Elon Musk About WhatsApp: ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್ ಮಾಲೀಕರಾಗಿರುವ ಎಲಾನ್ ಮಸ್ಕ್ ಸಾಕಷ್ಟು ಹೆಡ್ಲೈನ್ ಗಿಟ್ಟಿಸುತ್ತಿದ್ದಾರೆ, ಇದಕ್ಕೆ ಕಾರಣ ಎಂದರೆ ಅವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ಎಂದರೆ ತಪ್ಪಾಗಲಾರದು. ಇದೀಗ ವಾಟ್ಸಾಪ್ ಕುರಿತು  ಮಸ್ಕ್ ನೀಡಿರುವ  ಹೇಳಿಕೆಯು ಇದೀಗ ವಾಟ್ಸಾಪ್ ಬಳಕೆದಾರರಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ ಮತ್ತು ಎಲ್ಲರೂ ಇದೀಗ ಮಸ್ಕ್ ಅವರ ಹೇಳಿಕೆಯ ಕುರಿತು ಭಾರಿ ಚರ್ಚೆ ನಡೆಸುತ್ತಿದ್ದಾರೆ. ಟ್ವಿಟರ್ ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವರೊಬ್ಬರು ವಾಟ್ಸಾಪ್‌ನಲ್ಲಿನ ಬಗ್ ಅಂದರೆ ದೋಷದ ಕುರಿತು ಟ್ವೀಟ್ ಮೂಲಕ ತಿಳಿಯಪಡಿಸಿದ್ದಾರೆ Foad Dabiri ಎಂಬ ವ್ಯಕ್ತಿ ತನ್ನ ಟ್ವೀಟ್‌ನಲ್ಲಿ, "WhatsApp ಬ್ಯಾಕ್ ಗ್ರೌಂಡ್ ನಲ್ಲಿ  ಮೈಕ್ರೊಫೋನ್ ಬಳಸುತ್ತಿದೆ, ಇದು ನಾನು ಮಲಗಿದ್ದಾಗ ಮತ್ತು ನಾನು ಬೆಳಗ್ಗೆ 6 ಗಂಟೆಗೆ ಎಚ್ಚೆತ್ತುಕೊಳ್ಳುವವರೆಗೆ ಇದು ಸಂಭವಿಸಿದೆ. (ಮತ್ತು ಇದು ಟೈಮ್‌ಲೈನ್ ನ ಒಂದು ಭಾಗವಾಗಿದೆ!)  ನಡೆಯುತ್ತಿರುವುದಾದರೂ ಏನು?" ಎಂದು ಪ್ರಶ್ನಿಸಿದ್ದರು. ಈ ವ್ಯಕ್ತಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, "WhatsApp ಅನ್ನು ನಂಬಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

whatsapp ನ ಈ 'ಸಮಸ್ಯೆ' ಏನು?
ವಾಟ್ಸಾಪ್‌ಗಾಗಿ ಮೈಕ್ರೊಫೋನ್ ಪ್ರವೇಶ ಆನ್ ಆಗಿದೆ ಎಂದು ತೋರಿಸುವ ಆಂಡ್ರಾಯ್ಡ್ ಡ್ಯಾಶ್‌ಬೋರ್ಡ್‌ನ ಸ್ಕ್ರೀನ್‌ಶಾಟ್ ಅನ್ನು ಡಬಿರಿ ಹಂಚಿಕೊಂಡಿದ್ದಾರೆ. ವಾಟ್ಸ್ ಆಪ್ ನ ಬಳಕೆ ಇಲ್ಲದ ವೇಳೆ  ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸುವಂತಿದೆ. ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಅನುಮತಿಸುವ ಮತ್ತು ನಿರಾಕರಿಸುವ ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ ಮತ್ತು ಬ್ಯಾಕ್ ಗ್ರೌಂಡ್ ನಲ್ಲಿ ಅದರ ಬಳಕೆಯಾಗಬಾರದು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Recharge Plan: ಬಿಎಸ್ಎನ್ಎಲ್ ಕಂಪನಿಯ 22 ರೂ.ಗಳ ಪ್ಲಾನ್ ಸಕ್ಕತ್ತಾಗಿದೆ, ಸಿಗುತ್ತೆ 90 ದಿನಗಳ ವ್ಯಾಲಿಡಿಟಿ!


ಈ ಸಂಪೂರ್ಣ ವಿಚಾರದಲ್ಲಿ ವಾಟ್ಸಾಪ್ ಹೇಳಿದ್ದೇನು?
ಈ ಕುರಿತು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿರುವ ವಾಟ್ಸಾಪ್‌, ಡಬೀರಿಯೊಂದಿಗೆ ಈ ಕುರಿತು ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಹೇಳಿದೆ, "ಕಳೆದ 24 ಗಂಟೆಗಳಲ್ಲಿ ನಾವು ಟ್ವಿಟರ್ ಎಂಜಿನಿಯರ್‌ನೊಂದಿಗೆ ಸಂಪರ್ಕದಲ್ಲಿದ್ದು ಅವರು ಪಿಕ್ಸೆಲ್ ಫೋನ್ ಮತ್ತು ವಾಟ್ಸಾಪ್‌ನಲ್ಲಿ ಸಮಸ್ಯೆ ಕುರಿತು ವರದಿ ಪೋಸ್ಟ್ ಮಾಡಿದ್ದರು" ಎಂದಿದೆ.


ಇದನ್ನೂ ಓದಿ-Google Update: ಇನ್ಮುಂದೆ ಗೂಗಲ್ ನಲ್ಲಿ ನಿಮಗೆ ಪಾಸ್ವರ್ಡ್ ನೆನಪಿನಲ್ಲಿಟ್ಟುಕೊಳ್ಳುವ ಗೊಡವೆ ಇಲ್ಲ! ಕಾರಣ ಇಲ್ಲಿದೆ

ಸಮಸ್ಯೆಯು ಆಂಡ್ರಾಯ್ಡ್‌ನಲ್ಲಿದೆಯೇ ಹೊರತು ವಾಟ್ಸ್ ಆಪ್ ನಲ್ಲಿ ಇಲ್ಲ ಎಂದು WhatsApp ಹೇಳಿದೆ, "ಇದು Android ನಲ್ಲಿನ ದೋಷವಾಗಿದ್ದು, ಅದರ ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿ ಮಾಹಿತಿಯನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಮತ್ತು ಅದನ್ನು ತನಿಖೆ ಮಾಡಲು ಮತ್ತು ಸರಿಪಡಿಸಲು Google ಗೆ ನಾವು ಕೋರಿದ್ದೇವೆ" ಎಂದಿದೆ. ಇನ್ನೊಂದೆಡೆ, ಗೂಗಲ್ ದೋಷದ ಬಗ್ಗೆ ಹೆಚ್ಚಿನ ಏನು ಪ್ರತಿಕ್ರಿಯೆ ನೀಡಿಲ್ಲ. ಆದರೆ ಅದು ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಖಚಿತಪಡಿಸಿದೆ. ಗೂಗಲ್ ವಕ್ತಾರರು ಹೇಳಿಕೆಯಲ್ಲಿ, "ನಾವು ಈ ಸಮಸ್ಯೆಯ ಬಗ್ಗೆ ತಿಳಿದಿದ್ದೇವೆ ಮತ್ತು ತನಿಖೆಗಾಗಿ WhatsApp ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.