WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ
WhatsApp New Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ಸ್ಕ್ರೀನ್ ಬ್ಲಾಕಿಂಗ್ ಫೀಚರ್ ಅನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯ ಸಕ್ರಿಯಗೊಳಿಸಿದರೆ ಬೇರೆಯವರಿಗೆ ವಾಟ್ಸಾಪ್ ಪ್ರೊಫೈಲ್ ಫೋಟೋದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
WhatsApp New Feature: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಶ್ತ್ಯಾಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಬಳಕೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿರುತ್ತದೆ.
ಇದೀಗ ವಾಟ್ಸಾಪ್ ಹೊಸ ಭದ್ರತಾ ವೈಶಿಷ್ಟ್ಯವನ್ನು ತರಲಿದ್ದು, ಇದನ್ನು ಸಕ್ರಿಯಗೊಳಿಸುವ ಮೂಲಕ ಬೇರೆಯವರು ನಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ.
ವಾಟ್ಸಾಪ್ ಅನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಪ್ರಕಾರ, ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದು ಸ್ಕ್ರೀನ್ ಬ್ಲಾಕಿಂಗ್ ಫೀಚರ್ ಎಂದು ಹೇಳಲಾಗುತ್ತಿದೆ. ಆಂಡ್ರಾಯ್ಡ್ 2.24.4.25 ನವೀಕರಣವನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೆಲವು ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ- YouTube ವೀಡಿಯೊದಿಂದ ತಮಾಷೆಯ GIF ರಚಿಸಲು ಬಹಳ ಪ್ರಯೋಜನಕಾರಿ ಈ ಟೂಲ್ಸ್
ಈ ಕುರಿತಂತೆ ಸ್ಕ್ರೀನ್‌ಶಾಟ್ ಜೊತೆಗೆ Wabetainfo ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಟ್ವೀಟ್‌ನಲ್ಲಿ ಪ್ರೊಫೈಲ್ ಫೋಟೋದ ಸ್ಕ್ರೀನ್‌ಶಾಟ್ ತೆಗೆದಾಗ, ಅಧಿಸೂಚನೆಯನ್ನು ಸ್ವೀಕರಿಸಲಾಗಿದೆ, ಅದರಲ್ಲಿ 'ಆಪ್ ನಿರ್ಬಂಧದಿಂದಾಗಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಬರೆಯಲಾಗಿದೆ.
Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ
ವಾಟ್ಸಾಪ್ ನ ಸ್ಕ್ರೀನ್‌ಶಾಟ್ ನಿರ್ಬಂಧಿಸುವ ವೈಶಿಷ್ಟ್ಯವು ಬಳಕೆದಾರರಿಗೆ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಿದೆ. ಇದು ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಅಥವಾ ಹಂಚಿಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಇದರೊಂದಿಗೆ ವೈಯಕ್ತಿಕ ಫೋಟೋಗಳ ದುರ್ಬಳಕೆಯನ್ನು ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.