WhatsApp Scam Alert: ತಂತ್ರಜ್ಞಾನ ಮುಂದುವರೆದಂತೆ ಆನ್‌ಲೈನ್ ವಂಚನೆ ಪ್ರಕರಣಗಳು ಕೂಡ ನಿರಂತರವಾಗಿ ಹೆಚ್ಚಾಗುತ್ತಿದೆ. ಜನರು ಕಷ್ಟಪಟ್ಟು ದುಡಿದ ಹಣವನ್ನು ಸ್ಕ್ಯಾಮರ್‌ಗಳು ಕ್ಷಣಾರ್ಧದಲ್ಲಿ ಲೂಟಿ ಮಾಡುತ್ತಾರೆ. ವಾಸ್ತವವಾಗಿ,  ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಹೊಸ ರೀತಿಯ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ. ಇದರಲ್ಲಿ ವಂಚಕರು ವಾಟ್ಸಾಪ್ ಕರೆ ಮೂಲಕ ಬಳಕೆದಾರರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಇತ್ತೀಚೆಗೆ ಯೂಟ್ಯೂಬ್ ಸ್ಕ್ಯಾಮ್, ಒಟಿಪಿ ಸ್ಕ್ಯಾಮ್, ವರ್ಕ್ ಫ್ರಮ್ ಹೋಮ್ ಹಗರಣಗಳು ಮುನ್ನಲೆಗೆ ಬಂದಿದ್ದವು, ಇದೀಗ ಇದರ ಬೆನ್ನಲ್ಲೇ ಮತ್ತೊಂದು ಆನ್‌ಲೈನ್ ಹಗರಣದ ಸುದ್ದಿ ವರದಿಯಾಗಿದೆ. ವಾಟ್ಸಾಪ್ ಕಾಲ್ ಸ್ಕ್ಯಾಮ್ ಸಂಬಂಧಿತ ವರದಿಗಳು ಆತಂಕ ಸೃಷ್ಟಿಸಿವೆ. ಈ ಹಗರಣದಲ್ಲಿ ವಂಚಕರು ವಾಟ್ಸಾಪ್ ಮೂಲಕ ಜನರಿಗೆ ಕರೆ ಮಾಡ್ ಅವರನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. 


ಲಭ್ಯವಿರುವ ಮಾಹಿತಿಯ ಪ್ರಕಾರ, ಸ್ಕ್ಯಾಮರ್‌ಗಳು  ವಾಟ್ಸಾಪ್‌ನಲ್ಲಿ  +92 ನಿಂದ ಆರಂಭವಾಗುವ ಸಂಖ್ಯೆಯಿಂದ ಕರೆ ಮಾಡುತ್ತಿದ್ದಾರೆ. +92 ದೇಶದ ಕೋಡ್‌ನಿಂದ ಪ್ರಾರಂಭವಾಗುವ ವಾಟ್ಸಾಪ್ ಕರೆಗಳಲ್ಲಿ ಜನರು ಫ್ರೀ ಐಫೋನ್ ಆಫರ್ ಸೇರಿದಂತೆ ಹಲವು ರೀತಿಯ ಆಮಿಷಗಳನ್ನು ಒಡ್ಡಿ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ-  WhatsApp 'Edit' ವೈಶಿಷ್ಟ್ಯ ಇಲ್ಲಿದೆ; ಈ ಹಂತ-ಹಂತವಾಗಿ ನಿಮ್ಮ ಮೆಸೇಜ್ ಗಳನ್ನು ಸರಿಪಡಿಸುವುದು  ಹೇಗೆ  ಎಂಬುದನ್ನು ಪರಿಶೀಲಿಸಿ


