WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಈ ತ್ವರಿತ ಸಂದೇಶ ರವಾನೆಯ ಆಪ್‌ನ ಮುಂಬರುವ ವೈಶಿಷ್ಟ್ಯಗಳ ಪಟ್ಟಿಗೆ ಮತ್ತೊಂದು ಹೊಸ ವೈಶಿಷ್ಟ್ಯದ ಹೆಸರು ಸೇರ್ಪಡೆಯಾಗಿದೆ. ಈ ಹೊಸ ವೈಶಿಷ್ಟ್ಯಕ್ಕೆ 'ಎಡಿಟ್ ಬಟನ್' ಎಂದು ಕರೆಯಲಾಗುತ್ತಿದೆ. ಹೌದು, ಟ್ವಿಟರ್ ಬಳಕೆದಾರರು ಈ 'ಎಡಿಟ್' ವೈಶಿಷ್ಟ್ಯಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ, ಆದರೆ ಟ್ವಿಟರ್ ಗೂ ಮುನ್ನವೇ ವಾಟ್ಸಾಪ್ ತನ್ನ ಬಳಕೆದಾರರಿಗೆ ಈ ಫೀಚರ್ ಒದಗಿಸಲಿದೆ ಎಂದು ವರದಿಯಾಗಿದೆ.
Wabetainfo ನ ಇತ್ತೀಚಿನ ವರದಿಯಲ್ಲಿ, WhatsApp ಶೀಘ್ರದಲ್ಲೇ ಹೊಸ ಮೆಸೇಜಿಂಗ್ ವೈಶಿಷ್ಟ್ಯವಾಗಿ ತನ್ನ ಬಳಕೆದಾರರಿಗೆ 'Edit' ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಪ್ರಸ್ತುತ, ಈ ವೈಶಿಷ್ಟ್ಯವು WhatsApp ಬೀಟಾದ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಆದರೆ, ಭವಿಷ್ಯದ ನವೀಕರಣದೊಂದಿಗೆ, ಇದನ್ನು iOS ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ಸಹ ನೀಡಲಾಗುತ್ತದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

'ಇನ್ಫೋ' ಮತ್ತು 'ಕಾಪಿ' ಜೊತೆಗೆ ಎಡಿಟ್ ಆಯ್ಕೆ ಲಭ್ಯವಿರಲಿದೆ
Wabetainfo ನ  ವರದಿಯಲ್ಲಿ  ಹೊಸ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದೆ, ಇದರಲ್ಲಿ WhatsApp ನ ಮುಂಬರುವ ಎಡಿಟ್ ಬಟನ್ ಅನ್ನು ನೀವು ನೋಡಬಹುದು. ಈ ಎಡಿಟ್ ಬಟನ್ ಅನ್ನು ಇನ್ಫೋ ಮತ್ತು ಕಾಪಿ ಆಯ್ಕೆಯೊಂದಿಗೆ ಸೇರಿಸಲಾಗಿರುವುದನ್ನು ನೀವು ಸ್ಕ್ರೀನ್‌ಶಾಟ್‌ನಲ್ಲಿ ನೋಡಬಹುದು. ತಪ್ಪು ಮತ್ತು ಮುದ್ರಣದೋಷದಿಂದ ಕೂಡಿದ ಸಂದೇಶವನ್ನು ಸರಿಪಡಿಸಲು ಈ ಬಟನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. 


ಇದನ್ನೂ ಓದಿ-Airtel ಉಚಿತವಾಗಿ ನೀಡುತ್ತಿದೆ 1ಜಿಬಿ ಡೇಟಾ, ಈ ಕೊಡುಗೆ ಕೇವಲ ಮೂರು ದಿನಗಳವರೆಗೆ ಇರಲಿದೆ


ಪ್ರಸ್ತುತ, ಈ ವೈಶಿಷ್ಟ್ಯ  ಕೆಲಸ ನಡೆಯುತ್ತಿದೆ ಮತ್ತು ಸದ್ಯಕ್ಕೆ ಇದನ್ನು ಬೀಟಾ ಪರೀಕ್ಷಕರಿಗೆ ನೀಡಲಾಗಿಲ್ಲ. ಆದರೆ ಭವಿಷ್ಯದ ನವೀಕರಣಗಳ ಮೂಲಕ ಈ ವೈಶಿಷ್ಟ್ಯವನ್ನು ಎಲ್ಲರಿಗೂ ಹೊರತರಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.


ಇದನ್ನೂ ಓದಿ-Airtel New Plan: ಮೂರು ಅತ್ಯದ್ಭುತ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಏರ್ಟೆಲ್


Twitter ನಲ್ಲಿ ,ಎಡಿಟ್ ಬಟನ್‌' ಗಾಗಿ ನಿರೀಕ್ಷಿಸಲಾಗುತ್ತಿದೆ
ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ Twitter ನಲ್ಲಿ ಸಹ, ಬಳಕೆದಾರರು ಎಡಿಟ್ ಬಟನ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಟ್ವಿಟರ್ ಕಳೆದ ಹಲವಾರು ತಿಂಗಳುಗಳಿಂದ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ವರದಿಗಳ ಪ್ರಕಾರ, ಈ ವೈಶಿಷ್ಟ್ಯವನ್ನು ಮೊದಲು ಟ್ವಿಟರ್ ಬ್ಲೂ ಬಳಕೆದಾರರಿಗೆ ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ. ನಂತರ ಈ ಎಡಿಟ್ ಬಟನ್ ವೈಶಿಷ್ಟ್ಯವನ್ನು ಇತರ ಬಳಕೆದಾರರಿಗಾಗಿಯೂ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಕಂಪನಿಯು ಮುಂಬರುವ ಎಡಿಟ್ ಬಟನ್ ವೈಶಿಷ್ಟ್ಯದ ಕುರಿತು  ಏಪ್ರಿಲ್ 6 ರಂದು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದೆ. ಇದಕ್ಕೂ ಮೊದಲು, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಏಪ್ರಿಲ್ 5 ರಂದು ಟ್ವಿಟರ್‌ಗೆ ಎಡಿಟ್ ಬಟನ್ ವೈಶಿಷ್ಟ್ಯವನ್ನು ಸೇರಿಸುವ ಕುರಿತು ಸಮೀಕ್ಷೆಯನ್ನು ನಡೆಸಿದ್ದರು. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.