WhatsApp ನಿಮ್ಮ ಬೇಹುಗಾರಿಕೆ ನಡೆಸುತ್ತಿದೆಯೇ? ಈ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಗೂಗಲ್ ಹೇಳಿದ್ದೇನು?

ಪ್ರಸ್ತುತ, ಪ್ರಪಂಚದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಬಳಕೆದಾರರ ಬೇಹುಗಾರಿಕೆ ನಡೆಸುತ್ತಿದೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಆದರೆ, ಇದು ನಿಜವೇ? ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್ ಹೇಳಿದ್ದೇನು ಎಂದು ತಿಳಿಯಿರಿ. 

Written by - Yashaswini V | Last Updated : Jun 22, 2023, 04:38 PM IST
  • ವಾಟ್ಸಾಪ್ ಗೌಪ್ಯತೆ ಸೂಚನೆಗಳು ಬರುವುದು ಸರ್ವೇ ಸಾಮಾನ್ಯ.
  • ಆದರೆ, ಕ್ಯಾಮೆರಾ ಅಥವಾ ಮೈಕ್ರೊಫೋನ್ ಬಳಕೆಯಲ್ಲಿಲ್ಲದಿದ್ದರೂ ಸಹ ಗೌಪ್ಯತೆ ಸೂಚನೆಗಳು ಕಾಣಿಸಿಕೊಳ್ಳುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
  • ಈ ಕಾರಣದಿಂದಾಗಿ, ಬಳಕೆದಾರರ ಅನುಮತಿಯಿಲ್ಲದೆಯೇ ವಾಟ್ಸಾಪ್ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಪ್ರವೇಶಿಸುತ್ತಿದೆಯೇ ಎಂದು ಕೆಲವರು ಆತಂಕಕ್ಕೊಳಗಾಗಿದ್ದಾರೆ.
WhatsApp ನಿಮ್ಮ ಬೇಹುಗಾರಿಕೆ ನಡೆಸುತ್ತಿದೆಯೇ? ಈ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಗೂಗಲ್ ಹೇಳಿದ್ದೇನು?  title=

WhatsApp: ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್‌ನ ಗೌಪ್ಯತೆ ಅಧಿಸೂಚನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಬಗ್ಗೆ ಬಳಕೆದಾರರು  ದೂರು ನೀಡುತ್ತಿದ್ದಾರೆ. ಗಮನಾರ್ಹವಾಗಿ ಈ ಸಮಸ್ಯೆ ಆಂಡ್ರಾಯ್ಡ್ 12ರ ಸಾಧನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಬಳಕೆದಾರರು ತಮ್ಮ ಫೋನ್‌ನ ಕ್ಯಾಮರಾ ಅಥವಾ ಮೈಕ್ರೊಫೋನ್ ಅನ್ನು ಬಳಸುವಾಗ ಅಪ್ಲಿಕೇಷನ್ ಬಳಕೆದಾರರನ್ನು ಎಚ್ಚರಿಸುತ್ತದೆ.
ಇದು ಗೌಪ್ಯತೆಗೆ ಸಂಬಂಧಿಸಿದ ಸಮಸ್ಯೆ ಇರಬಹುದು ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಇದರ ಸತ್ಯಾಸತ್ಯತೆ ಏನು? ಈ ಬಗ್ಗೆ ಗೂಗಲ್ ಸ್ಪಷ್ಟನೆ ನೀಡಿದೆ. 

