WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ, ಬದಲಾಗಲಿದೆ ನಿಮ್ಮ ಚಾಟಿಂಗ್ ವಿಧಾನ
WhatsApp News Feature: WhatsApp ಪ್ರೈವಸಿ ಪಾಲಸಿ ಕುರಿತು ಕಳೆದ ಹಲವು ದಿನಗಳಿಂದ ವಿವಾದ ಸೃಷ್ಟಿಯಾಗಿದೆ. ಆದರೆ, ಇದರ ಜೊತೆಗೆ ಕಂಪನಿ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನೂತನ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.
WhatsApp News Feature: WhatsApp ಪ್ರೈವಸಿ ಪಾಲಸಿ ಕುರಿತು ಕಳೆದ ಹಲವು ದಿನಗಳಿಂದ ವಿವಾದ ಸೃಷ್ಟಿಯಾಗಿದೆ. ಆದರೆ, ಇದರ ಜೊತೆಗೆ ಕಂಪನಿ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನೂತನ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದರಿಂದ ಬಳಕೆದಾರರಿಗೆ ನೀಡಲಾಗುತ್ತಿರುವ ಸೇವೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಅವರ ಚಾಟಿಂಗ್ ಅನುಭವ ಮತ್ತಷ್ಟು ಸ್ವಾರಸ್ಯಕರವಾಗಿಸಲು ವಾಟ್ಸ್ ಆಪ್ ಪ್ರಯತ್ನಿಸುತ್ತಿದೆ.
ನಿಮ್ಮ ಅಭಿರುಚಿಗೆ ತಕ್ಕಂತೆ ಸ್ಟಿಕ್ಕರ್ಸ್ ತಯಾರಿಸಿ ಹಂಚಿಕೊಳ್ಳಿ (WhatsApp Animated Stickers)
ಇತ್ತೀಚೆಗಷ್ಟೇ ಕಂಪನಿ ತನ್ನ ಪ್ಲಾಟ್ ಫಾರ್ಮ್ ನಲ್ಲಿ ನೂತನ ಅಪ್ಡೇಟ್ (WhatsApp Latest Updates) ಜಾರಿಗೊಳಿಸಿದೆ. ಈ ವೈಶಿಷ್ಟ್ಯ ಬಳಸಿ ಬಳಕೆದಾರರು ತಮ್ಮ ಚಾಟಿಂಗ್ ಗೆ ಅನುಗುಣವಾಗಿ ಕಸ್ಟಮ್ ಅನಿಮೇಟೆಡ್ ಸ್ಟಿಕರ್ ಗಳನ್ನು ಹಂಚಿಕೊಳ್ಳಬಹುದು. ಅಂದರೆ ಇದಕ್ಕಾಗಿ ನಿಮಗೆ ಆಪ್ ಬೇಸ್ಡ್ ಸ್ಟಿಕರ್ ಗಳ ಮೇಲೆ ಅವಲಂಭಿಸಬೇಕಾದ ಅವಶ್ಯಕತೆ ಇಲ್ಲ. ವಾಟ್ಸ್ ಆಪ್ ಅಪ್ಡೇಟ್ ಗಳ ಅಧ್ಯಯನ ನಡೆಸುವ WaBetaInfo ಬ್ಲಾಗ್ ನಲ್ಲಿ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ವಾಟ್ಸ್ ಆಪ್ ಥರ್ಡ್ ಪಾರ್ಟಿ ಅನಿಮೇಟೆಡ್ ಸ್ಟಿಕರ್ ಪ್ಯಾಕ್ ಬಳಕೆಗೆ ಅನುಮತಿ ನೀಡಿದೆ. ಅಂದರೆ, ಇನ್ಮುಂದೆ ನೀವು ಥರ್ಡ್ ಪಾರ್ಟಿ ಅನಿಮೇಟೆಡ್ ಸ್ಟಿಕರ್ ಪ್ಯಾಕ್ ಗಳನ್ನು ರಿಯಲ್ ಟೈಮ್ ವಾಟ್ಸ್ ಆಪ್ ನಲ್ಲಿ ಬಳಸಬಹುದು.
