ಭಾರತದಲ್ಲಿ ಲಾಂಚ್ ಆಯಿತು Amazon miniTV , ಈ ಎಲ್ಲಾ ವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸಬಹುದು

ಮಿನಿಟಿವಿಯ  ಘೋಷಣೆಯೊಂದಿಗೆ, ಅಮೆಜಾನ್  ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ Flipkartಗೆ  ಬಹು ದೊಡ್ಡ ಸ್ಪರ್ಧೆಯನ್ನೇ ನೀಡಿದೆ. ಫ್ಲಿಪ್‌ಕಾರ್ಟ್ ವಿಡಿಯೋ  ಹೆಸರಿನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನದೇ ಆದ ಅಪ್ಲಿಕೇಶನ್‌ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ನಡೆಸುತ್ತಿದೆ.   

Written by - Ranjitha R K | Last Updated : May 17, 2021, 01:19 PM IST
  • ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಮಿನಿಟಿವಿ ಸೇವೆ ಭಾರತದಲ್ಲಿ ಪ್ರಾರಂಭ
  • ವೆಬ್ ಸರಣಿಗಳು, ಕಾಮಿಡಿ ಶೋ ಇತರ ಕಂಟೆಂಟ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು.
  • ಪ್ರಸ್ತುತ, ಈ ಸೇವೆಯು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.
ಭಾರತದಲ್ಲಿ ಲಾಂಚ್ ಆಯಿತು Amazon miniTV , ಈ ಎಲ್ಲಾ ವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸಬಹುದು title=
ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಮಿನಿಟಿವಿ ಸೇವೆ (file photo)

ನವದೆಹಲಿ : Amazon miniTV ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ. ಇದೊಂದು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದರಲ್ಲಿ ಅನೇಕ ವೆಬ್ ಸರಣಿಗಳು, ಕಾಮಿಡಿ ಶೋ,  ಫ್ಯಾಷನ್ ವಿಡಿಯೋಗಳು ಪ್ರದರ್ಶನಗೊಳ್ಳಲಿವೆ. ಆಂಡ್ರಾಯ್ಡ್ ಬಳಕೆದಾರರು ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್‌ ಮೂಲಕ  ಅಮೆಜಾನ್ ಮಿನಿಟಿವಿ ( Amazon miniTV) ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನು ಪಡೆಯಲಿದ್ದಾರೆ. ಇದು ಫ್ರೀಯಾಗಿರಲಿದ್ದು, ಈ ಶೋಗಳಲ್ಲಿ ಜಾಹೀರಾತುಗಳನ್ನು ಕೂಡಾ ತೋರಿಸಲಾಗುತ್ತದೆ.  ಅಮೆಜಾನ್ ಅಪ್ಲಿಕೇಶನ್‌ನ ಹೋಂ ಪೇಜ್ ನಲ್ಲಿ ಮಿನಿಟಿವಿಯ ಬ್ಯಾನರ್ ಕಾಣಿಸುತ್ತದೆ. ಇದರಲ್ಲಿ ಅನೇಕ ಯೂಟ್ಯೂಬ್ ಕಂಟೆಟರ್ಸ್ ನ ಕಂಟೆಂಟ್ ಇರಲಿದೆ.

ಮಿನಿಟಿವಿಯ (MiniTV) ಘೋಷಣೆಯೊಂದಿಗೆ, ಅಮೆಜಾನ್ (Amazon) ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ Flipkartಗೆ  ಬಹು ದೊಡ್ಡ ಸ್ಪರ್ಧೆಯನ್ನೇ ನೀಡಿದೆ. ಫ್ಲಿಪ್‌ಕಾರ್ಟ್ ವಿಡಿಯೋ (Flipkart Video) ಹೆಸರಿನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನದೇ ಆದ ಅಪ್ಲಿಕೇಶನ್‌ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ನಡೆಸುತ್ತಿದೆ. ಅಮೆಜಾನ್‌ನ ಮಿನಿ ಟಿವಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಇದಕ್ಕೂ ಮುಖ್ಯವಾದ ವಿಚಾರ ಎಂದರೆ, ಇದೊಂದು ಫ್ರೀ ಸರ್ವಿಸ್ ಅಂದರೆ ಇಲ್ಲಿ ವಿಡಿಯೋ ವೀಕ್ಷಣೆಗೆ ದುಡ್ಡು ಪಾವತಿಸಬೇಕಾಗಿಲ್ಲ.   

