WhatsApp New Privacy Policy Latest News:ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೂ ಕೆಲಸ ಮಾಡುತ್ತಾ WhatsApp? ಇಲ್ಲಿದೆ ಕಂಪನಿಯ ಅಧಿಕೃತ ಹೇಳಿಕೆ
WhatsApp Privacy Policyಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಹಿರಂಗಗೊಂಡಿದೆ. ಶುಕ್ರವಾರ ಭಾರತೀಯ ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದ್ದ PTI ವರದಿಯೊಂದು, ವಾಟ್ಸ್ ಆಪ್ ತನ್ನ ವಿವಾದಾತ್ಮಕ ಗೌಪ್ಯತಾ ನೀತಿ ಷರತ್ತು ಒಪ್ಪಿಕೊಳ್ಳಲು ನೀಡಿದ್ದ ಗಡುವನ್ನು (ಮೇ 15, 2021) ಸ್ಕ್ರಾಪ್ ಮಾಡಿದೆ ಎಂದು ಹೇಳಿತ್ತು.
ನವದೆಹಲಿ: WhatsApp Privacy Policyಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಹಿರಂಗಗೊಂಡಿದೆ. ಶುಕ್ರವಾರ ಭಾರತೀಯ ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದ್ದ PTI ವರದಿಯೊಂದು, ವಾಟ್ಸ್ ಆಪ್ ತನ್ನ ವಿವಾದಾತ್ಮಕ ಗೌಪ್ಯತಾ ನೀತಿ ಷರತ್ತು ಒಪ್ಪಿಕೊಳ್ಳಲು ನೀಡಿದ್ದ ಗಡುವನ್ನು (ಮೇ 15, 2021) ಸ್ಕ್ರಾಪ್ ಮಾಡಿದೆ ಎಂದು ಹೇಳಿತ್ತು. ಆದರೆ, ಇದೀಗ ಈ ಕುರಿತಾದ ವಾಟ್ಸ್ ಆಪ್ ನ ಅಧಿಕೃತ ಹೇಳಿಕೆ ಬಹಿರಂಗಗೊಂಡಿದೆ. ಈ ಹೇಳಿಕೆಯ ಪ್ರಕಾರ, ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳುವ ಷರತ್ತನ್ನು ವಾಟ್ಸ್ ಆಪ್ ಸಂಪೂರ್ಣವಾಗಿ ಹಿಂಪಡೆದಿಲ್ಲ ಎಂದೇ ಹೇಳಬಹುದು. ಏಕೆಂದರೆ, ಇದರಲ್ಲಿ ನಿಮಗೆ ಎರಡು ಆಯ್ಕೆಗಳಿರಲಿವೆ. ಮೊದಲನೇ ಆಯ್ಕೆ ಎಂದರೆ, ಗೌಪ್ಯತಾ ನೀತಿಯನ್ನು ಸಂಪೂರ್ಣ ಒಪ್ಪಿಕೊಳ್ಳಿ. ಇಲ್ಲದೆ ಹೋದರೆ ಎರಡನೇ ಆಯ್ಕೆ ಎಂದರೆ, ಆಪ್ ನ ಬಹುತೇಕ ಪ್ರಮುಖ ವೈಶಿಷ್ಟ್ಯಗಳಿಂದ ವಂಚಿತರಾಗಿ ಎಂದು ಹೇಳಬಹುದು.
ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸದ ಖಾತೆಗಳನ್ನು ಡಿಲೀಟ್ ಮಾಡಲಾಗುವುದಿಲ್ಲ ಆದರೆ ಅದನ್ನು ಸಾಧ್ಯವಾದಷ್ಟು ನಿಷ್ಪ್ರಯೋಜಕವಾಗಿಸುತ್ತದೆ ಎಂದು ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅಧಿಕೃತ ಹೇಳಿಕೆ ಸೂಚಿಸುತ್ತದೆ. ಹಾಗಾದರೆ ಬನ್ನಿ ಬಳಕೆದಾರರ ಪಾಲಿಗೆ ಇದರ ಅರ್ಥ ಏನು ಅಂತ ತಿಳಿಯೋಣ.
ಹೊಸ ಗೌಪ್ಯತಾ ನೀತಿಯನ್ನು (WhatsApp New Privacy Policy) ಒಪ್ಪಿಕೊಳ್ಳುವ ಬಳಕೆದಾರರಿಗೆ ವಾಟ್ಸ್ ಆಪ್ (WhatsApp) ನ ಸೇವೆ ಅಥವಾ ವೈಶಿಷ್ಟ್ಯಗಳಲ್ಲಿ ಯಾವುದೇ ರೀತಿಯ ಕೊರತೆ ಎದುರಾಗದು. ಆದರೆ, ಒಪ್ಪಿಕೊಳ್ಳದವರು ಸಾಕಷ್ಟು ಸಂಗತಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಟ್ಸ್ ಆಪ್ ಹೇಳಿಕೆಯ ಪ್ರಕಾರ, ಕಂಪನಿ ಮುಂದೆಯೂ ಕೂಡ ಈ ಮೊದಲಿನ ರೀತಿಯಲ್ಲಿಯೇ ತನ್ನ ಹೊಸ ನೀತಿ ನಿಯಮಗಳನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸುತ್ತಲೇ ಇರಲಿದೆ ಎಂದು ಸ್ಪಷ್ಟಪಡಿಸಿದೆ. ನಂತರ ಕೆಲ ವಾರಗಳ ಬಳಿಕ, ನೀತಿ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ನಿರಂತರ ನೋಟಿಫಿಕೆಶನ್ ಗಳು ಬರಲಿವೆ.
