Latest Fan: ಫ್ಯಾನಿಗೂ ಬಂತು ರಿಮೋಟ್ ಕಂಟ್ರೋಲ್! ಇಂತಹ ಫ್ಯಾನ್ ನೀವು ಈ ಹಿಂದೆ ಎಂದಿಗೂ ನೋಡಿರಲಿಕ್ಕಿಲ್ಲ

Modern Fan: ನಿಮ್ಮ ಮನೆಯಲ್ಲಿರುವ ಹಳೆ ಫ್ಯಾನ್ ನಿಂದ ನೀವು ಬೇಸರಗೊಂಡಿದ್ದರೆ, ಈ ಆಯ್ಕೆ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ಅದನ್ನು ನೀವು ದೂರದಿಂದಲೇ ನಿಯಂತ್ರಿಸಬಹುದು.   

Written by - Nitin Tabib | Last Updated : May 7, 2023, 02:30 PM IST
  • ನೀವು ಕುಳಿತಿರುವ ಸ್ಥಳದಿಂದ ನೀವು ಈ ಫ್ಯಾನ್ ಗಳನ್ನು ಆನ್ ಮತ್ತು ಆಫ್ ಮಾಡಬಹುದು,
  • ಜೊತೆಗೆ ಅವುಗಳ ವೇಗವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು,
  • ಏಕೆಂದರೆ ಈ ಫ್ಯಾನ್ ಗಳ ಜೊತೆಗೆ ಒಂದು ಒಳ್ಳೆಯ ಗುಣಮಟ್ಟದ ರಿಮೋಟ್ ಕಂಟ್ರೋಲ್ ಅನ್ನು ಕೂಡ ನೀಡಲಾಗುತ್ತಿದ್ದು,
  • ಅದು ಅದನ್ನು ಕುಳಿತಲ್ಲೆ ನಿಯಂತ್ರಿಸುವ ಸಾಮರ್ಥ್ಯವನ್ನು ನಿಮಗೆ ನೀಡುತ್ತದೆ.
Latest Fan: ಫ್ಯಾನಿಗೂ ಬಂತು ರಿಮೋಟ್ ಕಂಟ್ರೋಲ್! ಇಂತಹ ಫ್ಯಾನ್ ನೀವು ಈ ಹಿಂದೆ ಎಂದಿಗೂ ನೋಡಿರಲಿಕ್ಕಿಲ್ಲ title=
ರಿಮೋಟ್ ಕಂಟ್ರೋಲ್ ಫ್ಯಾನ್ ಗಳು

