ನವದೆಹಲಿ: ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ತರಲು ವಾಟ್ಸಾಪ್ ಕಳೆದ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದೆ. ಈ ಮೂಲಕ ಬಳಕೆದಾರರು ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ. ಇತ್ತೀಚಿನ ವರದಿಯಲ್ಲಿ ವಾಟ್ಸಾಪ್ನ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯದ ಪರೀಕ್ಷೆ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್ನ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನು ಟೆಕ್ (Tech) ಬ್ಲಾಗ್ WABetaInfo ಟ್ವೀಟ್ ಮಾಡುವ ಮೂಲಕ ನೀಡಲಾಗಿದೆ. ವರದಿಯ ಪ್ರಕಾರ ಕಳೆದ ವಾರ ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ. ಒಂದೇ ವಾಟ್ಸಾಪ್ ಖಾತೆಯೊಂದಿಗೆ ವಿಭಿನ್ನ ಸಾಧನಗಳನ್ನು ಕಾನ್ಫಿಗರ್ ಮಾಡುವ ಮೂಲಕ ಕರೆ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ವರದಿಯಾಗಿದೆ.


ಆದಾಗ್ಯೂ, ವಾಟ್ಸಾಪ್ನ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯದ ಬಗ್ಗೆ ಯಾವುದೇ ಡೇಟಾ ಇನ್ನೂ ಲಭ್ಯವಿಲ್ಲ. ವಾಟ್ಸಾಪ್ನ (WhatsApp) ಬಹು-ಸಾಧನ ಬೆಂಬಲ ವೈಶಿಷ್ಟ್ಯದ ನಂತರ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನು 4 ವಿಭಿನ್ನ ಸಾಧನಗಳಲ್ಲಿ ಏಕಕಾಲದಲ್ಲಿ ಚಲಾಯಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: WhatsApp features: 2021ಕ್ಕೆ ಬರಲಿವೆ ಈ ಮೂರು ವಾಟ್ಸಪ್ ವೈಶಿಷ್ಟ್ಯಗಳು..!


ಗಮನಾರ್ಹವಾಗಿ ವಾಟ್ಸಾಪ್ ವೆಬ್ ಅನ್ನು ಬಳಸಲು ಪ್ರಾಥಮಿಕ ಸಾಧನದಲ್ಲಿ ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ.  ಆದರೆ ಹೊಸ ವೈಶಿಷ್ಟ್ಯ ಬಂದ ನಂತರ ಇದರ ಅಗತ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ.


ವಾಟ್ಸಾಪ್ನ ವೈಶಿಷ್ಟ್ಯದಲ್ಲಿನ ಲಿಂಕ್ಡ್ ಡಿವೈಸಸ್ (Linked Devices) ವಿಭಾಗದ ಅಡಿಯಲ್ಲಿ ಮಲ್ಟಿ-ಡಿವೈಸ್ ಸಪೋರ್ಟ್ (Multi Device Support) ಲಭ್ಯವಿರುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೊಸ ಸಾಧನವನ್ನು ಸೇರಿಸಲು ಬಳಕೆದಾರರು Link a New Device Option ಅನ್ನು ಲಿಂಕ್ ಮಾಡಬೇಕು.


ಇದನ್ನೂ ಓದಿ: WhatsApp Scam message: ವಾಟ್ಸಾಪ್‌ನಲ್ಲಿ ಬರುವ ಇಂತಹ ಸಂದೇಶಗಳ ಬಗ್ಗೆ ಇರಲಿ ಎಚ್ಚರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.