ಕೆಲ ದೇಶಗಳಲ್ಲಿ ಈಗಾಗಲೇ ರೋಲ್ ಔಟ್ ಮಾಡಲಾಗಿದೆ ಥರ್ಡ್ ಪಾರ್ಟಿ ಸ್ಟಿಕರ್ ವೈಶಿಷ್ಟ್ಯ (WhatsApp Third Party Sticker Feature)
ವರದಿಗಳ ಪ್ರಕಾರ WhatsApp ಬ್ರೆಜಿಲ್, ಇರಾನ್ ಹಾಗೂ ಇಂಡೋನೇಷ್ಯಾ ದೇಶಗಳಲ್ಲಿ ಈಗಾಗಲೇ ಈ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದೆ. ಮುಂಬರುವ ಕೆಲ ದಿನಗಳಲ್ಲಿ ಈ ವೈಶಿಷ್ಟ್ಯ ಭಾರತೀಯ ಬಳಕೆದಾರರಿಗೂ ಕೂಡ ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತಿದೆ. ಒಂದು ವೇಳೆ ನೀವೂ ಕೂಡ ಥರ್ಡ್ ಪಾರ್ಟಿ ಆಪ್ ಬಳಸಿ ಸ್ಟಿಕರ್ ಅನ್ನು ತಯಾರಿಸಲು ಬಯಸುತ್ತಿದ್ದರೆ, ಇದಕ್ಕಾಗಿ ಥರ್ಡ್ ಪಾರ್ಟಿ ಆಪ್ ಡೌನ್ಲೋಡ್ ಮಾಡಿ. ಬಳಿಕ ಆಪ್ ತೆರೆದು ಯಾವ ವಿಡಿಯೋ ಅನಿಮೇಶನ್ ಅನ್ನು ನೀವು ತಯಾರಿಸಲು ಬಯಸುತ್ತಿರುವಿರೋ ಅದನ್ನು ಕ್ಯಾಮೆರಾ ಮೂಲಕ ರಿಕಾರ್ಡ್ ಮಾಡಿ. ತಕ್ಷಣ ನೀವು ತಯಾರಿಸಿದ ವಿಡಿಯೋ ತುಣುಕಿನ ಒಂದು ಅನಿಮೇಟೆಡ್ ಸ್ಟಿಕರ್ ತಯಾರಿಸಲಿದೆ.
ಇದನ್ನೂ ಓದಿ-Android, ಐಫೋನ್‌ನಲ್ಲಿ WhatsApp Call ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ತಂತ್ರ
ವಾಟ್ಸ್ ಆಪ್ ಪ್ರಿವಸಿ ಪಾಲಸಿ ಕುರಿತು ಹೊಸ ಅಪ್ಡೇಟ್ (WhatsApp Privacy Policy)
ಕಂಪನಿ ತನ್ನ ಬಳಕೆದಾರರಿಗೆ ಹೊಸ ಸೇವಾ ನೀತಿ ಹಾಗೂ ಗೌಪ್ಯತಾ ನೀತಿಯ (WhatsApp New Privacy Policy)ಕುರಿತು ಉತ್ತಮ ರೀತಿಯಲ್ಲಿ ಮಾಹಿತಿ ನೀಡಲು ಒಂದು ಇನ್ ಆಪ್ ಅಲರ್ಟ್ ಕೂಡ ಬಿಡುಗಡೆ ಮಾಡಲಿದೆ. ಈ ಮೊದಲೂ ಕೂಡ ಕಂಪನಿ ತನ್ನ ಬಳಕೆದಾರರಿಗೆ ಈ ಕುರಿತು ಅಲರ್ಟ್ ಜಾರಿಗೊಳಿಸಿತ್ತು. ಈ ಮೊದಲು ಜಾರಿಗೊಳಿಸಲಾಗಿರುವ ಅಲರ್ಟ್ ಪ್ರಕಾರ ಬಳಕೆದಾರರು ಮೇ 15 ರೊಳಗೆ ವಾಟ್ಸ್ ಆಪ್ ನ ನೂತನ ಪಾಲಸಿ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಈ ರೀತಿ ಮಾಡದೆ ಹೋದಲ್ಲಿ ಆಪ್ ನಲ್ಲಿರುವ ಕೆಲ ವೈಶಿಷ್ಟ್ಯಗಳು ಬಳಕೆದಾರರಿಗೆ ಲಭಿಸುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ-WhatsApp Scam - ಎಚ್ಚರ! WhatsApp ನಲ್ಲಿ ನಿಮಗೂ ಈ ಸಂದೇಶ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ
ಮೇ 15 ಬರಲು ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ. ಏತನ್ಮಧ್ಯೆ ಕಂಪನಿ ಬಳಕೆದಾರರಿಗೆ ತನ್ನ ನೀತಿ-ನಿಯಮಗಳ ಕುರಿತು ಮುಂಚಿತವಾಗಿ ರಿಮೈಂಡರ್ ಕಳುಹಿಸಲು ಆರಂಭಿಸಲಿದೆ. ಕೆಲ ದಿನಗಳ ಹಿಂದೆಯೇ ಬಳಕೆದಾರರಿಗೆ ಈ ಕುರಿತು ಎಚ್ಚರಿಕೆಯ ಸಂದೇಶವನ್ನು ಕೂಡ ಪಾಪಪ್ ಮೂಲಕ ವಾಟ್ಸ್ ಆಪ್ ಕಳುಹಿಸುತ್ತಿದೆ. ಈ ಸಂದೇಶದಲ್ಲಿ "ವಾಟ್ಸ್ ಆಪ್ ಸೇವೆಯನ್ನು ನಿರಂತರವಾಗಿ ಆನಂದಿಸಲು ಈ ನೂತನ ನೀತಿ-ನಿಯಮಗಳನ್ನು ಸ್ವೀಕರಿಸಲು' ವಾಟ್ಸ್ ಆಪ್ ವಿನಂತಿಸುತ್ತಿದೆ.
ಇದನ್ನೂ ಓದಿ -WhatsApp New Feature: ಇನ್ನು WhatsApp Web ಮೂಲಕ ಕೂಡ ಆಡಿಯೋ-ವಿಡಿಯೋ ಕರೆ ಸಾಧ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.