ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳಿಗೆ WhatsApp ಕಾರಣವಾಗಿತ್ತು. ಇದೀಗ ಈ ವಿವಾದಗಳ ನಡುವೆಯೇ ಹೊಸ features ಅನ್ನು ಅಳವಡಿಸಲಿದೆ. ಶೀಘ್ರದಲ್ಲೇ ಈ ಹೊಸ features WhatsAppನಲ್ಲಿ ಕಾಣಿಸಿಕೊಳ್ಳಲಿದೆ.  ಶೀಘ್ರವೇ  Read Later ಎಂಬ ಅಂಶವನ್ನು
 ವಾಟ್ಸ್ ಆ್ಯಪ್  ಜಾರಿಗೆ  ತರಲಿದೆ.


COMMERCIAL BREAK
SCROLL TO CONTINUE READING

ಏನಿದು ರೀಡ್ ಲೇಟರ್ ( Read Later) :
ವಾಟ್ಸ್ ಆ್ಯಪ್ (WhatsApp) ಶೀಘ್ರವೇ Read Later  ಫೀಚರ್ ಅನ್ನುಅಳವಡಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ WhatsAppನಲ್ಲಿ ಈ  ಫೀಚರ್ ಕಾಣಿಸಿಕೊಳ್ಳಲಿದೆ.  ಮೂಲಗಳ ಪ್ರಕಾರ, ಈಗ ಇರುವ ಆರ್ಕೈವ್ಡ್ ಚಾಟ್ (Archived Chat) ಬದಲಿಗೆ ರೀಡ್  ಲೇಟರ್ ಅನ್ನು ಅಳವಡಿಸಲಾಗಿದೆ. ರೀಡ್ ಲೇಟರ್ ನ ಉಪಯೋಗವೆಂದರೆ ಯಾವುದೇ ವ್ಯಕ್ತಿ ಅಥವಾ ಗ್ರೂಪಿನ ಸಂದೇಶಗಳನ್ನು ರೀಡ್ ಲೇಟರ್ ಸೆಕ್ಷನ್ ನಲ್ಲಿ ಹಾಕಬಹುದಾಗಿದೆ. ಹೀಗೆ ಮಾಡಿದ ನಂತರ ಯಾವುದೇ ವ್ಯಕ್ತಿ ಅಥವಾ ಗುಂಪಿನಿಂದ ಸಂದೇಶ  ಬರುವ ನೋಟಿಫಿಕೇಶನ್ ನಿಂತು ಹೋಗುತ್ತದೆ. ಮತ್ತೆ ಬೇಕಾದಲ್ಲಿ ರೀಡ್ ಲೇಟರ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಸಂದೇಶಗಳನ್ನು ಓದಬಹುದಾಗಿದೆ. ಅಂದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ಸಂದೇಶಗಳನ್ನು ಓದಬಹುದಾಗಿದೆ.
   
ಇದನ್ನೂ ಓದಿ : WhatsApp New Privacy Policy ಹಿಂಪಡೆಯಲು ಕೇಂದ್ರದಿಂದ ಪತ್ರ


ಯಾವುದೇ ಸಂದೇಶಗಳು ತಪ್ಪಿಹೋಗುವ ಭಯವಿಲ್ಲ:
Read Laterನ ಇನ್ನೊಂದು ಪ್ರಯೋಜನವೆಂದರೆ, ನಿಮಗೆ ಬರುವ ಯಾವ ಸಂದೇಶಗಳೂ  (Message) ಡಿಲೀಟ್ ಆಗುವುದಿಲ್ಲ. ಗ್ರೂಪಿನ ಎಲ್ಲಾ ಸಂದೇಶಗಳು ಹಾಗೇ ಉಳಿದುಕೊಂಡಿರುತ್ತವೆ. Read Laterನಲ್ಲಿ ಪಿನ್ ಮಾಡಲಾದ ಎಲ್ಲಾ ಸಂದೇಶಗಳನ್ನು ನಿಮಗೆ ಬೇಕಾದ  ಸಮಯದಲ್ಲಿಓದಿಕೊಳ್ಳಬಹುದು.


ಈ ನಡುವೆ,  ಆಪಲ್ ಟಚ್ ಐಡಿ  features ಅನ್ನು ಮತ್ತೆ ತರಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಇದೆ. ಫೇಸ್‌ಮಾಸ್ಕ್‌ನಿಂದಾಗಿ, ಐಫೋನ್(iPhone), ಐಮ್ಯಾಕ್ ಮತ್ತು ಇತರ ಉತ್ಪನ್ನಗಳಲ್ಲಿ ಫೇಸ್ ಐಡಿಯನ್ನು ಬಳಸಲು ಸಾಧ್ಯವಾಗಿರಲಿಲ್ಲ. 2017 ರ ನಂತರ ಕಂಪನಿಯು ಟಚ್ ಐಡಿಯನ್ನು (Touch ID) ತೆಗೆದುಹಾಕಿತ್ತು. ಕಳೆದ ವರ್ಷ, ಕಂಪನಿಯು ತನ್ನ ಹೊಸ ಐಫೋನ್ 12 ಅನ್ನು ಬಿಡುಗಡೆ ಮಾಡಿತ್ತು. ಆದರೆ ಈಗ 2021 ರಲ್ಲಿ, ತನ್ನ ಎಲ್ಲಾ ಉತ್ಪನ್ನಗಳಲ್ಲೂ ಟಚ್ ಐಡಿಯನ್ನು ಅಳವಡಿಸಲಾಗಿದೆ.  


ಇದನ್ನೂ ಓದಿ :'ಪ್ರೈವಸಿ ಪಾಲಿಸಿ ಇಷ್ಟವಿಲ್ಲದಿದ್ದರೆ WhatsApp‌ ಬಳಸಬೇಡಿ'- ದಿಲ್ಲಿ ಹೈಕೋರ್ಟ್‌ ಸಲಹೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.