Flipkart Electronics Sale: ಫ್ಲಿಪ್‌ಕಾರ್ಟ್‌ನಲ್ಲಿ ರಿಪಬ್ಲಿಕ್ ಡೇ ಸೇಲ್ ಮುಗಿದ ಬಳಿಕ ಇದೀಗ ಎಲೆಕ್ಟ್ರಾನಿಕ್ಸ್ ಮಾರಾಟ ಆರಂಭವಾಗಿದೆ. ಜನವರಿ 24 ರಿಂದ ಆರಂಭವಾಗಿರುವ ಈ ಸೇಲ್ ಜನವರಿ 31 ರವರೆಗೆ ನಡೆಯಲಿದ್ದು, ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು ಇತ್ತೀಚಿನ 5ಜಿ ಸ್ಮಾರ್ಟ್‌ಫೋನ್ ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ರಿಯಲ್ಮಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಅದ್ಭುತವಾದ ರಿಯಾಯಿತಿಗಳು ಲಭ್ಯವಿವೆ. ಈ ಸೇಲ್‌ನಲ್ಲಿ ಯಾವ್ಯಾವ ಫೋನ್‌ಗಳಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗುತ್ತಿದೆ ಎಂದು ತಿಳಿಯಿರಿ.
Realme 10 Pro+ 5G:
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ 128GB ಸಾಮರ್ಥ್ಯದ Realme 10 Pro+ 5G ಫೋನ್ ಅನ್ನು ಕೇವಲ 4,999 ರೂ.ಗಳಿಗೆ ಖರೀದಿಸುವ ಅವಕಾಶವಿದೆ. ವಾಸ್ತವವಾಗಿ, Realme 10 Pro+ 5G ಲಾಂಚಿಂಗ್ ಬೆಲೆ 25,999 ರೂ.ಗಳು. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 24,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ನೀವು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ, 1,250 ರೂ.ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇದರಲ್ಲಿ 20,000 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಕೂಡ ಸಿಗುತ್ತಿದ್ದು, ನೀವು ಇತ್ತೀಚಿನ ಮಾಡೆಲ್ ನ ಫೋನ್ ಹೊಂದಿದ್ದು ಅದು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಇಷ್ಟು ರಿಯಾಯಿತಿ ಲಭ್ಯವಾಗಲಿದೆ. ನೀವು ಪೂರ್ಣ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಐದು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.
ಇದನ್ನೂ ಓದಿ- ದೊಡ್ಡ ಬದಲಾವಣೆಗೆ ಮುಂದಾದ ನೆಟ್‌ಫ್ಲಿಕ್ಸ್ , ಇನ್ಮುಂದೆ ಈ ಕೆಲಸ ಮಾಡುವ ಮುನ್ನ ಹುಷಾರಾಗಿರಿ
Realme 10 Pro 5G:
20,999 ರೂ. ಮೌಲ್ಯದ Realme 10 Pro 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 18,999 ರೂ.ಗೆ ಪಟ್ಟಿ ಮಾಡಲಾಗಿದೆ. ಇದಲ್ಲದೆ, ಇದರಲ್ಲಿ 950 ರೂ.ಗಳ ಬ್ಯಾಂಕ್ ಆಫರ್, 17,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ.
Realme 9 5G:
ಈ ಫೋನಿನ ಬಿಡುಗಡೆಯ ಬೆಲೆ 20,999 ರೂ. ಆದರೆ, ಇದನ್ನು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ 15,499 ರೂ.ಗಳಿಗೆ ಮಾರಾತಮಾದಲಾಗುತ್ತಿದೆ. ಇದರೊಂದಿಗೆ 14,850 ರೂ.ಗಳ ಚೇಂಜ್ ಆಫರ್ ಕೂಡ ಲಭ್ಯವಿದ್ದು ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ತುಂಬಾ ಕಡಿಮೆ ಬೆಲೆಯಲ್ಲಿ ಫೋನ್ ಖರೀದಿಸಬಹುದು.
ಇದನ್ನೂ ಓದಿ- ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್
Realme GT Neo 3T:
Realme GT Neo 3T ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಬೆಲೆ 34,999 ರೂ.ಗಳು. ಇದನ್ನು ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ 29,999 ರೂ.ಗೆ ಪಟ್ಟಿ ಮಾದಾಗಿದೆ. ಯಾವುದೇ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ಅದರಲ್ಲಿ 5 ಸಾವಿರ ರೂ.ಗಳ ರಿಯಾಯಿತಿ ಲಭ್ಯವಾಗಲಿದ್ದು ಬರೋಬ್ಬರಿ 10 ಸಾವಿರ ರೂ. ರಿಯಾಯಿತಿಯೊಂದಿಗೆ ಈ ಫೋನ್ ಅನ್ನು ನಿಮ್ಮದಾಗಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.