Whatsapp New Feature: ಪ್ರಪಂಚದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಾಟ್ಸಾಪ್ ಇದೀಗ ತನ್ನ ಡ್ರಾಯಿಂಗ್ ಎಡಿಟರ್ ಅನ್ನು ಸುಧಾರಿಸಬಲ್ಲ ಮೂರು ವೈಶಿಷ್ಟ್ಯಗಳ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಈ ವೈಶಿಷ್ಟ್ಯಗಳು ವಾಟ್ಸಾಪ್ ಚಾಟಿಂಗ್ ಶೈಲಿಯನ್ನೇ ಬದಲಾಯಿಸಲಿದ್ದು ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್ ಅಪ್ಡೇಟ್ಸ್ ಬಗ್ಗೆ ವರದಿ ಮಾಡುವ Betainfo, ವಾಟ್ಸಾಪ್ ತನ್ನ ಡ್ರಾಯಿಂಗ್ ಟೂಲ್‌ಗಳನ್ನು ಸುಧಾರಿಸುತ್ತಿದೆ. ವಾಟ್ಸಾಪ್ ಪ್ರಸ್ತುತ ಡ್ರಾಯಿಂಗ್ ಟೂಲ್‌ಗಳಲ್ಲಿ ಟೆಕ್ಸ್ಟ್ ಎಡಿಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯಗಳು ವಾಟ್ಸಾಪ್ ಚಾಟಿಂಗ್ ವೈಶಿಷ್ಟ್ಯವನ್ನು ಇನ್ನೂ ಅದ್ಭುತಗೊಳಿಸಲಿವೆ ಎಂದು ಮಾಹಿತಿ ನೀಡಿದೆ. 


ಇದನ್ನೂ ಓದಿ- Flipkart Electronics Sale: ಕೈಗೆಟುಕುವ ಬೆಲೆಯಲ್ಲಿ ಇಂದೇ ಖರೀದಿಸಿ 5G ಸ್ಮಾರ್ಟ್‌ಫೋನ್


ವಾಟ್ಸಾಪ್‌ನಲ್ಲಿ ಬರಲಿರುವ ಆ ಮೂರು ಬ್ಯಾಂಗಿಂಗ್ ವೈಶಿಷ್ಟ್ಯಗಳೆಂದರೆ:
ಹೊಸ ಫಾಂಟ್‌ನಲ್ಲಿ ಟೈಪ್ ಮಾಡಬಹುದು:

ವಾಟ್ಸಾಪ್‌ನಲ್ಲಿ ಬರಲಿರುವ ಮೊದಲ ಬ್ಯಾಂಗಿಂಗ್ ವೈಶಿಷ್ಟ್ಯವೆಂದರೆ ಫಾಂಟ್. ಈ ವೈಶಿಷ್ಟ್ಯವು ಬಳಕೆದಾರರಿಗೆ ವಿವಿಧ ಫಾಂಟ್‌ಗಳಲ್ಲಿ ಟೈಪ್ ಮಾಡಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಕೀಬೋರ್ಡ್ ಮೇಲೆ ಹಲವಾರು ಫಾಂಟ್ ಆಯ್ಕೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 


ಪಠ್ಯ ಜೋಡಣೆ: 
ವಾಟ್ಸಾಪ್‌ ತರಲಿರುವ ಎರಡನೇ ವೈಶಿಷ್ಟ್ಯವೆಂದರೆ ಪಠ್ಯ ಜೋಡಣೆ. ಈ ಪಠ್ಯ ಜೋಡಣೆ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಜೋಡಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕೂಡ ಪಠ್ಯವನ್ನು ಫಾರ್ಮ್ಯಾಟ್ ಮಾಡಲು ಇದು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- ಯೂಟ್ಯೂಬ್‌ನಲ್ಲಿ ವೀಡಿಯೊ ಲೈಕ್ ಮಾಡಿದರೂ ಹಣ ಸಿಗುತ್ತಾ?


ಬ್ಯಾಕ್ ಗ್ರೌಂಡ್ ಬದಲಾವಣೆ:
ಮೂರನೇ ವೈಶಿಷ್ಟ್ಯವು ಬಳಕೆದಾರರಿಗೆ ಪಠ್ಯದ ಬ್ಯಾಕ್ ಗ್ರೌಂಡ್ ಅನ್ನು ಬದಲಾಯಿಸಲು ಅನುಮತಿಸುತ್ತದೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.