ವಂಚಕರಿಂದ ಸುಮಾರು 7 ಲಕ್ಷ ರೂ.ಗಳನ್ನು ಕಳೆದುಕೊಂಡ ವ್ಯಕ್ತಿ!
ವರದಿಯೊಂದರ ಪ್ರಕಾರ, ವಾಟ್ಸಾಪ್‌ನಲ್ಲಿ ಮಾತ್ರವಲ್ಲದೆ, ಮೆಟಾ ಮಾಲೀಕತ್ವದ ಮತ್ತೊಂದು ಪ್ರಸಿದ್ದ ಸಾಮಾಜಿಕ ಜಾಲತಾನವಾದ ಇನ್ಸ್ಟಾಗ್ರಾಂನಿಂದಲೂ ಕೂಡ ಅಹಮದಾಬಾದ್‌ನ ವ್ಯಕ್ತಿಯೊಬರು ವಂಚನೆಗೆ ಬಲಿಯಾಗಿ ಬರೋಬ್ಬರಿ  7 ಲಕ್ಷ ರೂಪಾಯಿ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಇನ್ಸ್ಟಾಗ್ರಾಂ ಗ್ರಾಹಕರೊಬ್ಬರಿಗೆ  ಐಫೋನ್ 14 ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದ ವಂಚಕರು ಆ್ಯಪ್‌ನಲ್ಲಿ ಸಂದೇಶವನ್ನು ಕಳುಹಿಸಿ, "ಅಭಿನಂದನೆಗಳು! ತಾವು ಉಚಿತ iPhone 14 ಅನ್ನು ಗೆದ್ದಿದ್ದೀರಿ. ಇದಕ್ಕಾಗಿ ನೀವು ನೀಡಿರುವ ಸಂಖ್ಯೆಗೆ UPI ಮೂಲಕ ಕೇವಲ ಮೂರು ಸಾವಿರ ರೂ. ಮೊತ್ತದ ಸಣ್ಣ ಹಣವನ್ನು ಪಾವತಿಸಿ ಎಂದು ತಿಳಿಸಲಾಗಿದೆ". ವಂಚಕರ ಜಾಲದಲ್ಲಿ ಸುಲಭವಾಗಿ ಸಿಲುಕಿದ ಬಲಿಪಶು ನಿಗದಿತ ಮೊತ್ತವನ್ನು ಪಾವಟಿಸಿದ್ದಾರೆ. ಇದರ ಮರುದಿನವೇ,  ಮತ್ತೆ ಇವರನ್ನು ಸಂಪರ್ಕಿಸಿದ್ದ ವಂಚಕರು ನಿಮ್ಮ ಐಫೋನ್ 14 ಸಿದ್ಧವಾಗಿದ್ದು ಪಾರ್ಸೆಲ್ ಸೂರತ್ ವಿಮಾನ ನಿಲ್ದಾಣವನ್ನು ತಲುಪಿದೆ. ಅದನ್ನು ಡೆಲಿವರಿ ಮಾಡಲು 8,000 ರೂ. ಹಣ ಪಾವಟಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಕೂಡ ಪಾವತಿಸಲಾಗಿದ್ದು, ಬಳಿಕ ಎಷ್ಟು ದಿನ ಕಾಯ್ದರೂ ಕೂಡ ಐಫೋನ್ ಡೆಲಿವರಿ ಬರಲೇ ಇಲ್ಲ. ಕೆಲ ದಿನಗಳ ಬಳಿಕ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಖಾತೆಯಿಂದ 6.76 ಲಕ್ಷ ರೂಪಾಯಿ ಇವರ ಅರಿವಿಲ್ಲದೆಯೇ ಬೇರೆ ಖಾತೆಗೆ ಟ್ರಾನ್ಸ್ಫರ್ ಆಗಿರುವುದು ಕಂಡು ಬಂದಿದೆ. 


ಇದನ್ನೂ ಓದಿ- Pink WhatsApp: ಬಳಕೆದಾರರಲ್ಲಿ ಭೀತಿ ಸೃಷ್ಟಿಸಿದ ಪಿಂಕ್ ವಾಟ್ಸಾಪ್!


'ಬ್ಯಾಡ್ ಭಾಯ್ ಹಗರಣ'!
ವಾಟ್ಸಾಪ್ ಕಾಲಿಂಗ್ ಹಗರಣಕ್ಕೆ ಪೊಲೀಸರು 'ಬ್ಯಾಡ್ ಭಾಯ್ ಹಗರಣ' ಎಂದು ನಾಮಕರಣ ಮಾಡಿದ್ದಾರೆ. ಗಮನಾರ್ಹವಾಗಿ, ಈ ವಂಚನೆಯ ಕರೆಗಳು +92 ಸಂಖ್ಯೆಯಿಂದ ಬರುತ್ತಿವೆ. +92 ಎಂಬುದು ಪಾಕಿಸ್ತಾನದ ದೇಶದ ಕೋಡ್. ಇದೀಗ ಪಾಕಿಸ್ತಾನ ವಂಚನೆಕೋರರು ಭಾರತೀಯ ವಾಟ್ಸಪ್  ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಗಮನಿಸಬೇಕಾದ ಬಹಳ ಮುಖ್ಯ ವಿಷಯವೆಂದರೆ ಈ ವಂಚಕರು ಪಾಕಿಸ್ತಾನದಿಂದ ಕರೆಗಳನ್ನು ಮಾಡುತ್ತಿಲ್ಲ. ಬದಲಿಗೆ ವರ್ಚುವಲ್ ಸಂಖ್ಯೆಗಳನ್ನು ಬಳಸಿ ಈ ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.