WhatsApp Latest News: ಇನ್ಮುಂದೆ ಯಾರಿಗೂ ತಿಳಿಯದಂತೆ ನೀವು ವಾಟ್ಸ್ ಅಪ್ ನಲ್ಲಿ ಈ ಕೆಲಸ ಮಾಡಬಹುದು!

WhatsApp update: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಆಸಕ್ತಿದಾಯಕ ವೈಶಿಷ್ಟ್ಯವೊಂದನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಇದರ ಸಹಾಯದಿಂದ ಬಳಕೆದಾರರು ವಾಟ್ಸಾಪ್ ಗುಂಪಿನಿಂದ ಗುಂಪಿಯ ಯಾವುದೇ ಸದಸ್ಯರಿಗೆ ತಿಳಿಯದಂತೆ ನಿರ್ಗಮಿಸಲು ಸಾಧ್ಯವಾಗಲಿದೆ.

Written by - Nitin Tabib | Last Updated : May 17, 2022, 08:58 PM IST
  • ಶೀಘ್ರದಲ್ಲಿಯೇ ವಾಟ್ಸ್ ಆಪ್ ನಿಂದ ಹೊಸ ವೈಶಿಷ್ಟ್ಯ ಜಾರಿ
  • ಇದರಿಂದ ನೀವು ಯಾರಿಗೂ ತಿಳಿಯದಂತೆ ಗುಂಪನಿಂದ ಹೊರಹೋಗಬಹುದು
  • ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ
WhatsApp Latest News: ಇನ್ಮುಂದೆ ಯಾರಿಗೂ ತಿಳಿಯದಂತೆ ನೀವು ವಾಟ್ಸ್ ಅಪ್ ನಲ್ಲಿ ಈ ಕೆಲಸ ಮಾಡಬಹುದು! title=
WhatsApp New Feature

WhatsApp update: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಆಸಕ್ತಿದಾಯಕ ವೈಶಿಷ್ಟ್ಯವೊಂದನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಇದರ ಸಹಾಯದಿಂದ ಬಳಕೆದಾರರು ವಾಟ್ಸಾಪ್ ಗುಂಪಿನಿಂದ ಗುಂಪಿಯ ಯಾವುದೇ ಸದಸ್ಯರಿಗೆ ತಿಳಿಯದಂತೆ ನಿರ್ಗಮಿಸಲು ಸಾಧ್ಯವಾಗಲಿದೆ. ಪ್ರಸ್ತುತ, ವಾಟ್ಸ್ಅಪ್ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಬೀಟಾ ಪರೀಕ್ಷಕರಿಗೆ ಇನ್ನೂ ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ.

ಆದರೆ ಗ್ರೂಪ್ ಅಡ್ಮಿನ್‌ಗೆ ಗೊತ್ತಾಗಲಿದೆ
WhatsApp ಅನ್ನು ಟ್ರ್ಯಾಕ್ ಮಾಡುವ WABetainfo ವೆಬ್‌ಸೈಟ್‌ನ ವರದಿಯ ಪ್ರಕಾರ, ಬಳಕೆದಾರರು ಗುಂಪು ಚಾಟ್‌ನಿಂದ ನಿರ್ಗಮಿಸಲು ಬಯಸಿದರೆ, ಅವರ ಅಧಿಸೂಚನೆಯು ಬರುವುದಿಲ್ಲ. ಆದರೆ ಗ್ರೂಪ್ ಎಕ್ಸಿಟ್ ಮಾಡುತ್ತಿರುವ ಈ ವೈಶಿಷ್ಟ್ಯ  ಬಂದ ನಂತರ ಈ ಮಾಹಿತಿಯು ಗ್ರೂಪ್ ಅಡ್ಮಿನ್‌ಗೆ ಮಾತ್ರ ಲಭ್ಯವಾಗಲಿದ್ದು, ಗುಂಪಿನ ಉಳಿದ ಸದಸ್ಯರಿಗೆ ಈ ಕುರಿತು ಯಾವುದೇ ಮಾಹಿತಿ ಹೋಗುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ-UPI ಅಪ್ಲಿಕೇಶನ್ ಮೂಲಕ ATM ನಿಂದ ಹಣ ಪಡೆಯಬಹುದು..! ಹೇಗೆ ಇಲ್ಲಿದೆ ನೋಡಿ

