Whatsapp New Feature: ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಅಪ್ಲಿಕೇಶನ್‌ಗಳಲ್ಲಿ ನಿಮಗೆ ನೀವೇ ಸಂದೇಶವನ್ನು ಕಳುಹಿಸಬಹುದು. ಆದರೆ, ಇದೀಗ ಈ ವೈಶಿಷ್ಟ್ಯವನ್ನು ವಾಟ್ಸ್ ಆಪ್ ನಲ್ಲಿ ಕೂಡ ಪ್ರಾರಂಭಿಸಲಾಗಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ, ಬಳಕೆದಾರರು ಆ್ಯಪ್‌ನಲ್ಲಿ ತಮಗೆ ತಾವೇ ಸಂದೇಶಗಳನ್ನು ಕಳುಹಿಸಿಕೊಳ್ಳಬಹುದು. ವಾಟ್ಸಾಪ್‌ನಲ್ಲಿ ನಿಮಗೆ ನೀವೇ ಮೆಸೇಜ್ ಕಳುಹಿಸಿ ವೈಶಿಷ್ಟ್ಯಕ್ಕಾಗಿ ಬಳಕೆದಾರರು ದೀರ್ಘ ಕಾಲದಿಂದ ಕಾಯುತ್ತಿದ್ದರು. ಆದರೆ, ಇದೀಗ ವಾಟ್ಸ್ ಆಪ್ ಬಳಕೆದಾರರ ಈ ನಿರೀಕ್ಷೆಗೆ ತೆರೆ ಎಳೆದಿದೆ.


COMMERCIAL BREAK
SCROLL TO CONTINUE READING

ವಾಟ್ಸ್ ಆಪ್ ಒದಗಿಸಿರುವ ಈ ಸೌಲಭ್ಯದಿಂದ ಬಳಕೆದಾರರು ಹಲವು ರೀತಿಯ ಕೆಲಸಗಳನ್ನು ಮಾಡಬಹುದು. ನೆನಪಿನಲ್ಲಿಟ್ಟುಕೊಳ್ಳಲು ಟಿಪ್ಪಣಿಗಳನ್ನು ತಯಾರಿಸಬಹುದು, ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ಸಿದ್ಧಪಡಿಸಬಹುದು, ಶಾಪಿಂಗ್ ಪಟ್ಟಿಗಳನ್ನು ಮಾಡಬಹುದು. ಇತ್ತೀಚಿನ ಅಪ್‌ಡೇಟ್‌ನಂತೆ, ಇದನ್ನು ಎಲ್ಲಾ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ನಿಮಗಾಗಿ ಧ್ವನಿ ಮೆಮೊಗಳನ್ನು ಸಹ ನೀವು ಇದರಿಂದ ಕಳುಹಿಸಿಕೊಳ್ಳಲು ಸಾಧ್ಯವಾಗಲಿದೆ.


ಇದನ್ನೂ ಓದಿ-ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್ಬಿಐ! ಯಾವುದೇ ವ್ಯವಹಾರ ನಡೆಸದಿದ್ದರೂ ಆಟೋ ಡೆಬಿಟ್ ಆಗುತ್ತಿದೆ ಹಣ!


ನಮಗೆ ನಾವೇ ಸಂದೇಶಗಳನ್ನು ಹೇಗೆ ಕಳುಹಿಸಬಹುದು
ಒಂದು ವೇಳೆ ನೀವೂ ಕೂಡ ನಿಮಗೆ ನೀವೇ ವಾಟ್ಸ್ ಆಪ್ ಸಂದೇಶವನ್ನು ಕಳುಹಿಸಲು ಬಯಸಿದರೆ, ನೀವು ಮೆನುವನ್ನು ತೆರೆಯಬೇಕು ಮತ್ತು ಸಂಪರ್ಕಗಳಿಗೆ ಹೋಗಬೇಕು. ಆ ಪಟ್ಟಿಯ ಮೇಲ್ಭಾಗದಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಸಂದೇಶವನ್ನು ಕಳುಹಿಸಬಹುದು. ಇಲ್ಲಿ ವಿಶೇಷ ವಿಷಯವೆಂದರೆ ನೀವು ಕಳುಹಿಸುವ ಸಂದೇಶಗಳು ಸ್ವಯಂಚಾಲಿತವಾಗಿ ಸಿಂಕ್ ಆಗುತ್ತವೆ. ನೀವು ಬೇರೆ ಯಾವುದೇ ಸಾಧನದಲ್ಲಿ ವಾಟ್ಸ್ ಆಪ್ ಅನ್ನು ತೆರೆದರೆ, ನಂತರ ಸಂದೇಶಗಳು ಅದರಲ್ಲಿಯೂ ಕೂಡ ಕಾಣಿಸಲಿವೆ.


ಇದನ್ನೂ ಓದಿ-ನೌಕರ ವರ್ಗದವರಿಗೊಂದು ಕಹಿ ಸುದ್ದಿ, 2023 ರಲ್ಲಿ ಭಾರಿ ಪ್ರಮಾಣದಲ್ಲಿ ನೌಕರಿ ಕಡಿತಕ್ಕೆ ಮುಂದಾಗಲಿವೆ ಟೆಕ್ ಕಂಪನಿಗಳು


ನೀವು ಈ ವೈಶಿಷ್ಟ್ಯವನ್ನು ಬಳಸಲು ಬಯಸುತ್ತಿದ್ದರೆ, ಮೊದಲು ನಿಮಗೆ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಅಗತ್ಯವಿರುತ್ತದೆ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ web.whatsapp.com/ ಗೆ ಹೋಗಿ. ನಿಮ್ಮ ವಾಟ್ಸ್ ಆಪ್ ನಲ್ಲಿ ಈ ವೈಶಿಷ್ಟ್ಯವನ್ನು ನೀವು ನೋಡದಿದ್ದರೆ, ನಂತರ ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.