ATM ನಿಂದ ಕ್ಯಾಶ್ ಹಿಂಪಡೆಯುವಾಗ Green Light ಬಗ್ಗೆ ಗಮನ ಹರಿಸಿ, ಇಲ್ದಿದ್ರೆ ಖಾಲಿಯಾಗುತ್ತೆ ಖಾತೆ ಎಚ್ಚರ!

ATM Card Cloning: ಎಟಿಎಂ ಯಂತ್ರದಲ್ಲಿ (ATM Machine) ಕಾರ್ಡ್ ಬಳಕೆಗಾಗಿ ಅಳವಡಿಸಲಾಗಿರುವ ಸ್ಲಾಟ್‌ನಿಂದ (ATM Card Slot) ಯಾವುದೇ ಗ್ರಾಹಕರ ಡೇಟಾವನ್ನು ಹ್ಯಾಕರ್‌ಗಳು ಕದಿಯುತ್ತಾರೆ. ಇದಕ್ಕಾಗಿ ಸಾಧನವೊಂದನ್ನು ಅವರು ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್‌ನಲ್ಲಿ ಇರಿಸುತ್ತಾರೆ, ಅದು ನಿಮ್ಮ ಕಾರ್ಡ್‌ನ (ATM Card) ಸಂಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತದೆ. ಇದರ ನಂತರ, ಅವರು ಬ್ಲೂಟೂತ್ ಅಥವಾ ಯಾವುದೇ ಇತರ ವೈರ್‌ಲೆಸ್ ಸಾಧನದಿಂದ ಡೇಟಾವನ್ನು ಕದಿಯುತ್ತಾರೆ.

Written by - Nitin Tabib | Last Updated : Mar 6, 2022, 01:31 PM IST
  • ಎಟಿಎಂನಿಂದ ಹಣ ತೆಗೆಯುವಾಗ ವಿಶೇಷ ಕಾಳಜಿ ವಹಿಸಿ
  • ಹಸಿರು ದೀಪ ಆನ್ ಇಲ್ಲ ಎಂದರೆ ಅಪಾಯವನ್ನು ತೆಗೆದುಕೊಳ್ಳಬೇಡಿ
  • ಎಟಿಎಂನಿಂದ ನಿಮ್ಮ ಬ್ಯಾಂಕ್ ವಿವರಗಳನ್ನು ಕದಿಯಬಹುದು
ATM ನಿಂದ ಕ್ಯಾಶ್ ಹಿಂಪಡೆಯುವಾಗ Green Light ಬಗ್ಗೆ ಗಮನ ಹರಿಸಿ, ಇಲ್ದಿದ್ರೆ ಖಾಲಿಯಾಗುತ್ತೆ ಖಾತೆ ಎಚ್ಚರ! title=
Safe Atm Transaction (File Photo)

ನವದೆಹಲಿ: Atm Transaction Rule - ಪ್ರತಿಯೊಬ್ಬರೂ ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಾರೆ, ಆದರೆ ಕೆಲವೊಮ್ಮೆ ನಿಮ್ಮ ಒಂದು ಸಣ್ಣ ತಪ್ಪು ನಿಮಗೆ ಲಕ್ಷ-ಕೋಟಿ ರೂ. ನಷ್ಟವನ್ನು ಉಂಟುಮಾಡಬಹುದು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆನ್‌ಲೈನ್ ವಹಿವಾಟುಗಳೊಂದಿಗೆ, ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಅಷ್ಟೊಂದು ಸುರಕ್ಷಿತವಾಗಿ ಉಳಿದಿಲ್ಲ. ವಾಸ್ತವದಲ್ಲಿ, ಕಳೆದ ಕೆಲವು ದಿನಗಳಿಂದ, ಎಟಿಎಂ ವಂಚನೆಗೆ ಸಂಬಂಧಿಸಿದ ಒಂದಿಲ್ಲ ಒಂದು ಹೊಸ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ. ಆದ್ದರಿಂದ ನೀವು ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ, ಎಚ್ಚರದಿಂದಿರಿ.

