ಕೆಲವೊಂದು ಬಾರಿ ತಡರಾತ್ರಿ ಸಮಯದಲ್ಲೂ ಕೆಲವರು ವಾಟ್ಸ್‌ಆಪ್‌ನಲ್ಲಿ ಚಾಟಿಂಗ್‌ ಮಾಡುತ್ತಿರುತ್ತಾರೆ. ಆದರೆ ಅದು ತಪ್ಪಾಗಿ ಗ್ರಹಿಸುವವರಿಗೆ ಇಷ್ಟವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಇದ್ದರೂ ಸಹ ಅದು ಕಾಣದಿದ್ದರೆ ಒಳ್ಳೆಯದು ಎಂದು ಭಾವಿಸುತ್ತೇವೆ. ಇಂತಹ ಸಮಸ್ಯೆಗಳಿಗೆ ಇದೀಗ ವಾಟ್ಸ್‌ಆಪ್‌ ಹೊಸ ಅಪ್‌ಡೇಟ್‌ನ್ನು ಪರಿಚಯಿಸುತ್ತಿದ್ದು, ಇದು ಸಹಾಯಕವಾಗಲಿದೆ. ಇದರ ಮೂಲಕ ನಿಮ್ಮ ಮೊಬೈಲ್‌ನಲ್ಲಿರುವ ಕಾಂಟಾಕ್ಟ್‌ಗಳಿಂದ ನೀವು ಆನ್‌ಲೈನ್‌ನಲ್ಲಿ ಇದ್ದೀರಾ? ಎಂಬ ಮಾಹಿತಿಯನ್ನು ಮರೆಮಾಡಲು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಖ್ಯಾತ ಹಾಸ್ಯನಟನಿಗೆ ಸಂಕಷ್ಟ ತಂದ ಒಪ್ಪಂದ: 7 ವರ್ಷಗಳ ಬಳಿಕ ವಿದೇಶದಲ್ಲಿ ಕೇಸ್‌ ದಾಖಲು


ಈ ರೀತಿಯಾಗಿ ಮಾಡಿದರೆ ನೀವು ಯಾವಾಗ ಬೇಕಾದರೂ ವಾಟ್ಸ್‌ಆಪ್‌ ಅನ್ನು ಬಳಸಲು ಸಾಧ್ಯವಾಗುತ್ತದೆ. ಜೊತೆಗೆ ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಕಚೇರಿಯ ಜನರಿಗೆ ಅದರ ಬಗ್ಗೆ ತಿಳಿಯುವುದಿಲ್ಲ. ಅವರು ನಿಮಗೆ ತೊಂದರೆ ನೀಡುವುದಿಲ್ಲ. ಈ ಹೊಸ ನವೀಕರಣದ ಬಗ್ಗೆ ಇಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡಲಿದ್ದೇವೆ. 


ಡಬ್ಲ್ಯೂಎ ಬೆಟಾ ಇನ್ಫೋನ ಇತ್ತೀಚಿನ ವರದಿ ಹೇಳುವಂತೆ, "ವಾಟ್ಸ್‌ಆಪ್‌ ಹೊಸ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಅದ್ಭುತವಾದ ಗೌಪ್ಯತೆ ವೈಶಿಷ್ಟ್ಯದೊಂದಿಗೆ ಬರಲಿದೆ. ಈ ಅಪ್‌ಡೇಟ್‌ ಮೂಲಕ ವಾಟ್ಸ್‌ಆಪ್‌ ಬಳಕೆದಾರರು ತಮ್ಮ ಆನ್‌ಲೈನ್ ಸ್ಥಿತಿ (Online Status)ಯನ್ನು ಮರೆಮಾಡಲು ಸಾಧ್ಯವಾಗುತ್ತದೆ. ನೀವು ಆನ್‌ಲೈನ್‌ನಲ್ಲಿರುವಾಗ ನಿಮ್ಮ ಕಾಂಟಾಕ್ಟ್‌ನಲ್ಲಿರುವ ಯಾರೂ ಸಹ ಆನ್‌ಲೈನ್‌ನಲ್ಲಿ ಇರೋದನ್ನು ತಿಳಿಯಲು ಸಾಧ್ಯವಾಗೋದಿಲ್ಲ. ಇದಕ್ಕಾಗಿ ನಿಮಗೆ ಯಾವುದೇ ಮೂರನೇ ಅಪ್ಲಿಕೇಶನ್ ಅಗತ್ಯವಿಲ್ಲ. ಇದನ್ನು ನಿಮ್ಮ ವಾಟ್ಸ್‌ಆಪ್‌ ಸೆಟ್ಟಿಂಗ್‌ಗಳ ಮೂಲಕ ಮಾಡಬಹುದು. 


ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ವೈಶಿಷ್ಟ್ಯವು 'ಲಾಸ್ಟ್‌ ಸೀನ್‌' ಮತ್ತು 'ಪ್ರೊಫೈಲ್ ಪಿಕ್ಚರ್' ಸೆಟ್ಟಿಂಗ್‌ನಂತೆಯೇ ಕಾರ್ಯನಿರ್ವಹಿಸಲಿದೆ. ಡಬ್ಲ್ಯೂಎ ಬೆಟಾ ಇನ್ಫೋ ವರದಿಯ ಪ್ರಕಾರ, ಆನ್‌ಲೈನ್ ಸ್ಥಿತಿ (Online Status)ಯನ್ನು ಯಾರು ನೋಡಬಹುದು ಎಂಬುದಕ್ಕೆ ಎರಡು ಆಯ್ಕೆಗಳಿರುತ್ತದೆ. ಇದರಲ್ಲಿ ನೀವು ಯಾವುದು ಬೇಕೋ ಅದನ್ನು ಆಯ್ಕೆ ಮಾಡಬಹುದು. ಒಂದು ಆಯ್ಕೆ 'ಎಲ್ಲರೂ' ಎಂದಿದ್ದರೆ, ಮತ್ತೊಂದು ಆಯ್ಕೆ, 'ಯಾರು ನೋಡಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿ' ಎಂಬ ಆಪ್ಶನ್‌ ನೀಡಲಾಗುತ್ತಿದೆ. 


ಇದನ್ನೂ ಓದಿ: MS Dhoni: ಧೋನಿಯಿಂದ ಈ ಬಲಿಷ್ಠ ಆಟಗಾರರು ನಿವೃತ್ತಿ! ತಂಡದಲ್ಲಿ ಸ್ಥಾನ ಪಡೆಯಲಾಗಲಿಲ್ಲ


ವಾಟ್ಸ್‌ಆಪ್‌ನ ಈ ಅಪ್‌ಡೇಟ್‌ ಮೊದಲು iOSಗೆಂದು ಬಿಡುಗಡೆ ಮಾಡಬಹುದು. ಬಳಿಕ  ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ಈ ಸಿಸ್ಟಂ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ. ಪ್ರಸ್ತುತ, ಇದರ ಕುರಿತು ಕೆಲಸ ನಡೆಯುತ್ತಿದೆ. ಆದರೆ ಇದು ಬಿಡುಗಡೆಯಾದಾಗ, ಇದನ್ನು ಮೊದಲು ವಾಟ್ಸ್‌ಆಪ್‌ ಬೀಟಾ ಬಳಕೆದಾರರಿಗೆ ಮತ್ತು ನಂತರ ಉಳಿದ ಬಳಕೆದಾರರಿಗೆ ಬಿಡುಗಡೆ ಮಾಡಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