WhatsApp ನಲ್ಲಿ ಬರುತ್ತಿದೆ ಇದುವರೆಗಿನ ಅತ್ಯಂತ ಜಬರ್ದಸ್ತ್ ವೈಶಿಷ್ಟ್ಯ
WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್‌ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ.
WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್‌ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ. ಇದು ಗ್ರೂಪ್ ಚಾಟ್‌ಗಳನ್ನು ಹೆಚ್ಚು ಮನರಂಜನೆಯನ್ನಾಗಿಸಲಿದೆ. ಈ ವೈಶಿಷ್ಟ್ಯದ ಮೂಲಕ ಸಮೀಕ್ಷೆಯನ್ನು (WhatsApp Create Poll Feature) ನಡೆಸುವ ಮೂಲಕ ಮೂಲಕ ಗುಂಪಿನ ಸದಸ್ಯರು ಯೋಜನೆ ಅಥವಾ ಪ್ರಶ್ನೆಯ ಕುರಿತು ಇತರ ಸದಸ್ಯರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ವಿಶೇಷವೆಂದರೆ ವಾಟ್ಸಾಪ್ ಗ್ರೂಪ್ ಚಾಟ್‌ಗಳಿಗಾಗಿ ಬರುವ ಈ ಪೋಲ್ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲ್ಪಡುತ್ತದೆ. ವಾಟ್ಸಾಪ್‌ನ (WhatsApp Status) ಈ ಹೊಸ ವೈಶಿಷ್ಟ್ಯದ ಕುರಿತು ಮಾಹಿತಿ ನೀಡುವ ಸ್ಕ್ರೀನ್‌ಶಾಟ್ ಅನ್ನು WABetaInfo ಹಂಚಿಕೊಂಡಿದೆ.
ಮುಂಬರುವ ವಾರಗಳಲ್ಲಿ ರೋಲ್ ಔಟ್
WABetaInfo ವರದಿಯ ಪ್ರಕಾರ, ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಬೀಟಾ ಟೆಸ್ಟ್ ಮಾಡುವವರಿಗೆ ಇದು ಇನ್ನೂ ಬಿಡುಗಡೆಯಾಗಿಲ್ಲ. ಕಂಪನಿಯು ಈ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದರ ಕುರಿತು ಖಚಿತ ಮಾಹಿತಿ ಸಿಕ್ಕಿಲ್ಲ. ಆದರೂ ಕೂಡ ಮುಂಬರುವ ಕೆಲವು ವಾರಗಳಲ್ಲಿ ಇದು ಬೀಟಾ ಆವೃತ್ತಿಗೆ ರೋಲ್ ಔಟ್ ಆಗಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ-BSNL ಹೊಸ ರಿಚಾರ್ಜ್ ಪ್ಲಾನ್ : ₹329 ಗೆ ಸಿಗಲಿದೆ 1000GB ಹೈ-ಸ್ಪೀಡ್ ಡೇಟಾ!
ವೈಶಿಷ್ಟ್ಯಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಶೀಘ್ರದಲ್ಲಿಯೇ ಹೊರಬೀಳಲಿದೆ
ವಾಟ್ಸಾಪ್ ಗ್ರೂಪ್ ಪೋಲ್‌ನಲ್ಲಿ ಎಷ್ಟು ಸದಸ್ಯರು ಭಾಗವಹಿಸಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ಇನ್ನೂ ಹೊರಬಂದಿಲ್ಲ. ಸಮೀಕ್ಷೆಯು ಎಷ್ಟು ಸಮಯದವರೆಗೆ ಲೈವ್ ಆಗಿರುತ್ತದೆ ಎಂಬುದರ ಮಾಹಿತಿ ವರದಿಯಾಗಿಲ್ಲ. ಇದಲ್ಲದೆ, ಈ ವೈಶಿಷ್ಟ್ಯವನ್ನು ಬಳಸಿಕೊಂಡು ಒಂದೇ ಬಾರಿಗೆ ಗ್ರೂಪ್ ಚಾಟ್ ನಲ್ಲಿ ಎಷ್ಟು ಸಮೀಕ್ಷೆಗಳನ್ನು ರಚಿಸಬಹುದು ಎಂದೂ ಕೂಡ ತಿಳಿದುಬಂದಿಲ್ಲ. ವೈಶಿಷ್ಟ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ-ATM ನಿಂದ ಕ್ಯಾಶ್ ಹಿಂಪಡೆಯುವಾಗ Green Light ಬಗ್ಗೆ ಗಮನ ಹರಿಸಿ, ಇಲ್ದಿದ್ರೆ ಖಾಲಿಯಾಗುತ್ತೆ ಖಾತೆ ಎಚ್ಚರ!
ಈ ವೈಶಿಷ್ಟ್ಯಗಳೂ ಕೂಡ ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಹಲವು ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ ಒಂದು ಸಂದೇಶ ಪ್ರತಿಕ್ರಿಯೆ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ದೀರ್ಘ ಸಮಯದಿಂದ ಕಾಯುತ್ತಿದ್ದಾರೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಸಂದೇಶಗಳಿಗೆ ಎಮೊಜಿ ರೂಪದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗಲಿದೆ. ಇದರ ಹೊರತಾಗಿ, ಕಂಪನಿಯು ಮಲ್ಟಿ-ಡಿವೈಸ್ ಸಪೋರ್ಟ್ 2.0 ಮೇಲೂ ಸಹ ಕಾರ್ಯನಿರ್ವಹಿಸುತ್ತಿದೆ. ಅದರ ರೋಲ್‌ಔಟ್ ಬಳಿಕ, ಬಳಕೆದಾರರು ತಮ್ಮ WhatsApp ಖಾತೆಯನ್ನು ಈಗಿರುವುದಕ್ಕಿಂತ ಹೆಚ್ಚಿನ ಸಾಧನಗಳಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.