Android-ios ಎರಡೂ ಬಳಕೆದಾರರಿಗಾಗಿ ಇದನ್ನು ಜಾರಿಗೊಳಿಸಲಾಗುವುದು
ಪ್ರಸ್ತುತ, ಯಾವುದೇ ಬಳಕೆದಾರರು ಗುಂಪು ಚಾಟ್‌ನಿಂದ ನಿರ್ಗಮಿಸಿದರೆ, ವಾಟ್ಸಾಪ್ ವ್ಯವಸ್ಥೆಯು ಗುಂಪಿನ ಎಲ್ಲಾ ಸದಸ್ಯರಿಗೆ ನೀವು ಗುಂಪು ತೊರೆದಿರುವ ಕುರಿತು ಮಾಹಿತಿಯನ್ನು ರವಾನಿಸುತ್ತದೆ. ಆದರೆ,  ಮುಂಬರುವ ದಿನಗಳಲ್ಲಿ WhatsApp ಈ ವೈಶಿಷ್ಟ್ಯವನ್ನು Android ಮತ್ತು iOS ಬಳಕೆದಾರರಿಗಾಗಿ ಹೊರತರಲಿದೆ. ವರದಿಯ ಪ್ರಕಾರ, ಈ ವೈಶಿಷ್ಟ್ಯವು ಪ್ರಸ್ತುತ WhatsApp ಡೆಸ್ಕ್‌ಟಾಪ್ ಬೀಟಾದ ಅಭಿವೃದ್ಧಿ ಹಂತದಲ್ಲಿದೆ. ಇದು ಶೀಘ್ರದಲ್ಲೇ ಬಳಕೆದಾರರಿಗಾಗಿ ಜಾರಿಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ-ಡ್ರೈವಿಂಗ್ ಲೈಸೆನ್ಸ್ ಕೈಯಲ್ಲಿಲ್ಲದಿದ್ದರೂ ಬೀಳುವುದಿಲ್ಲ ದಂಡ, ಈ ವಿಧಾನವನ್ನು ಅನುಸರಿಸಿಕೊಳ್ಳಿ

ಶೀಘ್ರದಲ್ಲೇ ಒಂದು ಗುಂಪಿಗೆ 512 ಜನರನ್ನುಸೇರಿಸಲು ಸಾಧ್ಯವಾಗಲಿದೆ
ಇತ್ತೀಚೆಗೆ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಹಲವು ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಇದು ಎಮೋಜಿ ಪ್ರತಿಕ್ರಿಯೆಗಳು, ದೊಡ್ಡ ಫೈಲ್‌ಗಳನ್ನು ಕಳುಹಿಸುವುದರಿಂದ ಹಿಡಿದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೇ ವೇಳೆ, ಕಂಪನಿಯು ಶೀಘ್ರದಲ್ಲೇ ಇಂತಹದೊಂದು ವೈಶಿಷ್ಟ್ಯವನ್ನು ಜಾರಿಗೆ ತರುವುದಾಗಿ ಪ್ರಕಟಿಸಿದ್ದು, ಇದರಲ್ಲಿ 512 ಜನರನ್ನು ಏಕಕಾಲದಲ್ಲಿ ಗುಂಪಿಗೆ ಸೇರಿಸಬಹುದು. ಪ್ರಸ್ತುತ ಕೇವಲ 256 ಸದಸ್ಯರನ್ನು ಮಾತ್ರ ಒಂದು ಗುಂಪಿಗೆ ಸೇರಿಸಬಹುದಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News