Google New Features: ಸರ್ಚ್ ಎಂಜಿನ್ ದೈತ್ಯ Google ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗಾಗಿ ತನ್ನ Messages ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಅಪ್ಲಿಕೇಶನ್‌ನಲ್ಲಿ ನ್ಯಾವಿಗೇಷನ್ ಸುಲಭ ಮತ್ತು ಅಡೆತಡೆಗಳಿಂದ ಮುಕ್ತವಾಗಿಸುವ ಪ್ರಯತ್ನ ಇದಾಗಿದೆ ಎಂದು ಕಂಪನಿ ಹೇಳಿದೆ. ಇದಕ್ಕಾಗಿ ಮುಂದಿನ ಕೆಲವು ವಾರಗಳಲ್ಲಿ ಎರಡು ಹೊಸ ವೈಶಿಷ್ಟ್ಯಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. Messages ಅಪ್ಲಿಕೇಶನ್ ವಿಭಾಗಗಳ (Catogeries) ವೈಶಿಷ್ಟ್ಯವನ್ನು ಸೇರಿಸಲು Google ನಿರ್ಧರಿಸಿದೆ. ಇದರೊಂದಿಗೆ, ಮತ್ತೊಂದು ಹೊಸ ವೈಶಿಷ್ಟ್ಯವನ್ನು ಸಹ ಸೇರಿಸಲಾಗುತ್ತಿದೆ, ಈ ವೈಶಿಷ್ಟ್ಯದಿಂದ ಬಳಕೆದಾರರಿಗೆ ಬರುವ OTP ಸಂದೇಶಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ. ಈ ವೈಶಿಷ್ಟ್ಯಗಳು ಆರಂಭದಲ್ಲಿ ಇಂಗ್ಲಿಷ್‌ಗೆ ಬೆಂಬಲದೊಂದಿಗೆ ಬರಲಿವೆ ಮತ್ತು ಆಂಡ್ರಾಯ್ಡ್ 8 ಅಥವಾ ಹೊಸ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್‌ಗಳ ಬಳಕೆದಾರರು ಇವುಗಳನ್ನು ಪಡೆಯಲಿದ್ದಾರೆ ಎಂದು ಕಂಪನಿ ಹೇಳಿದೆ.
Catogeries ವೈಶಿಷ್ಟ್ಯ
ಗೂಗಲ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ, ಇದು ಯಂತ್ರ ಕಲಿಕೆಯ (Machine Learning) ಸಹಾಯದಿಂದ ಸಂದೇಶಗಳನ್ನು ವಿವಿಧ ವರ್ಗಗಳಾಗಿ ಇರಿಸಲು ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಗೂಗಲ್ ಈ ವೈಶಿಷ್ಟ್ಯದ ಪೂರ್ವವೀಕ್ಷಣೆಯನ್ನು ಪರಿಚಯಿಸಿದೆ, ಇದರಲ್ಲಿ 'All' ಹೆಸರಿನ ಕೆಟಗರಿ ಇರಲಿದೆ. ಅಂದರೆ “ಎಲ್ಲ” ವರ್ಗ ಮತ್ತು ಇದು ಡೀಫಾಲ್ಟ್ ವರ್ಗವಾಗಿರಲಿದೆ. ಇದರೊಂದಿಗೆ, ಪರ್ಸನಲ್ (Personal) ನಂತಹ ಇತರ ಕೆಲವು ವಿಭಾಗಗಳು ಇರಲಿವೆ. ಇದರಲ್ಲಿ Saved Numbers ಗಳ ಜೊತೆಗಿನ ಸಂಭಾಷಣೆಗಳನ್ನು ಪಟ್ಟಿ ಮಾಡಲಾಗುತ್ತದೆ. ವಹಿವಾಟುಗಳ ಬಿಲ್‌ಗಳು ಮತ್ತು ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಇದು ಹೊಂದಿರಲಿದೆ. ಒಟಿಪಿ ಟ್ಯಾಬ್ ಎಲ್ಲಾ ಒಟಿಪಿ ಸಂದೇಶಗಳನ್ನು ಒಳಗೊಂಡಿರಲಿದೆ. ಇದಲ್ಲದೆ, ಆಫರ್ಸ್ ಟ್ಯಾಬ್‌ನಲ್ಲಿ ಪ್ರಮೋಶನಲ್ ಸಂದೇಶಗಳು ನೀಡಲಾಗುವುದು. ಈ ಟ್ಯಾಬ್ ಗಳಿಗೆ ನೀವು ಸ್ಕ್ರೀನ್ ನ ಮೇಲ್ಭಾಗದ ಮೂಲಕ ಪ್ರವೇಶಿಸಬಹುದು.
ಇದನ್ನೂ ಓದಿ-Microsoft Windows 11 launched: ಹೊಸ ವಿಂಡೋಸ್ ನಲ್ಲಿ ಏನುಂಟು ಏನಿಲ್ಲ...!
Automatic OTP Delete
ಗೂಗಲ್ ಪರಿಚಯಿಸುತ್ತಿರುವ ಎರಡನೇ ವೈಶಿಷ್ಟ್ಯದಲ್ಲಿ ಬಳಕೆದಾರರಿಗೆ ಬರುವ OTP ಸಂದೇಶಗಳು 24 ಗಂಟೆಗಳ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ. ಆದರೆ, ಬಳಕೆದಾರರು ಈ ವೈಶಿಷ್ಯವನ್ನು ಬಳಸಲು ಮೊದಲು ಅನುಮತಿ ನೀಡಬೇಕಾಗಲಿದೆ. ಇದರಿಂದ ಬಳಕೆದಾರರ ಸಮಯ ಉಳಿತಾಯವಾಗಲಿದ್ದು, ಖುದ್ದಾಗಿ ಅವರು ಈ ರೀತಿಯ ಸಂದೇಶಗಳನ್ನು ಡಿಲೀಟ್ ಮಾಡಬೇಕಾಗಿಲ್ಲ.
ಇದನ್ನೂ ಓದಿ-Baal Aadhaar Card: ಮಕ್ಕಳ ಆಧಾರ್ ಪಡೆಯಲು ಇಲ್ಲಿದೆ ಹಂತ ಹಂತದ ಪ್ರಕ್ರಿಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.