ಆಂಡ್ರಾಯ್ಡ್ ಸಾಧನಗಳಲ್ಲಿ ವಾಟ್ಸಾಪ್ ದೋಷ: 
ಆಗಾಗ್ಗೆ, ವಾಟ್ಸಾಪ್ ಗೌಪ್ಯತೆ ಸೂಚನೆಗಳು ಬರುವುದು ಸರ್ವೇ ಸಾಮಾನ್ಯ. ಆದರೆ, ಕ್ಯಾಮೆರಾ ಅಥವಾ ಮೈಕ್ರೊಫೋನ್ ಬಳಕೆಯಲ್ಲಿಲ್ಲದಿದ್ದರೂ ಸಹ ಗೌಪ್ಯತೆ ಸೂಚನೆಗಳು ಕಾಣಿಸಿಕೊಳ್ಳುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕಾರಣದಿಂದಾಗಿ, ಬಳಕೆದಾರರ ಅನುಮತಿಯಿಲ್ಲದೆಯೇ ವಾಟ್ಸಾಪ್ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಪ್ರವೇಶಿಸುತ್ತಿದೆಯೇ ಎಂದು ಕೆಲವರು ಆತಂಕಕ್ಕೊಳಗಾಗಿದ್ದಾರೆ. ಆದರೆ, ಇದು ವಾಟ್ಸಾಪ್ ಬೇಹುಗಾರಿಕೆ ಅಲ್ಲ. ಇದಕ್ಕೆ ನಿಜವಾದ ಕಾರಣ ಆ್ಯಂಡ್ರಾಯ್ಡ್‌ ಬಗ್‌. ಹಾಗಾಗಿ ಇದು 'ಸೀಮಿತ ಸಂಖ್ಯೆಯ ವಾಟ್ಸಾಪ್‌ ಬಳಕೆದಾರರ ಮೇಲೆ' ಪರಿಣಾಮ ಬೀರಿದೆ ಎಂದು ಗೂಗಲ್‌ ಮಾಹಿತಿ ನೀಡಿದೆ. 

ಇದನ್ನೂ ಓದಿ- ಟಿವಿ, ಮೊಬೈಲ್, ಕಂಪ್ಯೂಟರ್ ಖರೀದಿಸಲು ಯೋಚಿಸುತ್ತಿರುವವರಿಗೆ ಗುಡ್ ನ್ಯೂಸ್

ಆಂಡ್ರಾಯ್ಡ್ ಗೌಪ್ಯತೆ ಡ್ಯಾಶ್‌ಬೋರ್ಡ್‌ ದೋಷ: 
ಒಟ್ಟಾರೆಯಾಗಿ ಈ ದೋಷಕ್ಕೆ ಆಂಡ್ರಾಯ್ಡ್ ಗೌಪ್ಯತೆ ಡ್ಯಾಶ್‌ಬೋರ್ಡ್‌ ಕಾರಣವಾಗಿದೆ. 'ಆಂಡ್ರಾಯ್ಡ್ ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿ ತಪ್ಪಾದ ಗೌಪ್ಯತೆ ಸೂಚಕಗಳು ಮತ್ತು ಅಧಿಸೂಚನೆಗಳನ್ನು ಉತ್ಪಾದಿಸುತ್ತದೆ' ಎಂದು ಗೂಗಲ್ ತನ್ನ ಆಂಡ್ರಾಯ್ಡ್ ಡೆವಲಪರ್‌ಗಳ ಖಾತೆಯ ಮೂಲಕ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. 

ಏನಿದಕ್ಕೆ ಪರಿಹಾರ? 
ಈ ದೋಷದಿಂದ ಪ್ರಭಾವಿತವಾಗಿರುವ ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸಾಪ್ ಅನ್ನು ನವೀಕರಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು. ಈ ಪ್ರಕ್ರಿಯೆಯು ಅವರನ್ನು ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Google Secrets Tricks: ಗೂಗಲ್ ನ ಈ ಸೀಕ್ರೆಟ್ಸ್ ಬಗ್ಗೆ ಕೆಲವೇ ಮಂದಿಗಷ್ಟೇ ಗೊತ್ತು!

ವಾಸ್ತವವಾಗಿ, ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ದೂರಿದ್ದ ಒಬ್ಬ ಇಂಜಿನಿಯರ್ ತನ್ನ Pixel 7 Pro ನಲ್ಲಿ ವಾಟ್ಸಾಪ್ ನ ಮೈಕ್ರೋಫೋನ್ ಚಟುವಟಿಕೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೆಟಾ-ಮಾಲೀಕತ್ವದ ಕಂಪನಿಯು ದೋಷವು ನಿಜವಾಗಿ ಆಂಡ್ರಾಯ್ಡ್‌ನ ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿದೆ ಅದು ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಸೂಚಿಸಿದೆ. ಮಾತ್ರವಲ್ಲದೆ, ತನಿಖೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಗೂಗಲ್‌ಗೆ ಕೇಳಿದ್ದೇವೆ ಎಂದು ವಾಟ್ಸಾಪ್ ಹೇಳಿದೆ. ಈ ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News