ನವದೆಹಲಿ: WhatsApp Frauds - ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನಮ್ಮ ಹತ್ತಿರದಲ್ಲಿದ್ದರೂ ಅಥವಾ ಬೇರೆ ಯಾವುದೇ ನಗರ ಅಥವಾ ದೇಶದಲ್ಲಿ ನಮ್ಮಿಂದ ದೂರವಿರಲಿ, ನಮ್ಮ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್‌ನಿಂದಾಗಿ ನಾವು ಇಂದು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಇದರಲ್ಲಿ ನಮಗೆ ಹೆಚ್ಚು ಸಹಾಯ ಮಾಡುವ ಪ್ಲಾಟ್‌ಫಾರ್ಮ್‌ಗಳಲ್ಲಿ WhatsApp ಒಂದು ದೊಡ್ಡ ಹೆಸರು. ಚಾಟಿಂಗ್, ಧ್ವನಿ ಕರೆಗಳು ಮತ್ತು ವೀಡಿಯೊ ಕರೆಗಳ ಜೊತೆಗೆ, WhatsApp ಸುದ್ದಿಯಲ್ಲಿರಲು ಮತ್ತೊಂದು ಕಾರಣ ಎಂದರೆ ಅದುವೇ ಆನ್‌ಲೈನ್ ಹಗರಣಗಳು (Online Frauds). ಅಂತರ್ಜಾಲದ ಈ ಯುಗದಲ್ಲಿ, ಆನ್‌ಲೈನ್ ವಂಚನೆಗಳು ಮತ್ತು ಹಗರಣಗಳು ಸಾಮಾನ್ಯ ವಿಷಯವಾಗಿಬಿಟ್ಟಿವೆ  ಮತ್ತು ವಾಟ್ಸಾಪ್ ಇಂತಹ ವಂಚನೆಗಳಿಗೆ ದೊಡ್ಡ ಮೂಲವಾಗಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್ ಮೂಲಕ ಅಪಾಯಕಾರಿ ವಂಚನೆಗಳು ನಡೆಯುತ್ತಿವೆ
WhatsApp ಪ್ರಾಥಮಿಕವಾಗಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ, ಇದರ ಸಹಾಯದಿಂದ ನೀವು ನಿಮ್ಮ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಕೆಲಸಕ್ಕೆ ಸಂಬಂಧಿಸಿದ ಜನರೊಂದಿಗೆ ಮಾತನಾಡಬಹುದು. ಅಪರಿಚಿತ ಸಂಖ್ಯೆಗಳಿಂದ ನೀವು ಸಂದೇಶಗಳನ್ನು ಪಡೆಯುವುದು ಹಲವು ಬಾರಿ ಸಂಭವಿಸುತ್ತದೆ. ಅಂತಹ ಸಂದೇಶಗಳು ನಿಮಗೂ ಅಪಾಯಕಾರಿ ಎಂದು ಸಾಬೀತಾಗಬಹುದು. ಇಂದು ನಾವು ವಾಟ್ಸಾಪ್‌ನಲ್ಲಿ ಸಂಭವಿಸುವ ಮೂರು ಸಾಮಾನ್ಯ ಹಗರಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅವುಗಳಿಂದ ನೀವು ದೂರವಿರಬೇಕು ಇಲ್ಲದಿದ್ದರೆ ನೀವು ಸಾಕಷ್ಟು ನಷ್ಟವನ್ನುಅನುಭವಿಸಬೇಕಾಗುತ್ತದೆ


'ಹಲೋ ಅಮ್ಮ' ಮತ್ತು 'ಹಲೋ ಡ್ಯಾಡ್' ಹಗರಣಗಳು (Hello Mum And Hello Dad Scams)
ವಾಟ್ಸಾಪ್‌ನಲ್ಲಿ ಇದು ಅತ್ಯಂತ ಸಾಮಾನ್ಯವಾದ ಹಗರಣ ಎಂದು ಪರಿಗಣಿಸಲಾಗಿದೆ. ಹೆಸರೇ ಸೂಚಿಸುವಂತೆ, ಈ ಹಗರಣದಲ್ಲಿ ಸಾಮಾನ್ಯವಾಗಿ ಹಣದ ಅಗತ್ಯವಿರುವ ನಿಮ್ಮ 'ಸಂಬಂಧಿ' ಅಥವಾ 'ಸ್ನೇಹಿತ' ಅಪರಿಚಿತ ಸಂಖ್ಯೆಯಿಂದ ನೀವು ಸಂದೇಶವನ್ನು ಪಡೆಯುತ್ತೀರಿ. ವಾಸ್ತವವಾಗಿ ಸಂದೇಶವನ್ನು ಕಳುಹಿಸುವವರು ಹ್ಯಾಕರ್ ಅಥವಾ ಸ್ಕ್ಯಾಮ್‌ಸ್ಟರ್ ಆಗಿದ್ದು ಅವರು ನಿಮ್ಮ ಸ್ನೇಹಿತ ಅಥವಾ ಸಂಬಂಧಿಯಾಗುವ ಮೂಲಕ ನಿಮಗೆ ಸಂದೇಶ ಕಳುಹಿಸುತ್ತಾರೆ. ಅಂತಹ ವಂಚನೆಗಳನ್ನು ತಪ್ಪಿಸಲು, ನೀವು ಅಂತಹ ಯಾವುದೇ ನೆಪಕ್ಕೆ ಬೀಳದಂತೆ ನೀವು ಜಾಗರೂಕರಾಗಿರಬೇಕು.


