WhatsApp Testing New Feature: WhatsApp ಮೂಲಕ ಶೀಘ್ರದಲ್ಲಿಯೇ ನೀವು ನಿಮ್ಮ ಬಂಧು-ಮಿತ್ರರಿಗೆ ಜೊತೆಗೆ ಹೈ ಕ್ವಾಲಿಟಿ ವಿಡಿಯೋ ಹಂಚಿಕೊಳ್ಳಬಹುದು. WABetaInfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇತ್ತೀಚೆಗಷ್ಟೇ ವಾಟ್ಸ್ ಆಪ್ ವಿಶೇಷ ವೈಶಿಷ್ಟ್ಯವೊಂದರ ಟೆಸ್ಟಿಂಗ್ ನಡೆಸುತ್ತಿದೆ ಎನ್ನಲಾಗಿದೆ. ಈ ವೈಶಿಷ್ಟ್ಯ ಒಂದೊಮ್ಮೆ ಜಾರಿಯಾದರೆ, ಬಳಕೆದಾರರು ವಿಡಿಯೋ ಕಳುಹಿಸುವ ಮೊದಲು ತಮ್ಮ ವಿಡಿಯೋ ಕ್ವಾಲಿಟಿಯನ್ನು ನಿರ್ಧರಿಸಬಹುದಾಗಿದೆ. ಪ್ರಸ್ತುತ ಬಳಕೆದಾರರು ವಾಟ್ಸ್ ಆಪ್ ಮೂಲಕ ಕೇವಲ 16 MB ಗಾತ್ರದ ವಿಡಿಯೋಗಳನ್ನು ಮಾತ್ರ ಹಂಚಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ವಿಡಿಯೋ ಕ್ವಾಲಿಟಿ ಸೆಟ್ (WhatsApp Video Quality Set Feature)ಮಾಡಲು ಬಳಕೆದಾರರಿಗೆ ಮೂರು ಆಯ್ಕೆಗಳು ಇರಲಿವೆ
WABetaInfo ವರದಿಯ ಪ್ರಕಾರ, ವಾಟ್ಸ್ ಆಪ್ ನ ಅಂಡ್ರಾಯಿಡ್ ಬೀಟಾ ವರ್ಶನ್ ಸಂಖ್ಯೆ 2.21.14.6 ಜೊತೆಗೆ 'Video Upload Quality' ಹೆಸರಿನ ವೈಶಿಷ್ಟ್ಯ ನೀಡಲಾಗುತ್ತಿದೆ. WABetaInfo ಈ ವೈಶಿಷ್ಟ್ಯದ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದೆ. ಈ ಸ್ಕ್ರೀನ್ ಶಾಟ್ ಪ್ರಕಾರ ವಿಡಿಯೋ ಕ್ವಾಲಿಟಿ ಸೆಟ್ ಮಾಡಲು ಬಳಕೆದಾರರಿಗೆ 'Auto', 'Best Quality' ಹಾಗೂ 'Data Saver'ಎಂಬ ಮೂರು ಆಯ್ಕೆಗಳನ್ನು ನೀಡಲಾಗುತ್ತಿದೆ.


ಇದನ್ನೂ ಓದಿ- Google New Features: Message App ನಲ್ಲಿ ಹೊಸ ವೈಶಿಷ್ಟ್ಯ ಘೋಷಿಸಿದ Google, 24 ಗಂಟೆಗಳ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ OTP ಒಳಗೊಂಡ ಸಂದೇಶ


Data Server ಆಯ್ಕೆ ಸ್ಲೋ ಇಂಟರ್ನೆಟ್ ಆಯ್ಕೆಯಲ್ಲಿ ಕೆಲಸ ಮಾಡಲಿದೆ
'Auto' ಆಪ್ಶನ್ ನಲ್ಲಿ ವಾಟ್ಸ್ ಆಪ್ ಖುದ್ದಾಗಿ ವಿಡಿಯೋನ ಬೆಸ್ಟ್ ಕ್ವಾಲಿಟಿ ಆಯ್ಕೆ ಮಾಡಲಿದೆ. 'Best Quality'ಯಲ್ಲಿ ಬಳಕೆದಾರರು ಖುದ್ದಾಗಿ ವಿಡಿಯೋ ಕ್ವಾಲಿಟಿಯನ್ನು ಸೆಟ್ ಮಾಡಬಹುದು. ಒಂದು ವೇಳೆ ಇಂಟರ್ನೆಟ್ ಸಂಪರ್ಕ ಸ್ಲೋ ಆಗಿದ್ದರೆ, 'Data Saver'ಆಯ್ಕೆಯನ್ನು ಬಳಸಿ ಬಳಕೆದಾರರು ವಿಡಿಯೋ ಸೆಂಡ್ ಮಾಡಬಹುದು. ಆದರೆ, ಅದರ ಗುಣಮಟ್ಟ ಅಷ್ಟೊಂದು ಸರಿಯಾಗಿ ಇರುವುದಿಲ್ಲ ಎನ್ನಲಾಗಿದೆ.


ಇದನ್ನೂ ಓದಿ-WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ


ಬೆಸ್ಟ್ ಕ್ವಾಲಿಟಿ ವಿಡಿಯೋ ಕಳುಹಿಸಲು ಸಮಯ ಬೇಕಾಗಲಿದೆ
ಬೆಸ್ಟ್ ಕ್ವಾಲಿಟಿ ಸೆಟ್ಟಿಂಗ್ ಆಯ್ಕೆಯ ಮೇಲೆ ಕಳುಹಿಸಲಾಗುವ ವಿಡಿಯೋ ತಲುಪಬೇಕಾದವರಿಗೆ ತಲುಪಲು ಸ್ವಲ್ಪ ಟೈಮ್ ತೆಗೆದುಕೊಳ್ಳಲಿವೆ. ಇದು ನೆಟ್ವರ್ಕ್ ಸ್ಪೀಡ್ ಹಾಗೂ ಹಾರ್ಡ್ ವೆಯರ್ ಮೇಲೆ ಸಂಪೂರ್ಣವಾಗಿ ಅವಲಂಭಿಸಿದೆ. ವಾಟ್ಸ್ ಆಪ್ ನ ಈ ವೈಶಿಷ್ಟ್ಯ (WhatsApp New Feature) ಆಪ್ ಸ್ಟೋರೇಜ್ ಹಾಗೂ ಡೇಟಾ ಸೆಟ್ಟಿಂಗ್ಸ್ ನಲ್ಲಿ ಅಳವಡಿಸುವ ಸಾಧ್ಯತೆ ಇದೆ. ಸದ್ಯ ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಡೆವಲಪಿಂಗ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಬಳಕೆದಾರರಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.