ಇದನ್ನೂ ಓದಿ Realme 8 5G ಹೊಸ ಶೇಖರಣಾ ಮಾದರಿಯ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಅಮೆಜಾನ್ ಮಿನಿಟಿವಿ ಪ್ರೈಮ್ ವೀಡಿಯೊದಿಂದ ಹೇಗೆ ಭಿನ್ನ : 
ಪ್ರೈಮ್ ವಿಡಿಯೋ ಪ್ರತ್ಯೇಕ ಅಪ್ಲಿಕೇಶನ್ ಆಗಿದೆ. ಇದಕ್ಕಾಗಿ ಬಳಕೆದಾರರು ಅಮೆಜಾನ್‌ನ ಪ್ರೈಮ್ (Amazon Prime) ಮೆಂಬರ್‌ಶಿಪ್ ಖರೀದಿಸಬೇಕು. ಮೂರು ತಿಂಗಳ ಸಬ್ ಸ್ಕ್ರಿಪ್ಶನ್ ಗೆ  29 ರೂ. ಮತ್ತು ಒಂದು ವರ್ಷಕ್ಕೆ 999 ರೂ ಪಾವತಿಸಬೇಕಾಗುತ್ತದೆ.  ಪ್ರೈಮ್ ವೀಡಿಯೊಗಳಲ್ಲಿ, ಬಳಕೆದಾರರಿಗೆ ಅಮೆಜಾನ್ ಒರಿಜಿನಲ್, ಇತರ ಕಂಟೆಂಟ್ ಗಳಿಗೂ ಆಕ್ಸೆಸ್ ಇರುತ್ತದೆ.  ಆದರೆ ಮಿನಿ ಟಿವಿಯಲ್ಲಿ, ವೆಬ್ ಸರಣಿಗಳು, ಕಾಮಿಡಿ ಶೋ, ಟೆಕ್ ಸುದ್ದಿಗಳು, ಆಹಾರ, ಸೌಂದರ್ಯ ಮತ್ತು ಫ್ಯಾಷನ್ ವೀಡಿಯೊಗಳನ್ನು ವಿಕ್ಷಿಸುವ ಅವಕಾಶವಿರುತ್ತದೆ. ಇದನ್ನು ಅಮೆಜಾನ್ (Amazon) ಅಪ್ಲಿಕೇಶನ್‌ನಲ್ಲಿಯೇ ವೀಕ್ಷಿಸಬಹುದು. 

Flipkart Videoಗೆ  ನೀಡಲಿದೆ ಟಕ್ಕರ್ : 
ಅಮೆಜಾನ್ ಮಿನಿಟಿವಿ ಪ್ಲಾಟ್‌ಫಾರ್ಮ್ ಪ್ರಸ್ತುತ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. IOS  ಮತ್ತು ಮೊಬೈಲ್ ವೆಬ್ ಓವರ್ ಯೂಸರ್ಸ್ ಗೂ ಪರಿಚಯಿಸಲಿದೆ. ಫ್ಲಿಪ್‌ಕಾರ್ಟ್ ತನ್ನ ಅಪ್ಲಿಕೇಶನ್‌ನಲ್ಲಿನ ವೀಡಿಯೊ ಸೇವೆಯನ್ನು 2019 ರಲ್ಲಿ ಪ್ರಾರಂಭಿಸಿತು. ಅಮೆಜಾನ್‌ನಂತೆ, ಈ ಸೇವೆಯು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ (Flikart App) ಮಾತ್ರ ಲಭ್ಯವಿದೆ. ಇದು 5000 ಕ್ಕೂ ಹೆಚ್ಚು ಟಿವಿ ಶೋಗಳು,  ವೆಬ್ ಸರಣಿಗಳು ಮತ್ತು ಚಲನಚಿತ್ರಗಳನ್ನು ಹೊಂದಿದೆ. IOS ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆ ಲಭ್ಯವಿದೆ.

ಇದನ್ನೂ ಓದಿ : ಜಿಯೋ ತಂದಿಗೆ ಎರಡು ಅಗ್ಗದ ರೀಚಾರ್ಜ್ ಪ್ಲಾನ್ ; ರೀಚಾರ್ಜ್ ಮಾಡಿದರೆ ಅದೇ ಮೊತ್ತದ ಮತ್ತೊಂದು ರೀಚಾರ್ಜ್ ಫ್ರೀ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News