ಭದ್ರತಾ ಕೋಡ್ ಹಗರಣ (Security Codes)
ಇದೂ ಕೂಡ ಹಣವನ್ನು ಕದಿಯುವ ಸಾಧನವಾಗಿದೆ ಮತ್ತು ಇದರಲ್ಲಿ ಹ್ಯಾಕರ್ ನಿಮ್ಮ ಸ್ನೇಹಿತ ಅಥವಾ ಸಂಬಂಧಿ ಎಂದು ಸಂದೇಶಗಳನ್ನು ಕಳುಹಿಸುತ್ತಾನೆ. ಒಂದೇ ವ್ಯತ್ಯಾಸವೆಂದರೆ, ಇದರಲ್ಲಿ ಮೊದಲು ನಿಮ್ಮ ವಾಟ್ಸಾಪ್‌ ಖಾತೆಗೆ ಆರು ಅಂಕಿಗಳ ಭದ್ರತಾ ಕೋಡ್ ಬರುತ್ತದೆ ಮತ್ತು ನಂತರ 'ಸ್ನೇಹಿತ' ಅಥವಾ ಸಂಬಂಧಿಯಿಂದ ಸಂದೇಶ ಬರುತ್ತದೆ ಮತ್ತು ಅದರಲ್ಲಿ ಅವರು ಕೆಲವು ಕಾರಣಗಳಿಂದ ಹೊಸ WhatsApp ಖಾತೆಯನ್ನು ರಚಿಸುತ್ತಿದ್ದಾರೆ ಮತ್ತು ಅದಕ್ಕೆ ನಿಮಗೆ ಕಳುಹಿಸಿದ ಕೋಡ್ ಅಗತ್ಯವಿದೆ ಎನ್ನಲಾಗುತ್ತದೆ. ಈ ಮೂಲಕ ಬಳಕೆದಾರರರನ್ನು ವಂಚನೆಗೆ ಈಡು ಮಾಡಿ ಅವರ ಖಾತೆಯಿಂದ ಹಣ ದೋಚಲಾಗುತ್ತದೆ.


ಇದನ್ನೂ ಓದಿ-Impact Feature: 3,399 ರೂ.ಗೆ ಸ್ಮಾರ್ಟ್‌ಫೋನ್ ಆಫರ್‌, ಖರೀದಿಸಿ ಮತ್ತು ಬಹುಮಾನ ಗೆಲ್ಲಿರಿ!


ವೋಚರ್  ವಂಚನೆಗಳು (Voucher Scams)
ವೋಚರ್ ವಂಚನೆಗಳು ಸುಲಭವಾಗಿ ಬಳಕೆದಾರರನ್ನು ಮೋಸಗೊಳಿಸಲು ಯಶಸ್ವಿಯಾಗಿವೆ. ಇಂತಹ  ವಂಚನೆಗಳಲ್ಲಿ, ನಿಮಗೆ ನೀವು ಲಾಟರಿ ಗೆದ್ದ ಕುರಿತು ಅಥವಾ ಕೆಲವು ರೀತಿಯ ದುಬಾರಿ ಬಹುಮಾನವನ್ನು ಗೆದ್ದ ಕುರಿತು ಸಂದೇಶ ಬರುತ್ತದೆ. ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ ಮತ್ತು ನೀವು ಸುಲಭವಾಗಿ ಅದರ ಬಲೆಗೆ ಬೀಳುತ್ತೀರಿ ಮತ್ತು ಬಹುಮಾನವನ್ನು ಪಡೆಯಲು ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುತ್ತೀರಿ. ಬಹುಮಾನವು ಅವಶ್ಯಕತೆಗಿಂತ  ದೊಡ್ಡದಾಗಿ ಕಂಡರೆ ಮತ್ತು ಹೆಚ್ಚು ಆಕರ್ಷಕವಾಗಿ ಕಂಡುಬಂದಲ್ಲಿ, ಇದು ನಿಮಗೆ ಮೋಸ ಮಾಡುವ ಒಂದು ಮಾರ್ಗವಾಗಿದೆ ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-TCS ಈಗ ವಿಶ್ವದ ಎರಡನೇ ಅತ್ಯಮೂಲ್ಯ IT ಬ್ರ್ಯಾಂಡ್...!


ಮೇಲೆ ಉಲ್ಲೇಖಿಸಲಾಗಿರುವ ಈ ಮೂರು ವಿಧದ ವಂಚನೆಗಳು ಹೆಚ್ಚು ಸಾಮಾನ್ಯವಾಗಿದೆ ಮತ್ತು ಹೆಚ್ಚು ಹಾನಿಯನ್ನುಂಟುಮಾಡುತ್ತಿವೆ. ಇಂತಹ ಸಂದೇಶಗಳ ಜೊತೆಗೆ  ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ ಮತ್ತು ಜಾಗರೂಕರಾಗಿರಿ ಮತ್ತು ಬುದ್ಧಿವಂತಿಕೆಯಿಂದ ವರ್ತಿಸುವುದು ಈ ಹಗರಣಗಳಿಂದ ಪಾರಾಗುವ ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ-huge discount on smartphone : ಕೇವಲ 99 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು Realmeಯ ಈ ಫೋನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.