ನವದೆಹಲಿ : WhatsApp Premium : ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ WhatsApp ಅನ್ನು ಈಗ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಈ ಜನಪ್ರಿಯ ಅಪ್ಲಿಕೇಶನ್ ಇದ್ದೇ ಇರುತ್ತದೆ. ಇದು ಉಚಿತ ಸೇವೆಯಾಗಿರುವುದೇ ಇದರ ಜನಪ್ರಿಯತೆಗೆ ಕಾರಣ.  ಇಲ್ಲಿಯವರೆಗೆ ಈ ಆ್ಯಪ್ ಬಳಸಲು ಅಥವಾ ಇದರ ವೈಶಿಷ್ಟ್ಯಗಳನ್ನು ಪಡೆಯಲು ಬಳಕೆದಾರರು ಯಾವುದೇ ಹಣವನ್ನು ಪಾವತಿಸಬೇಕಾಗಿರಲಿಲ್ಲ. ಮೆಟಾ ಒಡೆತನದ ಈ ಕಂಪನಿಯು WhatsApp ಪ್ರೀಮಿಯಂ ಸೇವೆಯನ್ನು ಘೋಷಿಸಿದೆ. ಇದು ಶೀಘ್ರದಲ್ಲೇ ಲಾಂಚ್ ಆಗಲಿದೆ. ಆದರೆ ಇದಕ್ಕಾಗಿ ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

Whatsapp ಪ್ರೀಮಿಯಂ ಎಂದರೇನು ?
WhatsApp ಪ್ರೀಮಿಯಂ ವ್ಯಾಪಾರ ಅಥವಾ ವಿವಿಧ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಜನರಿಗೆ ಸದಸ್ಯತ್ವ ಆಧಾರಿತ ಸೇವೆಯಾಗಿದೆ. ಇದರಲ್ಲಿ, ಬಳಕೆದಾರರು ವ್ಯಾಪಾರ ಖಾತೆಗಳಲ್ಲಿ ವ್ಯಾನಿಟಿ URL, ಮೊದಲಿಗಿಂತ ಹೆಚ್ಚು ಲಿಂಕ್ಡ್ ಡಿವೈಸ್ ಮುಂತಾದ  ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಆದರೆ ಈ ವೈಶಿಷ್ಟ್ಯ ಯಾವಾಗ ಲಾಂಚ್ ಆಗಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮುಂದಿನ 2 ರಿಂದ 3 ತಿಂಗಳಲ್ಲಿ ಇದು ಬಿಡುಗಡೆಯಾಗಬಹುದು  ಎಂದು ಹೇಳಲಾಗಿದೆ. 


ಇದನ್ನೂ ಓದಿ : Most Replayed ವೈಶಿಷ್ಟ್ಯವನ್ನು ಆರಂಭಿಸಿದ ಯುಟ್ಯೂಬ್


Whatsapp ಪ್ರೀಮಿಯಂನಲ್ಲಿ ಏನಿರಲಿದೆ ವಿಶೇಷ : 
Meta ಇನ್ನೂ ಈ ಸೇವೆಯನ್ನು ಅನಾವರಣಗೊಳಿಸಿಲ್ಲ. ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೂಡಾ ಹಂಚಿಕೊಂಡಿಲ್ಲ. ಮಾಧ್ಯಮವೊಂದರ ವರದಿ ಪ್ರಕಾರ, ಇದರಲ್ಲಿ ಬಳಕೆದಾರರಿಗೆ ಇಂತಹ ಹಲವು ವಿಶೇಷ ಫೀಚರ್ ಗಳು ಸಿಗಲಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಅದರ ಸಂಭವನೀಯ ವೈಶಿಷ್ಟ್ಯಗಳ ಬಗ್ಗೆ ಕೆಳಗೆ ತಿಳಿಯಿರಿ.


1. ಹತ್ತು ಸಾಧನಗಳನ್ನು ಲಿಂಕ್ ಮಾಡಬಹುದು :
 ಈಗ 4 ಸಾಧನಗಳಲ್ಲಿ WhatsApp ನ ಸಾಮಾನ್ಯ ಆವೃತ್ತಿಯನ್ನು ಚಲಾಯಿಸಬಹುದು . ಆದರೆ ಪ್ರೀಮಿಯಂ ಸೇವೆಯಲ್ಲಿ, 10 ಹೆಚ್ಚುವರಿ ಸಾಧನಗಳನ್ನು ಲಿಂಕ್ ಮಾಡಬಹುದಾಗಿದೆ. ಇದರೊಂದಿಗೆ, ಅನೇಕ ಜನರು ಕಂಪನಿಯ ಪೇಜ್ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.


2. ವ್ಯಾನಿಟಿ URL :
WhatsApp ಪ್ರೀಮಿಯಂನಲ್ಲಿ, ಬಳಕೆದಾರರು ವ್ಯಾನಿಟಿ URL ನ ಸೌಲಭ್ಯವನ್ನು ಸಹ ಪಡೆಯಬಹುದು. ಅಂದರೆ, ಅದರ ಬಳಕೆದಾರರು ತಮ್ಮ ವ್ಯಾಪಾರಕ್ಕಾಗಿ ಕಸ್ಟಮ್ ಲಿಂಕ್‌ಗಳನ್ನು ರಚಿಸುವ ಆಯ್ಕೆಯನ್ನು ಪಡೆಯುತ್ತಾರೆ. 


ಇದನ್ನೂ ಓದಿ : ನಿಮ್ಮ ಕರೆಯನ್ನು ಯಾರಾದರೂ ರೆಕಾರ್ಡ್ ಮಾಡುತ್ತಿದ್ದಾರೆಯೇ ಎನ್ನುವುದನ್ನು ಸುಲಭಾವಾಗಿ ಕಂಡುಕೊಳ್ಳಿ


3.WhatsApp ಪ್ರೀಮಿಯಂ ವ್ಯಾನಿಟಿ URL :
ತಜ್ಞರ ಪ್ರಕಾರ, ಬಳಕೆದಾರರು ವ್ಯಾನಿಟಿ URL ಅನ್ನು ರಚಿಸಿದಾಗ, ಅವರ ವ್ಯವಹಾರಿಕ  ಫೋನ್ ಸಂಖ್ಯೆಯನ್ನು ಮರೆಮಾಡುವುದು ಸಾಧ್ಯವಾಗುವುದಿಲ್ಲ. ಗ್ರಾಹಕರು WhatsApp ಮೂಲಕ ಸಂಪರ್ಕಿಸಿದಾಗಲೂ ,ಫೋನ್ ನಂಬರ್ ನೋಡುವುದು ಸಾಧ್ಯವಾಗುತ್ತದೆ. ಸಂಖ್ಯೆಯನ್ನು ನೋಡುವುದು ಸಾಧ್ಯವಾಗುತ್ತದೆ. ಈಗ ವ್ಯಾಪಾರದ ಹೆಸರಿನೊಂದಿಗೆ ಸಣ್ಣ ಕಸ್ಟಮ್ URL ಅನ್ನು ರಚಿಸಿ ಇದನ್ನೂ ಇನ್ನಷ್ಟು ಉತ್ತಮಗೊಳಿಸಬಹುದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.