್ಟ್ಯದ ಅಡಿಯಲ್ಲಿ ನೀವು ವಾಟ್ಸಾಪ್ನಲ್ಲಿ ಒಳಬರುವ ಕರೆಗಳಿಗಾಗಿ ಪ್ರತ್ಯೇಕ ವಿಂಡೋವನ್ನು ಪಡೆಯುತ್ತೀರಿ, ಅಲ್ಲಿಂದ ನೀವು ಕರೆಗಳನ್ನು ಮಾಡಬಹುದು. ನೀವು ವಾಟ್ಸಾಪ್ ವೆಬ್‌ನಿಂದ ಕರೆ ಮಾಡಿದಾಗ ತೆರೆಯುವ ವಿಂಡೋ ಸ್ವೀಕರಿಸುವ ವಿಂಡೋಗಿಂತ ಭಿನ್ನವಾಗಿರುತ್ತದೆ. ಪ್ರಸ್ತುತ ಇದು ಗುಂಪು ಕರೆಗಳ ವೈಶಿಷ್ಟ್ಯವನ್ನು ಹೊಂದಿಲ್ಲ, ಆದರೆ ಈ ವೈಶಿಷ್ಟ್ಯವು ಮುಂಬರುವ ಸಮಯದಲ್ಲಿ ಬರಬಹುದು ಎನ್ನಲಾಗಿದೆ.


ಚಾಟ್ ತೆರೆಯದೆಯೇ ಓದಿರಿ WhatsApp ಮೆಸೇಜ್, ಇಲ್ಲಿದೆ ಸುಲಭ ಟ್ರಿಕ್


ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್ ಬಳಕೆದಾರ ಸ್ನೇಹಿಯಾಗಿರಲು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದೆ. ಬೀಟಾ ಆವೃತ್ತಿಯಲ್ಲಿ ಅನೇಕ ಹೊಸ ವೈಶಿಷ್ಟ್ಯಗಳು ಲಭ್ಯವಾಗಿವೆ. ವೈಶಿಷ್ಟ್ಯವು ಯಾವುದೇ ತೊಂದರೆಗಳಿಲ್ಲದೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದನ್ನು ಮುಂದಿನ ಆವೃತ್ತಿಯಲ್ಲಿ ನವೀಕರಿಸಲಾಗುತ್ತದೆ ಎಂದು ತಿಳಿದು ಬಂದಿದೆ.