ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?

A.P.J.AbdulKalam: ಎಪಿಜೆ ಅಬ್ದುಲ್‌ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931ರಲ್ಲಿ ಜನಿಸಿದರು. ಮಗು ತನ್ನ ಬಾಲ್ಯವನ್ನು ಅತ್ಯಂತ ಬಡತನದಲ್ಲಿ ಕಳೆದ ಇವರ ತಂದೆ ಸರಳ ಮೀನುಗಾರರಾಗಿದ್ದರು. ಕುಟುಂಬವನ್ನು ಪೋಷಿಸಲು ತಂದೆಗೆ ತುಂಬಾ ಕಷ್ಟವಾಗಿತ್ತು. ಇಷ್ಟೆಲ್ಲಾ ಬಡತನ, ಮನೆಯಲ್ಲಿ ಇಂತಹ ವಾತಾವರಣ ಇದ್ದರೂ ಅಬ್ದುಲ್‌ ಕಲಾಂ ಅವರಿಗೆ ಮೊದಲಿನಿಂದಲೂ ಓದುವ ಆಸೆ ಇತ್ತು. ಅವರ ಕುಟುಂಬದಲ್ಲಿ 4 ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅವರು ಕಿರಿಯರಾಗಿದ್ದರು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಎಪಿಜೆ ಅಬ್ದುಲ್‌ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931ರಲ್ಲಿ ಜನಿಸಿದರು. ಮಗು ತನ್ನ ಬಾಲ್ಯವನ್ನು ಅತ್ಯಂತ ಬಡತನದಲ್ಲಿ ಕಳೆದ ಇವರ ತಂದೆ ಸರಳ ಮೀನುಗಾರರಾಗಿದ್ದರು. ಕುಟುಂಬವನ್ನು ಪೋಷಿಸಲು ತಂದೆಗೆ ತುಂಬಾ ಕಷ್ಟವಾಗಿತ್ತು. ಇಷ್ಟೆಲ್ಲಾ ಬಡತನ, ಮನೆಯಲ್ಲಿ ಇಂತಹ ವಾತಾವರಣ ಇದ್ದರೂ ಅಬ್ದುಲ್‌ ಕಲಾಂ ಅವರಿಗೆ ಮೊದಲಿನಿಂದಲೂ ಓದುವ ಆಸೆ ಇತ್ತು. ಅವರ ಕುಟುಂಬದಲ್ಲಿ 4 ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅವರು ಕಿರಿಯರಾಗಿದ್ದರು. 

2 /6

ಶಿಕ್ಷಣದ ಕನಸನ್ನು ಕಣ್ಣಲ್ಲಿ ತುಂಬಿಕೊಂಡು, ಬಾಲ್ಯದಲ್ಲಿ ಆಟ, ಆಟಿಕೆಗಳು, ವಿದ್ಯಾಭ್ಯಾಸದ ಖರ್ಚು ವೆಚ್ಚಗಳಿಗೆ ದಿನಪತ್ರಿಕೆಗಳನ್ನು ಮಾರಬೇಕಿತ್ತು. 8 ವರ್ಷದ ಮಗು ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಂಡು, ದೈನಂದಿನ ಕೆಲಸ ಮುಗಿಸಿ ಗಣಿತ ಅಧ್ಯಯನಕ್ಕೆ ಹೋಗುತ್ತಿತ್ತು. ಟ್ಯೂಷನ್ ಮುಗಿಸಿ ಮರಳಿದ ನಂತರ ರಾಮೇಶ್ವರಂ ರೈಲು ನಿಲ್ದಾಣ ಮತ್ತು ಹತ್ತಿರದ ಬಸ್ ನಿಲ್ದಾಣಗಳಲ್ಲಿ ದಿನಪತ್ರಿಕೆಗಳನ್ನು ಮಾರುತ್ತಿದ್ದರು.  

