WhatsApp New Feature: ಒಂದು ಮೋಜಿನ ಫೀಚರ್ ಬಿಡುಗಡೆ ಮಾಡಲು ವಾಟ್ಸಾಪ್ ಸಿದ್ಧತೆ
WhatsApp New Feature: ವಾಟ್ಸಾಪ್ ಹೊಸ ಫೀಚರ್ ಮೇಲೆ ಕೆಲಸ ಮಾಡುತ್ತಿದೆ, ಶೀಘ್ರದಲ್ಲೇ ಈ ಫೀಚರ್ ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ...
WhatsApp New Feature: ವಾಟ್ಸಾಪ್ (WhatsApp) ಶೀಘ್ರದಲ್ಲೇ ಹೊಸ ಫೀಚರ್ ಅನ್ನು ಹೊರತರಲಿದೆ, ಇದರಿಂದ ಬಳಕೆದಾರರು ಕ್ಷಣಾರ್ಧದಲ್ಲಿ ಯಾರಿಗಾದರೂ ಸುಲಭವಾಗಿ ಉತ್ತರಿಸಲು ಸಾಧ್ಯವಾಗುತ್ತದೆ. ಐಒಎಸ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ವಾಟ್ಸಾಪ್ ಹೊಸ ಪ್ರತಿಕ್ರಿಯೆ ವೈಶಿಷ್ಟ್ಯಗಳ ಮೇಲೆ ಕೆಲಸ ಮಾಡುತ್ತಿದೆ, ಈ ಪ್ಲಾಟ್‌ಫಾರ್ಮ್ ಹೊಸ ಬೀಟಾ ಆವೃತ್ತಿಯು ಹೊಸ ಸೆಟ್ಟಿಂಗ್‌ಗಳೊಂದಿಗೆ ಪ್ರತಿಕ್ರಿಯೆ ಅಧಿಸೂಚನೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯದಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದ್ದರೂ, ಸಾರ್ವಜನಿಕ ಬೀಟಾ ಪರೀಕ್ಷಕರಿಗೆ ಇದನ್ನು ಪ್ರಯತ್ನಿಸಲು ಪ್ರತಿಕ್ರಿಯೆಗಳು ಇನ್ನೂ ಲಭ್ಯವಿಲ್ಲ ಎಂದು ವರದಿಗಳು ತಿಳಿಸಿವೆ.
ವಾಟ್ಸಾಪ್ ಬಹು-ಸಾಧನ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತಿದೆ:
ಒಂದು ಸಂದೇಶವು ಬಹು ಪ್ರತಿಕ್ರಿಯೆಗಳನ್ನು (WhatsApp Message Reaction) ಹೊಂದಿರಬಹುದು ಎಂದು ಮೊದಲು ಹೇಳಲಾಗುತ್ತಿತ್ತು, ಆದರೆ ಈಗ ಅವರು 999 ತಲುಪಿದಾಗ ಎಣಿಕೆಯನ್ನು ನಿಲ್ಲಿಸುತ್ತಾರೆ, ನಂತರ ಪ್ಲಸ್ ಚಿಹ್ನೆ ಬರುತ್ತದೆ ಎನ್ನಲಾಗಿದೆ. ವಾಟ್ಸಾಪ್ ಮಲ್ಟಿ-ಡಿವೈಸ್ ಸಪೋರ್ಟ್ 2.0 ನಲ್ಲಿ ಕೆಲಸ ಮಾಡುತ್ತಿದೆ, ಇದು ಐಪ್ಯಾಡ್ ಆಪ್ ಅನ್ನು ತರುತ್ತದೆ ಮತ್ತು ಬಳಕೆದಾರರು ತಮ್ಮ ಫೋನ್‌ಗಳಿಂದ ಇಂಟರ್ನೆಟ್ ಸಂಪರ್ಕದೊಂದಿಗೆ ಅಥವಾ ಇಂಟರ್ನೆಟ್ ಇಲ್ಲದೆ (Without Internet) ಆಪ್‌ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ- Vi, Airtel, Jio Best Recharge Plans: ಕಡಿಮೆ ವೆಚ್ಚದಲ್ಲಿ ನಿತ್ಯ 4GB ಡಾಟಾ ಜೊತೆ ಸಿಗಲಿದೆ ಹಲವು ಲಾಭ
ಪ್ರಸ್ತುತ, ಅದರ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ಸಾರ್ವಜನಿಕ ಬೀಟಾ ಪರೀಕ್ಷಕರು ಈಗಾಗಲೇ ಬಹು-ಸಾಧನ ಬೀಟಾ ಪ್ರೋಗ್ರಾಂಗೆ ಸೇರಲು ಸಮರ್ಥರಾಗಿದ್ದಾರೆ, ಇದು ಇಂಟರ್ನೆಟ್ ಸಂಪರ್ಕಿತ ಸ್ಮಾರ್ಟ್‌ಫೋನ್‌ನ (Smartphone) ಅಗತ್ಯವಿಲ್ಲದೆ ಲಿಂಕ್ ಆಗಿರುವ ನಾಲ್ಕು ಸಾಧನಗಳೊಂದಿಗೆ ವಾಟ್ಸಾಪ್ ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ.
ಇತ್ತೀಚೆಗೆ, ವಾಟ್ಸಾಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಾಗತಿಕವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್ ಬ್ಯಾಕಪ್‌ಗಳನ್ನು ಹೊರತರಲು ಆರಂಭಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