ನವದೆಹಲಿ: Alert! ಒಂದು ವೇಳೆ ನೀವೂ ಕೂಡ ಇನ್ಸ್ಟಂಟ್ ಮೆಸ್ಸಿಜಿಂಗ್ ಆಪ್ WhatsApp ಅನ್ನು ಬಳಕೆ ಮಾಡುತ್ತಿದ್ದರೆ, ಮೇ 15 ರೊಳಗೆ ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿ (Privacy Policy) ಯನ್ನು ಒಪ್ಪಿಕೊಳ್ಳಿ. ಇಲ್ಲದೆ ಹೋದಲ್ಲಿನಿಮಗೆ ವಾಟ್ಸ್ ಆಪ್ ಚಲಾಯಿಸುವಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ವಾಟ್ಸ್ ಆಪ್ ಖಾತೆ ಸ್ಥಗಿತಗೊಳ್ಳುವ ಸಾಧ್ಯತೆ ಕೂಡ ಇದೆ. ಜನವರಿ 2021 ರಲ್ಲಿ ಕಂಪನಿ ತನ್ನ ನೂತನ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡಿದೆ. ಈ ನೀತಿಯ ಅಡಿ ಬಳಕೆದಾರರಿಗೆ ಹಲವು ತಿದ್ದುಪಡಿ ಮಾಡಲಾಗಿರುವ ನಿಯಮ ಹಾಗೂ ಷರತ್ತುಗಳನ್ನು ಜಾರಿಗೊಳಿಸಲಾಗಿದೆ.
ಬಳಕೆದಾರರು ಈ ನೀತಿಯನ್ನು ಒಪ್ಪಿಕೊಳ್ಳಲೇ ಬೇಕು ಎಂದು ಕಂಪನಿ ಹೇಳಿದೆ. ಕಂಪನಿಯ ಈ ನೀತಿಯನ್ನು ತಿರಸ್ಕರಿಸುವ ಯಾವುದೇ ಆಯ್ಕೆ ತನ್ನ ಬಳಕೆದಾರರಿಗೆ ನೀಡಿಲ್ಲ. ವಾಟ್ಸ್ ಆಪ್ ನ ಈ ನೂತನ ಪಾಲಸಿ ಫೆಬ್ರವರಿ 8 ರಂದು ಜಾರಿಗೆ ಬರಬೇಕಿತ್ತು. ಆದರೆ. ಇದೀಗ ಕಂಪನಿಯ ಈ ನೀತಿ ಮೇ 15 ರಂದು ಅನ್ವಯಿಸುತ್ತಿದೆ. ವಿವಾದಗಳ ಹಿನ್ನೆಲೆ ಕಂಪನಿ ತನ್ನ ನೂತನ ಗೌಪ್ಯಾತಾ ನೀತಿಯ ಜಾರಿಯನ್ನು ಮೂರು ತಿಂಗಳ ಅವಧಿಗೆ ಮುಂದೂಡಿತ್ತು. ತನ್ನ ನೂತನ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನಿರಂತರ ಸೂಚನೆಗಳನ್ನೂ ರವಾನಿಸುತ್ತಿದೆ. ಅಂದರೆ, ವಾಟ್ಸ್ ಆಪ್ ನ ಈ ನೂತನ ಗೌಪ್ಯತಾ ನೀತಿಯನ್ನು ನೀವು ಮೇ 15 ರೊಳಗೆ ಒಪ್ಪಿಕೊಳ್ಳಲೇಬೇಕು. ಒಂದು ವೇಳೆ ನೀವು ಅದನ್ನು ಒಪ್ಪಿಕೊಳ್ಳದೆ ಹೋದಲ್ಲಿ ಏನಾಗುತ್ತದೆ ತಿಳಿಯೋಣ ಬನ್ನಿ.