3 /6

ಕಷ್ಟಪಟ್ಟು ಆ ಪುಟ್ಟ ಮಗು ಐದನೇ ತರಗತಿಗೆ ಬಂದಿತ್ತು. ಐದನೇ ತರಗತಿಯಲ್ಲಿ ಒಂದು ದಿನ ಶಿಕ್ಷಕರು ಪಕ್ಷಿಗಳು ಹೇಗೆ ಹಾರುತ್ತವೆ ಎಂದು ಮಕ್ಕಳನ್ನು ಕೇಳಿದರು. ಯಾವ ಮಕ್ಕಳೂ ಉತ್ತರಿಸಲು ಸಾಧ್ಯವಾಗಲಿಲ್ಲ. ಮರುದಿನ ಶಿಕ್ಷಕರು ಮಕ್ಕಳನ್ನು ಸಮುದ್ರತೀರಕ್ಕೆ ಕರೆದೊಯ್ದರು. ಅಲ್ಲಿ ಅವರು ಮಕ್ಕಳಿಗೆ ಹಾರುವ ಪಕ್ಷಿಗಳನ್ನು ತೋರಿಸಿದರು, ಅವರು ಹಾರುವ ಕಾರಣ ಮತ್ತು ಪಕ್ಷಿಗಳ ದೇಹದ ರಚನೆಯನ್ನು ವಿವರಿಸಿದರು. ಮಕ್ಕಳೆಲ್ಲ ಟೀಚರ್ ಹೇಳುವುದನ್ನು ಕೇಳುತ್ತಿದ್ದರೂ ಈ ಮಗು ಮನಸ್ಸಿನಲ್ಲಿಯೇ ಕಳೆದು ಹೋಗುವ ಕನಸು ಕಾಣುತ್ತಿತ್ತು. ಬೆಳೆದ ನಂತರ, ಅವರು ಮದ್ರಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಏರೋನಾಟಿಕಲ್ ಎಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದರು.  

4 /6

ಭಾರತದ ಮಾಜಿ ರಾಷ್ಟ್ರಪತಿ, ಹೆಸರಾಂತ ವಿಜ್ಞಾನಿ ಮತ್ತು ಇಂಜಿನಿಯರ್ ಎಂದು ಪ್ರಸಿದ್ಧರಾದರು. ಸುಮಾರು ನಾಲ್ಕು ದಶಕಗಳ ಕಾಲ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳನ್ನು ವಿಜ್ಞಾನಿ ಮತ್ತು ವಿಜ್ಞಾನ ನಿರ್ವಾಹಕರಾಗಿ ಕಾರ್ಯಬಿರ್ವಹಿಸಿದರು. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ವಾಹನ ತಂತ್ರಜ್ಞಾನದ ಅಭಿವೃದ್ಧಿಗಾಗಿ ಭಾರತದಲ್ಲಿ 'ಮಿಸೈಲ್ ಮ್ಯಾನ್' ಎಂಬ ಬಿರುದನ್ನು ಪಡೆದರು.   

5 /6

ಅವರು ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿದ್ದರೂ, ನೀವು ದೃಢಸಂಕಲ್ಪ ಹೊಂದಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಕನಸುಗಳನ್ನು ವಾಸ್ತವಕ್ಕೆ ತಿರುಗಿಸಬಹುದು ಎಂದು ಕಲಿಸಿದರು. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಈ ಮಾತುಗಳು ಇಂದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಜುಲೈ 27, 2015 ರಂದು, ಐಐಎಂ ಶಿಲ್ಲಾಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಾಗ, ಕಲಾಂ ಹೃದಯಾಘಾತಕ್ಕೆ ಒಳಗಾಗಿದ್ದರು.  

6 /6

ಇಷ್ಟೆಲ್ಲಾ ಸಾಧನೆ ಮಾಡಿ ಕಷ್ಟದಲ್ಲಿ ಬೆಳದು ಬಂದ ಅಬ್ದುಲ್‌ ಕಲಾಂ ಅವರ ಆಸ್ತಿ ಏನಾಗಿತ್ತು, ಅವರು ಸಂಪಾದನೆ ಮಾಡಿದ್ದು ಏನನ್ನು ಎಂದು ಕೇಳಬಹುದು ಇದಕ್ಕೆ ಉತ್ತರ ಇದೆ.. ಅಬ್ದುಲ್‌ ಕಲಾಂ ಸಂಪಾದನೆ ಮಾಡಿದ್ದು ಕೋಟಿ ಕೊಟಿ ಆಸ್ತಿಯನ್ನಲ್ಲ ಹೊರತಾಗಿ, ಇವರ ಆಸ್ತಿ ಏನಂದರೆ, ಕೇವಲ 2500 ಪುಸ್ತಕ, 6 ಪ್ಯಾಂಟ್‌, 4 ಶರ್ಟ್‌, 3 ಸೂಟ್‌, 46 ಡಾಕ್ಟರೇಟ್‌, 1 ಪದ್ಮಶ್ರೀ, 1 ಭಾರತ ರತ್ನ.