ಎಟಿಎಂನಿಂದ ನಿಮ್ಮ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿ ಕಳುವಾಗುತ್ತದೆ
ಎಟಿಎಂನಿಂದ ಹಣ ಡ್ರಾ ಮಾಡುವಾಗ ಎಚ್ಚರದಿಂದಿರಿ. ಎಟಿಎಂ ಬಳಸಿದ ನಂತರ, ನೀವು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಎಟಿಎಂನಲ್ಲಿ ದೊಡ್ಡ ಅಪಾಯವೆಂದರೆ ಅದು ಕಾರ್ಡ್ ಕ್ಲೋನಿಂಗ್ ಅಪಾಯ. ನಿಮ್ಮ ವಿವರಗಳನ್ನು ಹೇಗೆ ಸುಲಭವಾಗಿ ಕದಿಯಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಡೇಟಾ ಕಳ್ಳತನ ಹೇಗೆ? (Safe Atm Transaction)
ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ತುಂಬಾ ಬುದ್ಧಿವಂತರಾಗಿದ್ದಾರೆ. ಈ ಹ್ಯಾಕರ್‌ಗಳು ಎಟಿಎಂ ಯಂತ್ರದಲ್ಲಿ ಕಾರ್ಡ್ ಬಲಕೆಗಾಗಿ ಅಳವಡಿಸಿರುವ ಸ್ಲಾಟ್‌ನಿಂದ ಯಾವುದೇ ಗ್ರಾಹಕರ ಡೇಟಾವನ್ನು ಕದಿಯುತ್ತಾರೆ. ವಾಸ್ತವದಲ್ಲಿ, ಇದಕ್ಕಾಗಿ, ಅವರು ಅಂತಹ ಒಂದು ಸಾಧನವನ್ನು ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್‌ನಲ್ಲಿ ಇರಿಸುತ್ತಾರೆ, ಅದು ನಿಮ್ಮ ಕಾರ್ಡ್‌ನ ಸಂಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತದೆ. ಇದರೊಂದಿಗೆ, ನಿಮ್ಮ ಎಲ್ಲಾ ವಿವರಗಳು ಆ ಸಾಧನಕ್ಕೆ ವರ್ಗಾವಣೆಯಾಗುತ್ತವೆ. ಇದರ ನಂತರ, ಅವರು ಈ ಡೇಟಾವನ್ನು ಬ್ಲೂಟೂತ್ ಅಥವಾ ಯಾವುದೇ ಇತರ ವೈರ್‌ಲೆಸ್ ಸಾಧನದಿಂದ ಕದಿಯುತ್ತಾರೆ.

ಈ ವಿಧಾನವನ್ನು ಅನುಸರಿಸಿ
ಆದರೆ, ಇಷ್ಟೆಲ್ಲಾ ನಡೆದ ಬಳಿಕವೂ ಕೂಡ ನಿಮ್ಮ ಡೆಬಿಟ್ ಕಾರ್ಡ್‌ಗೆ ಪೂರ್ಣ ಪ್ರವೇಶವನ್ನು ಪಡೆಯಲು ಹ್ಯಾಕರ್ ಬಳಿ ನಿಮ್ಮ ಪಿನ್ ಸಂಖ್ಯೆ ಇರುವುದು  ಕಡ್ಡಾಯವಾಗಿದೆ. ಹ್ಯಾಕರ್‌ಗಳು ಇದಕ್ಕೂ ಒಂದು ವಿಧಾನವನ್ನು ಹೊಂದಿದ್ದಾರೆ. ಹ್ಯಾಕರ್‌ಗಳು ಪಿನ್ ಸಂಖ್ಯೆಯನ್ನು ಕ್ಯಾಮರಾ ಮೂಲಕ ಟ್ರ್ಯಾಕ್ ಮಾಡುತ್ತಾರೆ. ಅಂದರೆ, ಅವರು ನಿಮ್ಮ ವೈಯಕ್ತಿಕ ದತಾಂಶ  ಕಳ್ಳತನಕ್ಕೆ ಸಂಪೂರ್ಣ ವ್ಯವಸ್ಥೆಯನ್ನು ಹ್ಯಾಕರ್ ಗಳುಹೊಂದಿದ್ದಾರೆ. ಇದನ್ನು ತಪ್ಪಿಸಲು, ನೀವು ಎಟಿಎಂನಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸುವಾಗ, ಇನ್ನೊಂದು ಕೈಯಿಂದ ಅದನ್ನು ಕವರ್ ಮಾಡಿ, ಇದರಿಂದ ಅದು ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬೀಳುವುದಿಲ್ಲ.

