ನವದೆಹಲಿ:  WhatsApp Update: ವಾಟ್ಸಾಪ್ ಇಂದು ಇಡೀ ಜಗತ್ತಿನಲ್ಲಿ ಹೆಚ್ಚು ಬಳಸಲಾಗುವ ಸಂದೇಶ ಅಪ್ಲಿಕೇಶನ್ ಆಗಿದೆ. ತನ್ನ ಬಳಕೆದಾರರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಪ್ರಯತ್ನದಲ್ಲಿ, ವಾಟ್ಸಾಪ್ ಆಗಾಗ್ಗೆ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಅದರ ವೈಶಿಷ್ಟ್ಯಗಳಲ್ಲಿ ಬದಲಾವಣೆಗಳು ಕಂಡುಬರುತ್ತಿವೆ ಮತ್ತು ಬಳಕೆದಾರರು ಈ ಹೊಸ ವೈಶಿಷ್ಟ್ಯಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಪ್ರೊಫೈಲ್ ಫೋಟೋಗೆ ಸಂಬಂಧಿಸಿದ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ವಾಟ್ಸಾಪ್ (WhatsApp) ಶೀಘ್ರದಲ್ಲೇ ಕೆಲವು ಬದಲಾವಣೆಗಳನ್ನು ಮಾಡಬಹುದೆಂಬ ಸುದ್ದಿಯಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ .. 


COMMERCIAL BREAK
SCROLL TO CONTINUE READING

WhatsApp ಪ್ರೊಫೈಲ್ ಫೋಟೋಗಳಿಗೆ ಸಂಬಂಧಿಸಿದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುತ್ತದೆ :
ವಾಟ್ಸಾಪ್ (WhatsApp) ಬೀಟಾ ಟ್ರ್ಯಾಕರ್ WABetaInfo ನ ವರದಿಯ ಪ್ರಕಾರ, WhatsApp ಶೀಘ್ರದಲ್ಲೇ ಬಳಕೆದಾರರ ಪ್ರೊಫೈಲ್ ಫೋಟೋಗಳಿಗೆ ಸಂಬಂಧಿಸಿದ ಹೊಸ ಗೌಪ್ಯತೆ ಸೆಟ್ಟಿಂಗ್ ಅನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸೆಟ್ಟಿಂಗ್‌ನೊಂದಿಗೆ, ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋವನ್ನು ಆಯ್ದ ಸಂಖ್ಯೆಯ ಸಂಪರ್ಕಗಳಿಂದ ಮರೆಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ, ವಾಟ್ಸಾಪ್ ಬಳಕೆದಾರರು ಈ ಆಯ್ಕೆಯನ್ನು ಹೊಂದಿಲ್ಲ. 


ಇದನ್ನೂ ಓದಿ- Driving Licence: ಡಿಎಲ್ ಮಾಡಿಸುವ ಮುನ್ನ ಹುಷಾರ್! ಎಚ್ಚರ ತಪ್ಪಿದರೆ ನಷ್ಟ ಆದೀತು


ಆಯ್ದ ಸಂಪರ್ಕಗಳಿಂದ ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಡಬಹುದು :
ಈ ಸೆಟ್ಟಿಂಗ್‌ನೊಂದಿಗೆ, ನಿಮ್ಮ ಪ್ರೊಫೈಲ್ ಫೋಟೊದ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು 'ನನ್ನ ಸಂಪರ್ಕಗಳನ್ನು ಸ್ವೀಕರಿಸಿ' (my contacts accept) ಆಯ್ಕೆಯನ್ನು ಆರಿಸಿಕೊಳ್ಳಬಹುದು, ಇದರಿಂದ ನಿಮ್ಮ ಸಂಪರ್ಕದಲ್ಲಿರುವವರು ನಿಮ್ಮ ಫೋಟೊವನ್ನು ನೋಡಬಹುದು. ಈ ಸಂದರ್ಭದಲ್ಲಿ ಪ್ರಸ್ತುತ ವಾಟ್ಸಾಪ್ ನಿಮಗೆ ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ ಎಂಬುದನ್ನು ನೀವು ಗಮನಿಸಬಹುದು. ಇದರಲ್ಲಿ 'ಎಲ್ಲರೂ', 'ನನ್ನ ಸಂಪರ್ಕಗಳು' ಮತ್ತು 'ಯಾರೂ' ಇಲ್ಲ ಎಂಬ ಆಯ್ಕೆಗಳಿವೆ. ಇದರಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಬಳಸಬಹುದು.


ಯಾರು ಈ ಅಪ್ಡೇಟ್ ಪಡೆಯುತ್ತಾರೆ ?
WABetaInfo ವರದಿಯ ಪ್ರಕಾರ, ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.21.2 ಗಾಗಿ WhatsApp ನ ಈ ವೈಶಿಷ್ಟ್ಯ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದ್ದರಿಂದ ಪ್ರಸ್ತುತ ಈ ಅಪ್ಡೇಟ್ ಅನ್ನು WhatsApp ನ Android ಬಳಕೆದಾರರಿಗೆ ಬಿಡುಗಡೆ ಮಾಡಬಹುದು ಎಂದು ಊಹಿಸಲಾಗಿದೆ. 


ಇದನ್ನೂ ಓದಿ- WhatsApp: ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್


ಆದರೆ WABetaInfo ಒಮ್ಮೆ ಈ ಸೆಟ್ಟಿಂಗ್‌ನ ಸ್ಕ್ರೀನ್‌ಶಾಟ್ ಅನ್ನು ಐಫೋನ್‌ನಲ್ಲಿಯೂ ತೋರಿಸಿದೆ ಎಂದು ಹೇಳಲಾಗಿದೆ. ಇದರ ನಂತರ ಈ ಅಪ್‌ಡೇಟ್ ಅನ್ನು iOS ಬಳಕೆದಾರರಿಗೂ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.


ಸುದ್ದಿಯ ಪ್ರಕಾರ, ಪ್ರೊಫೈಲ್ ಫೋಟೋ ಜೊತೆಗೆ, ಈ ಗೌಪ್ಯತೆ ಸೆಟ್ಟಿಂಗ್ ಅನ್ನು ಕೊನೆಯದಾಗಿ ನೋಡಿದ ಮತ್ತು ಸ್ಟೇಟಸ್ ವೈಶಿಷ್ಟ್ಯಗಳಿಗಾಗಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ವಾಟ್ಸಾಪ್ ಈ ಹೊಸ ವೈಶಿಷ್ಟ್ಯಗಳನ್ನು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆಯೇ ಅಥವಾ ಅವೆಲ್ಲವನ್ನೂ ಒಂದೇ ಅಪ್‌ಡೇಟ್‌ನಲ್ಲಿ ಬಳಕೆದಾರರಿಗೆ ನೀಡುತ್ತದೆಯೇ ಎಂಬ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