ಸ್ಥಗಿತಗೊಳ್ಳಲಿದೆ ನಿಮ್ಮ WhatsApp
ಬರುವ ಮೇ 15 ರಿಂದ ವಾಟ್ಸ್ ಆಪ್ (WhatsApp) ತನ್ನ ನೂತನ ಗೌಪ್ಯತಾ ನೀತಿಯನ್ನು ಜಾರಿಗೆ ತರಲಿದೆ ಮತ್ತು ಮುಂದೆ ಅದನ್ನು ಮತ್ತೆ ತಡೆಹಿಡಿಯುವ ಯಾವುದೇ ಮೂಡ್ ನಲ್ಲಿ ಕಂಪನಿ ಇಲ್ಲ. ಒಂದು ವೇಳೆ ಯಾವುದೇ ಬಳಕೆದಾರ ಕಂಪನಿಯ ನೂತನ ಗೌಪ್ಯತಾ ನೀತಿಯನ್ನು ಮತ್ತು ಷರತ್ತುಗಳನ್ನು ಮೇ 15 ರೊಳಗೆ ಸ್ವೀಕರಿಸದೆ ಹೋದಲ್ಲಿ, ಭವಿಷ್ಯದಲ್ಲಿ ಆ ಬಳಕೆದಾರ ಸಂತೆಶ ರವಾನಿಸುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಸಾಧ್ಯವಿಲ್ಲ ಎಂದು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ. ನೇರ ನುಡಿಗಳಲ್ಲಿ ಹೇಳುವುದಾದರೆ, ಆ ಬಳಕೆದಾರರ ಫೋನ್ ನಲ್ಲಿ ಪಾಲಸಿ ಸ್ವೀಕರಿಸದ ಹೊರತು ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ.
ಇದನ್ನೂ ಓದಿ- WhatsApp New Feature:ಶೀಘ್ರದಲ್ಲಿಯೇ WhatsApp ಪರಿಚಯಿಸುತ್ತಿದೆ ಈ ಹೊಸ ವೈಶಿಷ್ಟ್ಯ, ಬಳಕೆದಾರರಿಗೇನು ಲಾಭ?
120 ದಿನಗಳ ಬಳಿಕ ಖಾತೆ ಡಿಲೀಟ್ ಆಗಲಿದೆ
ಈ ಕುರಿತು ಸ್ಪಷ್ಟನೆ ನೀಡಿರುವ ವಾಟ್ಸ್ ಆಪ್, ಒಂದು ವೇಳೆ ಬಳಕೆದಾರ ಕಂಪನಿಯ ನೂತನ ಗೌಪ್ಯತಾ ನೀತಿ (WhatsApp New Privacy Policy)ಹಾಗೂ ಷರತ್ತು ಗಳನ್ನು ಒಪ್ಪಿಕೊಳ್ಳದಿದ್ದರೆ, ಸಂದೇಶ ಸ್ವೀಕಾರ, ಸಂದೇಶ ರವಾನೆ ಸೇವೆ ಸ್ಥಗಿತಗೊಳ್ಳಲಿದೆ. ಮೇ 15 ರವರೆಗೆ ಅಂಡ್ರಾಯಿಡ್ ಹಾಗೂ ಐಫೋನ್ ನಿಂದ ನೀವು ನಿಮ್ಮ ಚಾಟ್ ಹಿಸ್ಟರಿಯನ್ನು ಡೌನ್ಲೋಡ್ ಮಾಡಬಹದು. 120 ದಿನಗಳ ಬಳಿಕ ಸಕ್ರೀಯವಲ್ಲದ ಖಾತೆಗಳ ಚಾಟ್ ಹಿಸ್ಟರಿ ಅಂದರೆ, ಸಂದೇಶಗಳು,ಕರೆಗಳು, ವಿಡಿಯೋಗಳು, ಫೋಟೋ ಇತ್ಯಾದಿಗಳನ್ನು ಡಿಲೀಟ್ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನೂ ಓದಿ- WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?
ವಾಟ್ಸ್ ಆಪ್ ನ ಈ ನೀತಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ
ವಾಟ್ಸ್ ಆಪ್ ತನ್ನ ಹೊಸ ಗೌಪ್ಯತಾ ನೀತಿ ಹಾಗೂ ಷರತ್ತುಗಳ (WhatsApp New Terms And Conditions) ಕಾರಣ ದೇಶಾದ್ಯಂತ ಬಳಕೆದಾರರ ಆಕ್ರೋಶಕ್ಕೆ ಈಗಾಗಲೇ ಗುರಿಯಾಗಿದೆ. WhatsApp ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಕಂಪನಿಯ ನೂತನ ನೀತಿಗೆ ಜನರಲ್ಲಿ ಭಾರಿ ಆಕ್ರೋಶವಿದೆ. ಆದರೆ, ಈ ನೂತನ ಅಪ್ಡೇಟ್ (WhatsApp Update) ಕೇವಲ ಬಿಸಿನೆಸ್ ಖಾತೆಗಳಿಗೆ (WhatsApp Business Accounts) ಮಾತ್ರ ಇರಲಿದೆ ಎಂದು ವಾಟ್ಸ್ ಆಪ್ ಹೇಳಿಕೊಂಡು ಬರುತ್ತಲೇ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.