Fan With Remote Control: ಬೇಸಿಗೆ ಕಾಲದಲ್ಲಿ ಮನೆಗಳಲ್ಲಿ ಸೀಲಿಂಗ್ ಫ್ಯಾನ್‌ಗಳು ಇರಲೇಬೇಕು, ಫ್ಯಾನ್ ಇದ್ದ ಮನೆಯಲ್ಲಿ ಅದನ್ನು ಯಾರು ಆನ್ ಮಾಡುತ್ತಾರೆ ಮತ್ತು ಅದರ ವೇಗವನ್ನು ಯಾರು ಸರಿಹೊಂದಿಸುತ್ತಾರೆ ಎಂಬುದೂ ಕೂಡ ಒಂದು ಸಮಸ್ಯೆ. ಪ್ರಸ್ತುತ ನಮ್ಮ ಮನೆಗಳಲ್ಲಿರುವ ಸಿಲಿಂಗ್ ಫ್ಯಾನ್ ಗಳ ಸಮಸ್ಯೆ ಎಂದರೆ, ಅವುಗಳನ್ನು ನಾವು ನಮ್ಮ ಕೈಯಾರೆ ನಿರ್ವಹಿಸಬೇಕು ಮತ್ತು ನೀವು ಸ್ವಿಚ್ ಬೋರ್ಡ್‌ಗೆ ಹೋಗಬೇಕು ಮತ್ತು ಅಲ್ಲಿಂದ ನೀವು ಅದನ್ನು ಆನ್ ಮತ್ತು ಆಫ್ ಮಾಡಬಹುದು. ಹಾಗೆಯೇ ಅದರ ವೇಗವನ್ನು  ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಸಿನಿಮಾ ನೋಡುವಾಗ ಅಥವಾ ಮನೆಯಲ್ಲಿ ಏನಾದರೂ ಕೆಲಸ ಮಾಡುವಾಗ ಅದೊಂದು ಗೊಡವೆ ಎಂದರೆ ತಪ್ಪಾಗಲಾರದು. ಆದರೆ, ಮಾರುಕಟ್ಟೆಯಲ್ಲಿ ಕೆಲವು ಹೈಟೆಕ್ ಫ್ಯಾನ್ ಗಳು ಬಂದಿವೆ, ಅವುಗಳನ್ನು ಆನ್ ಆಫ್ ಮಾಡಲು ನೀವು ಸ್ವಿಚ್ ಬೋರ್ಡ್‌ ಬಳಿ ಹೋಗಬೇಕಾಗಿಲ್ಲ. ಅವುಗಳ ವೇಗ ನಿಯಂತ್ರಿಸಲು ಕೂಡ ನೀವು ಸ್ವೀಚ್ ಕಂಟ್ರೋಲ ಬಳಿ ಹೋಗಬೇಕಾಗಿಲ್ಲ, ನೀವು ಕುಳಿತಿರುವ ಸ್ಥಳದಿಂದ ನೀವು ಈ ಫ್ಯಾನ್ ಗಳನ್ನು ಆನ್ ಮತ್ತು ಆಫ್ ಮಾಡಬಹುದು, ಜೊತೆಗೆ ಅವುಗಳ ವೇಗವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು, ಏಕೆಂದರೆ ಈ ಫ್ಯಾನ್ ಗಳ ಜೊತೆಗೆ ಒಂದು ಒಳ್ಳೆಯ ಗುಣಮಟ್ಟದ ರಿಮೋಟ್ ಕಂಟ್ರೋಲ್ ಅನ್ನು ಕೂಡ ನೀಡಲಾಗುತ್ತಿದ್ದು,  ಅದು ಅದನ್ನು ಕುಳಿತಲ್ಲೆ ನಿಯಂತ್ರಿಸುವ ಸಾಮರ್ಥ್ಯವನ್ನು ನಿಮಗೆ ನೀಡುತ್ತದೆ. ಇಂತಹ ಯಾವುದೇ ಫ್ಯಾನ್ ಬಗ್ಗೆ ನಿಮಗೆ ಮಾಹಿತಿಯೇ ಇಲ್ಲ ಎಂದರೆ,  ಇಂದು ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂತಹ ಫ್ಯಾನ್ ಗಳ ಆಯ್ಕೆ ಬಗ್ಗೆ ಹೇಳುತ್ತಿದ್ದೇವೆ.  ಇವು ಆರ್ಥಿಕವಾಗಿ ಹೆಚ್ಚು ದುಬಾರಿ ಕೂಡ ಇಲ್ಲ ಮತ್ತು ಒಂದಕ್ಕಿಂತ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿವೆ.

ಇದನ್ನೂ ಓದಿ-Royal Enfield 350 ಗೆ ಪೈಪೋಟಿ ನೀಡಲು ಶೀಘ್ರದಲ್ಲೇ ಮತ್ತೆ ರೋಡಿಗಿಳಿಯುತ್ತಿದೆ ಯಮಾಹಾ ಕಂಪನಿಯ ಈ ಬೈಕ್!