ಇದನ್ನೂ ಓದಿ-Facebook ID Hack: ಫೇಸ್ಬುಕ್ ಖಾತೆ ಹ್ಯಾಕ್ ಕುರಿತು ದೂರು ನೀಡಿದ ಅಧಿಕಾರಿಯ ಪತ್ನಿ, ಬಳಿಕ ಹ್ಯಾಕರ್ ನನ್ನು ನೋಡಿ ದಂಗಾಗಿದ್ದಾಳೆ

ಈ ರೀತಿ ATM ಅನ್ನು ಪರಿಶೀಲಿಸಿ (How Can Do Safe Atm Transaction)
ಇದಲ್ಲದೆ, ನೀವು ಎಟಿಎಂಗೆ ಹೋದಾಗ, ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್ ಅನ್ನು ಮೊದಲು ಪರಿಶೀಲಿಸಿ.
>> ಎಟಿಎಂ ಕಾರ್ಡ್ ಸ್ಲಾಟ್‌ನಲ್ಲಿ ಏನಾದರೂ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ ಅಥವಾ ಸ್ಲಾಟ್ ಸಡಿಲವಾಗಿದ್ದರೆ ಅಥವಾ ಇನ್ನಾವುದೇ ದೋಷವಿದ್ದರೆ, ಅದನ್ನು ಬಳಸಬೇಡಿ.
>> ಇದಲ್ಲದೇ, ಕಾರ್ಡ್ ಸ್ಲಾಟ್‌ನಲ್ಲಿ ಕಾರ್ಡ್ ಅನ್ನು ಸೇರಿಸುವಾಗ, ಅದರಲ್ಲಿ ಉರಿಯುತ್ತಿರುವ 'ಗ್ರೀನ್ ಲೈಟ್' ಮೇಲೆ ಕಣ್ಣಿಡಿ.
>> ಸ್ಲಾಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದರೆ, ನಿಮ್ಮ ಎಟಿಎಂ ಸುರಕ್ಷಿತವಾಗಿದೆ.
>> ಆದರೆ ಅದರಲ್ಲಿ ಕೆಂಪು ಅಥವಾ ಇನ್ನಾವುದೇ ಬೆಳಕು ಇದ್ದರೆ, ಎಟಿಎಂ ಬಳಸಬೇಡಿ.

ಇದನ್ನೂ ಓದಿ -ಈ ವೆಬ್ ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಸರಕುಗಳು, Flipkart, Amazonಗೆ ಭಾರೀ ಟಕ್ಕರ್

ಇಂತಹ ಪರಿಸ್ಥಿತಿಯಲ್ಲಿ ಪೋಲೀಸರನ್ನು ಸಂಪರ್ಕಿಸಿ
ಒಂದು ವೇಳೆ ನೀವೂ ಕೂಡ ಯಾವುದಾದರೂ ಎಟಿಎಂಗೆ ಹೋಗಿದ್ದರೆ ಮತ್ತು ಅಲ್ಲಿ ನೀವು ಹ್ಯಾಕರ್ ಗಳ ಬಲೆಗೆ ಬಿದ್ದಿರುವ ಶಂಕೆ ವ್ಯಕ್ತವಾದರೆ,  ತಕ್ಷಣ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೂ ಕೂಡ ಅದರ ಮಾಹಿತಿ ನೀಡಿ. ಸರಿಯಾದ ಸಮಯಕ್ಕೆ ಪೊಲೀಸರಿಗೆ ನೀವು ಮಾಹಿತಿ ನೀಡಿದರೆ ಅಲ್ಲಿ ಬೆರಳಚ್ಚು ಸಿಗುತ್ತದೆ. ಅಥವಾ ಬ್ಲೂಟೂತ್ ಸಂಪರ್ಕದ ಮೂಲಕವೂ ನಡೆಯುವ ಈ ವಂಚನೆಯನ್ನು ನೀವು ತಪ್ಪಿಸಬಹುದು.

ಇದನ್ನೂ ಓದಿ-Googleನಲ್ಲಿ ಅಂತಿಂಥ ಸಂಗತಿಗಳನ್ನು ಸರ್ಚ್ ಮಾಡುವ ಮೊದಲು ಈ ಟ್ರಿಕ್ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News