WhatsApp ಬಿಸ್ನೆಸ್ ತನ್ನ ಬಳಕೆದಾರರಿಗೆ ಅದ್ಭುತವಾದ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದೆ. ಹೌದು, ಇನ್ಮುಂದೆ ಬಳಕೆದಾರರು ತ್ವರಿತ ಸಂದೇಶ ಅಪ್ಲಿಕೇಶನ್‌ನಲ್ಲಿ ಶಾಪಿಂಗ್‌ನಿಂದ ಟಿಕೆಟ್‌ಗಳನ್ನು ಕಾಯ್ದಿರಿಸುವವರೆಗೆ ಅನೇಕ ಕೆಲಸಗಳನ್ನು ಮಾಡಬಹುದು. ಇದಕ್ಕಾಗಿ, ಕಂಪನಿಯು ಹಲವಾರು ವಿಭಿನ್ನ ಪಾವತಿ ಆಯ್ಕೆಗಳನ್ನು ಸಹ ಬಿಡುಗಡೆ ಮಾಡಿದೆ. ಇಂದು ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಶೀಘ್ರದಲ್ಲೇ ಬಳಕೆದಾರರು ವಾಟ್ಸಾಪ್‌ನಲ್ಲಿ ಶಾಪಿಂಗ್ ಮತ್ತು ಪಾವತಿಯ ಸೌಲಭ್ಯವನ್ನು ಪಡೆಯಲು ಪ್ರಾರಂಭಿಸಲಿದ್ದಾರೆ ಎಂದಿದ್ದಾರೆ. ಈಗ WhatsApp ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಈ ವೈಶಿಷ್ಟ್ಯದ ಆಗಮನದ ನಂತರ, WhatsApp Pay ನೇರವಾಗಿ PhonePe, Google Pay, Paytm ನೊಂದಿಗೆ ಸ್ಪರ್ಧಿಸಲಿದೆ. ದೇಶದ 50 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಇನ್ಮುಂದೆ ಮನೆಯಿಂದಲೇ ಯಾವುದೇ ಜಂಜಾಟಿಲ್ಲದೆ ನಿಮ್ಮ ವಿವಾಹ ನೋಂದಣಿ ಮಾಡಿ ಪ್ರಮಾಣಪತ್ರ ಪಡೆದುಕೊಳ್ಳಿ!


ಎಲ್ಲಾ UPI ಅಪ್ಲಿಕೇಶನ್‌ಗಳು ಸೇರಿದಂತೆ ಇತರ ಪಾವತಿ ವಿಧಾನಗಳನ್ನು ಸಹ ನಾವು ಬೆಂಬಲಿಸಲಿದ್ದೇವೆ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಇದರೊಂದಿಗೆ, ಜನರು ವಾಟ್ಸಾಪ್ ಚಾಟ್‌ನಲ್ಲಿ ಶಾಪಿಂಗ್ ಮಾಡಲು ಮತ್ತು ಪಾವತಿ ಮಾಡಲು ಸುಲಭವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಭೂಮಿಯ ಮೇಲೆ ಕೋಟ್ಯಾಂತರ ಬೆಲೆಬಾಳುವ ಆ ವಸ್ತು ಚಂದ್ರನ ಅಂಗಳದಲ್ಲಿದೆಯಂತೆ, ಈಗ ಶುರುವಾಗಲಿದೆ ರಿಯಲ್ ರೇಸ್!


ನೀವು ಯಾವಾಗ ಶಾಪಿಂಗ್ ಮಾಡಬಹುದು?
ಸೆಪ್ಟೆಂಬರ್ 20 ರಿಂದ, ಜನರು WhatsApp ವ್ಯಾಪಾರದಲ್ಲಿ ತಮ್ಮ ಕಾರ್ಟ್‌ಗೆ ಸರಕುಗಳನ್ನು ಸೇರಿಸಲು ಮತ್ತು ಎಲ್ಲಾ UPI ಅಪ್ಲಿಕೇಶನ್‌ಗಳು, ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳಂತಹ ಪಾವತಿ ವಿಧಾನಗಳ ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಮಾರ್ಕ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಭಾರತೀಯ ವ್ಯವಹಾರಗಳಿಗೆ ಈ ಸೌಲಭ್ಯವನ್ನು ಪ್ರಾರಂಭಿಸಲು, Meta ಫಿನ್‌ಟೆಕ್ ಕಂಪನಿಗಳಾದ RazorPay ಮತ್ತು PayU ಜೊತೆಗೆ ಪಾರ್ಟ್ನರ್ಶಿಪ್ ಮಾಡಿಕೊಂಡಿರುದಾಗಿ ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.