ಈ ಫ್ಯಾನ್ ಗಳು ಯಾವುವು
ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ರಿಮೋಟ್ 3 ಬ್ಲೇಡ್ ಸೀಲಿಂಗ್ ಫ್ಯಾನ್ ಜೊತೆಗೆ ಎಮ್‌ಫ್ಲಕ್ಸ್ ಹಾಲ್ಸಿಯಾನ್ ಲೈಟ್ 1200 ಎಂಎಂ BLDC ಮೋಟಾರ್ ಈ ಪಟ್ಟಿಯಲ್ಲಿರುವ ಮೊದಲ ಫ್ಯಾನ್ ಆಗಿದೆ. ನಾವು ಬೆಲೆಯ ಬಗ್ಗೆ ಹೇಳುವುದಾದರೆ, ಗ್ರಾಹಕರು ಈ ಫ್ಯಾನ್ ಅನ್ನು ₹ 3190 ಗೆ ಖರೀದಿಸಬಹುದು, ಆದರೆ ಇದರ ಮೂಲ ಬೆಲೆ ₹ 3999, ಫ್ಲಿಪ್‌ಕಾರ್ಟ್‌ನಿಂದ ಅದರ ಖರೀದಿಯ ಮೇಲೆ ಶೇ. 20 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ರಿಯಾಯಿತಿ ಕೊಡುಗೆ ಜಾರಿಗೆ ಬಂದ ಬಳಿಕ ಗ್ರಾಹಕರು ಅದನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಸೀಲಿಂಗ್ ಫ್ಯಾನ್‌ನಲ್ಲಿ, BLDC ತಂತ್ರಜ್ಞಾನವನ್ನು ಬಳಸಿದ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ ಮತ್ತು ಇದು ಕಡಿಮೆ ವೆಚ್ಚದಲ್ಲಿ ದೀರ್ಘಕಾಲ ಉಳಿಯುತ್ತದೆ. ಈ ಫ್ಯಾನ್ ಇತರ ಫ್ಯಾನ್‌ಗಳಿಗಿಂತ ₹2000 ಅಗ್ಗವಾಗಿವೆ. ಈ ಫ್ಯಾನ್ ಗಳ ಜೊತೆಗೆ ನೀವು ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಅನ್ನು ಪಡೆಯುತ್ತೀರಿ, ಇದಲ್ಲದೆ ನೀವು ಟರ್ಬೊ ಸ್ಲಿಪ್ ಮತ್ತು ವೇಗ ನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು. ನಿಮ್ಮ ಮನೆ ಮತ್ತು ಕಚೇರಿಯಲ್ಲಿ ಈ ಫ್ಯಾನ್ ಅನ್ನು ನೀವು ಬಳಸಬಹುದು.

ಇದನ್ನೂ ಓದಿ-WhatsApp ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ಎರಡು ಹೊಸ ವೈಶಿಷ್ಟ್ಯಗಳನ್ನು ಹಂಚಿಕೊಂಡ ಮೇಟಾ!

ಈ ಪಟ್ಟಿಯಲ್ಲಿರುವ ಎರಡನೇ ಫ್ಯಾನ್ ಆಟಂಬರ್ಗ್ ರೆನೆಸಾ 1400mm BLDC ಮೋಟಾರ್ 5 ಸ್ಟಾರ್ ರೇಟೆಡ್ ಸೀಲಿಂಗ್ ಫ್ಯಾನ್ ಆಗಿದ್ದು,  ಇದನ್ನು Amazon ನಿಂದ ಖರೀದಿಸಬಹುದು. ಇದರ ನೈಜ ಬೆಲೆಯ ಬಗ್ಗೆ ಹೇಳುವುದಾದರೆ, ಅದು ರೂ 5,590 ಆಗಿದೆ, ಆದರೆ 31% ರಿಯಾಯಿತಿಯೊಂದಿಗೆ ಗ್ರಾಹಕರು ಇದನ್ನು ಕೇವಲ ರೂ 3,860 ಕ್ಕೆ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಫ್ಯಾನ್‌ನಲ್ಲಿ, 1400mm BLDC ಮೋಟರ್ ಅನ್ನು ಇನ್ಸ್ಟಾಲ್ ಮಾಡಲಾಗಿದ್ದು, ಇನ್ನೂ  ಹಲವು ವೈಶಿಷ್ಟ್ಯಗಳನ್ನು ನೀವು ಇದರಲ್ಲಿ ನೋಡಬಹುದು. ಇದು 5 ಸ್ಟಾರ್ ರೇಟಿಂಗ್ ಕೂಡ ಪಡೆದುಕೊಂಡಿದೆ. ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಇದರಲ್ಲಿ ಲಭ್ಯವಿದೆ. ಈ ಫ್ಯಾನ್ ನ ವಿಶೇಷತೆ ಏನೆಂದರೆ ಇದು ಶೇ.65ರಷ್ಟು ವಿದ್ಯುತ್ ಉಳಿತಾಯ ಮಾಡುತ್ತದೆ ಮತ್ತು ಇದರಲ್ಲಿ ನಿಮಗೆ ಎಲ್‌ಇಡಿ ದೀಪಗಳ ಸೌಲಭ್ಯ ಕೂಡ ಇದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News