ISRO New Chairman Dr V Narayanan: ಭಾರತ ಸರ್ಕಾರ ಡಾ ವಿ. ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಹೊಸ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಈ ನೇಮಕವು ಜನವರಿ 14, 2025 ರಿಂದ ಎರಡು ವರ್ಷಗಳ ಕಾಲ ಅಥವಾ ಮುಂದಿನ ಆದೇಶಗಳು ಹೊರಬರುವವರೆಗೆ, ಯಾವುದು ಮೊದಲು ಸಂಭವಿಸಬಹುದೋ, ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ. 


COMMERCIAL BREAK
SCROLL TO CONTINUE READING

ಎಸ್. ಸೋಮನಾಥ್ ಅವರ ಅವಧಿ ಜನವರಿ 14, 2025 ರಂದು ಮುಕ್ತಾಯಗೊಳ್ಳಲಿದ್ದು, ವಿ. ನಾರಾಯಣನ್ ಅವರು ಅವರ ಸ್ಥಾನವನ್ನು ಭರಿಸಲಿದ್ದಾರೆ. ಇಸ್ರೋ ಗಗನ್ಯಾನ್, ನಿಸಾರ್ ಮತ್ತು ಇತರ ಪ್ರಮುಖ ಯೋಜನೆಗಳನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಇಸ್ರೋಗೆ ನೂತನ ರುವಾರಿ ಬಹಳ ಮಹತ್ವದ್ದಾಗಿದೆ. 


ಇದನ್ನೂ ಓದಿ- ಇಸ್ರೋ ಯೋಜನೆಗೆ ಪೇಲೋಡ್ ಒದಗಿಸಿದ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜುಗಳು


ವಿ. ನಾರಾಯಣನ್ ಅವರು ಪ್ರಸ್ತುತ ವಲಿಯಮಲೆಯಲ್ಲಿರುವ ದ್ರವ ಪ್ರಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ)ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರಾಕೆಟ್ ಮತ್ತು ಉಪಗ್ರಹ ಪ್ರಪಲ್ಷನ್ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅನುಭವವನ್ನು ಹೊಂದಿದ್ದಾರೆ. ಎಲ್‌ಪಿಎಸ್‌ಸಿ ನಿರ್ದೇಶಕರಾಗಿ, ಅವರು ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಗಗನ್ಯಾನ್ ಯೋಜನೆಗಳಂತಹ ಇಸ್ರೋ ಯೋಜನೆಗಳಿಗಾಗಿ ದ್ರವ, ಸೆಮಿ ಕ್ರಯೋಜೆನಿಕ್ ಮತ್ತು ಕ್ರಯೋಜೆನಿಕ್ ಪ್ರಪಲ್ಷನ್ ಹಂತಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 


ನಾರಾಯಣನ್ ಅವರು ಖಾರಗ್‌ಪುರ್‌ನ ಭಾರತೀಯ ತಾಂತ್ರಿಕ ಸಂಸ್ಥೆ (IIT) ಯ ಪದವೀಧರರು ಆಗಿದ್ದಾರೆ. Aerospace Engineering ನಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಅವರು IIT ಖಾರಗ್‌ಪುರ್‌ನಲ್ಲಿ ಎಂಟೆಕ್‌ನಲ್ಲಿ ಪ್ರಥಮ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಹಾಗೂ ಭಾರತೀಯ ಅಂತರಿಕ್ಷ ಸಂಸ್ಥೆ (ASI) ಯಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ರಾಕೆಟ್ ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ASI ಪ್ರಶಸ್ತಿಯನ್ನು, ಹೈ ಎನರ್ಜಿ ಮೆಟೀರಿಯಲ್ಸ್ ಸೊಸೈಟಿ ಆಫ್ ಇಂಡಿಯಾ ನೀಡಿದ ತಂಡ ಪ್ರಶಸ್ತಿಯನ್ನು, ISRO ವತಿಯಿಂದ ಪ್ರೌಢ ಸಾಧನೆ ಮತ್ತು ಕಾರ್ಯಕ್ಷಮತೆಯ ಸಾಧನೆಗಾಗಿ ಪ್ರಶಸ್ತಿಗಳನ್ನು ಹಾಗೂ ತಂಡದ ಉತ್ಕೃಷ್ಟತೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ- ISROದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ!ತಿಂಗಳಿಗೆ 2,08,700 ರೂ.ವರೆಗೆ ವೇತನ! ಅರ್ಜಿ ಸಲ್ಲಿಸಬೇಕಾದ ಹುದ್ದೆಯ ವಿವರ ಹೀಗಿದೆ


ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ (ಹೊನೊರಿಸ್ ಕೌಸಾ) ಪದವಿಯನ್ನು ಪಡೆದಿದ್ದಾರೆ. 2018ರಲ್ಲಿ IIT ಖಾರಗ್‌ಪುರ್‌ನ ಡಿಸ್ಟಿಂಗ್‌ಗ್ವಿಶ್ಡ್ ಅಲ್ಯೂಮ್ನಿ ಪ್ರಶಸ್ತಿಯನ್ನು, 2019ರಲ್ಲಿ ನ್ಯಾಷನಲ್ ಡಿಸೈನ್ ಅಂಡ್ ರಿಸರ್ಚ್ ಫೋರಮ್ ಆಫ್ ಎಂಜಿನಿಯರ್ಸ್ (ಇಂಡಿಯಾ) ನೀಡಿದ ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಯನ್ನು ಮತ್ತು 2019ರಲ್ಲಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (AeSI) ಯಿಂದ ರಾಷ್ಟ್ರೀಯ ಏರೋನಾಟಿಕಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.