ಒಂದೊಮ್ಮೆ ಈ ನಿರಂತರ ಸಂದೇಶಗಳು ಬರಲಾರಂಭಿಸಿದ ಬಳಿಕ ಆ ಬಳಕೆದಾರರ ವಾಟ್ಸ್ ಆಪ್ ಖಾತೆ ಸೀಮಿತ ಕ್ರಿಯಾತ್ಮಕತೆಯ ಮೋಡ್ ಗೆ ಬದಲಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಸೀಮಿತ ಸೌಕರ್ಯಗಳನ್ನು ಹೊಂದಿರುವ ಬಳಕೆದಾರರು ತಮ್ಮ ಚಾಟ್ ಲಿಸ್ಟ್ ಅಕ್ಸಸ್ ಮಾಡಲು ಸಾಧ್ಯವಿಲ್ಲ. ಅಂದರೆ, ಇಂತಹ ಬಳಕೆದಾರರಿಗೆ ಯಾವುದಾದರೊಂದು ಸಂದೇಶ ಬಂದರೆ, ಅವರು ಕೇವಲ ನೋಟಿಫಿಕೇಶನ್ ಮೂಲಕ ಅದನ್ನು ಓಪನ್ ಮಾಡಿ ಅದಕ್ಕೆ ಉತ್ತರಿಸಬಹುದು. ಈ ಮೋಡ್ ನಲ್ಲಿ ಬಳಕೆದಾರರು ಆಡಿಯೋ, ವಿಡಿಯೋ ಕಾಲ್ ರಿಸಿವ್ ಸೌಕರ್ಯವನ್ನು ಸಹ ತೆಗೆದುಹಾಕಲಾಗುವುದು. ಆದರೆ, ಈ ಬಳಕೆದಾರರಿಗೆ ಕರೆ ಮಾಡುವ ಹಾಗೂ ಸಂದೇಶ ಮಾಡುವ ಸ್ವಾತಂತ್ರ್ಯ ಇರಲಿದೆಯೋ ಅಥವಾ ಇಲ್ಲವೋ ಇಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ- Alert! May 15ರ ಬಳಿಕ ನಿಮ್ಮ ಫೋನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ WhatsApp, ತಕ್ಷಣ ಈ ಕೆಲಸ ಮಾಡಿ
ತನ್ನ ಹೇಳಿಕೆಯಲ್ಲಿ ಮುಂದೆ ಹೇಳಿರುವ ಕಂಪನಿ ಕೆಲ ವಾರಗಳ ನಂತರ ಹೊಸ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರಿಗೆ ವೇದಿಕೆಯಲ್ಲಿ ಕರೆ ಹಾಗೂ ಸಂದೇಶ ಸ್ವೀಕೃತಿ ಸೇವೆ ನಿಂತುಹೋಗಲಿದೆ. ಇದರರ್ಥ ವಾಟ್ಸ್ ಆಪ್ ನ ನೂತನ ನೀತಿ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರು ಮುಂದೆ ಬಹುತೇಕ ಪ್ರಮುಖ ವೈಶಿಷ್ಟ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅಂದರೆ ವಾಟ್ಸ್ ಆಪ್ ತನ್ನ ನೀತಿಯಂತೆಯೇ ಯುಸ್ಲೆಸ್ ಆಗಲಿದೆ.
ಇದನ್ನೂ ಓದಿ- Whatsapp Voice Messageಗೆ ಸಂಬಂಧಿಸಿದಂತೆ ಬಂದಿದೆ ಹೊಸ ವೈಶಿಷ್ಟ್ಯ
ಹೀಗಿರುವಾಗ ವಾಟ್ಸ್ ಆಪ್ ನೀತಿ ಒಪ್ಪಿಕೊಳ್ಳದ ಬಳಕೆದಾರರಿಗೆ ಕೇವಲ ಎರಡು ಆಯ್ಕೆಗಳು ಮಾತ್ರ ಬಾಕಿ ಉಳಿಯಲಿವೆ. ಒಂದು ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳಬೇಕು ಇಲ್ಲದೆ ಹೋದರೆ ವಾಟ್ಸ್ ಆಪ್ ನಂತಹ ಸೇವೆ ನೀಡುವ ಇತರೆ ಆಪ್ ಗಳಾಗಿರುವ Signal ಅಥವಾ Telegram ಗಳತ್ತ ಮುಖಮಾಡಬೇಕು.
ಇದನ್ನೂ ಓದಿ- WhatsApp New Feature:ಶೀಘ್ರದಲ್ಲಿಯೇ WhatsApp ಪರಿಚಯಿಸುತ್ತಿದೆ ಈ ಹೊಸ ವೈಶಿಷ್ಟ್ಯ, ಬಳಕೆದಾರರಿಗೇನು ಲಾಭ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.