ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಜಾಲತಾಣವಾದ ವಾಟ್ಸಾಪ್ ತನ್ನ ಬಳಕೆದಾರರಿಗೆ ವಿಧಿಸಿರುವ ನೂತನ ಗೌಪ್ಯತಾ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್, ಫೇಸ್ ಬುಕ್ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್ ನೂತನ ಗೌಪ್ಯತಾ ನೀತಿ(WhatsApp Privacy Policy) ಕುರಿತು ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.


ಇದನ್ನೂ ಓದಿ : Infinix Hot 10S- 6000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ಹಾಟ್ 10 ಎಸ್


ವಾಟ್ಸಾಪ್(WhatsApp) ನೂತನ ಗೌಪ್ಯತಾ ನೀತಿ ಮೇ.15 ರಿಂದ ಜಾರಿಗೆ ಬಂದಿದ್ದು, ಇದು ಬಳಕೆಗಾರರ ಗೌಪ್ಯತಾ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.


ಇದನ್ನೂ ಓದಿ : ಭಾರತದಲ್ಲಿ ಲಾಂಚ್ ಆಯಿತು Amazon miniTV , ಈ ಎಲ್ಲಾ ವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸಬಹುದು


ನಮ್ಮ ನೀತಿ ಜಾರಿಗೆ ತರುವುದನ್ನು ಮುಂದೂಡಲಾಗಿಲ್ಲ. ಮೇ.15 ರಿಂದಲೇ ಜಾರಿಗೆ ಬಂದಿದೆ. ನೂತನ ನೀತಿ(New Policy)ಗಳನ್ನು ಒಪ್ಪದ ಬಳಕೆದಾರರ ಖಾತೆಗಳನ್ನು ರದ್ದು ಪಡಿಸುವದಿಲ್ಲ. ಪ್ರೋತ್ಸಾಹ ನೀಡುವಂತೆ ಬಳಕೆದಾರರ ಮನವೊಲಿಸುವ ಪ್ರಯತ್ನ ಮಾಡುತ್ತೇವೆಂದು ವಿಚಾರಣೆ ವೇಳೆ ವಾಟ್ಸಾಪ್ ಹೇಳಿದೆ.


ಇದನ್ನೂ ಓದಿ : Realme 8 5G ಹೊಸ ಶೇಖರಣಾ ಮಾದರಿಯ ಬೆಲೆ, ವೈಶಿಷ್ಟ್ಯ ತಿಳಿಯಿರಿ


ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಹೊಸ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್ ಮತ್ತು  ಫೇಸ್ ಬುಕ್(WhatsApp-Facebook) ಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್.3ಕ್ಕೆ ಮುಂದೂಡಿದೆ.


ಇದನ್ನೂ ಓದಿ : ಜಿಯೋ ತಂದಿಗೆ ಎರಡು ಅಗ್ಗದ ರೀಚಾರ್ಜ್ ಪ್ಲಾನ್ ; ರೀಚಾರ್ಜ್ ಮಾಡಿದರೆ ಅದೇ ಮೊತ್ತದ ಮತ್ತೊಂದು ರೀಚಾರ್ಜ್ ಫ್ರೀ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.