Blue Traffic Light: ಟ್ರಾಫಿಕ್ ಲೈಟ್‌ನ ಸೆಟಪ್‌ನಲ್ಲಿ ನೀಲಿ ಲೈಟ್, ಏನಿದರ ಅರ್ಥ
Blue Traffic Light: ಟ್ರಾಫಿಕ್ ಲೈಟ್ನಲ್ಲಿ ಕೆಂಪು, ಹಳದಿ, ಹಸಿರು ಬಣ್ಣಗಳನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ನೀಲಿ ಬಣ್ಣದ ಟ್ರಾಫಿಕ್ ಲೈಟ್ ನೋಡಿದ್ದೀರಾ?
Blue Traffic Light: ಟ್ರಾಫಿಕ್ ಲೈಟ್‌ನ (Taffic Light) ಸೆಟಪ್‌ನಲ್ಲಿ ನೀವು ಕೆಂಪು, ಹಳದಿ, ಹಸಿರು ಬಣ್ಣಗಳನ್ನು ನೋಡಿರುತ್ತೀರಿ. ಕೆಂಪು ಎಂದರೆ ನಿಲ್ಲುವುದು, ಹಳದಿ-ತಯಾರಾಗುವುದು, ಹಸಿರು ಎಂದರೆ ಮುಂದಕ್ಕೆ ಹೋಗುವುದು ಎಂದು ನಿಮಗೆ ತಿಳಿದಿರಬಹುದು. ಆದರೆ, ಎಂದಾದರೂ ನೀವು ನೀಲಿ ಬಣ್ಣದ ಟ್ರಾಫಿಕ್ ಲೈಟ್ ನೋಡಿದ್ದೀರಾ?
ವಾಸ್ತವವಾಗಿ, ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೆಂಪು, ಹಳದಿ, ಹಸಿರು ಬಣ್ಣದ ಟ್ರಾಫಿಕ್ ಲೈಟ್‌ಗಳನ್ನೇ ಬಳಸಲಾಗುತ್ತದೆ. ಆದರೆ, ಜಪಾನ್‌ನಲ್ಲಿ ಮಾತ್ರ ಹಸಿರು ಬಣ್ಣದ ಬದಲಿಗೆ ನೀಲಿ ಬಣ್ಣದ ಟ್ರಾಫಿಕ್ ಲೈಟ್ (Japan Traffic Light) ಅನ್ನು ಕಾಣಬಹುದು.
ಜಪಾನ್‌ನಲ್ಲಿ ನೀಲಿ ಟ್ರಾಫಿಕ್ ಲೈಟ್?
ಜಪಾನ್‌ನಲ್ಲಿ 1930 ರ ದಶಕದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಲೈಟ್‌ಗಳನ್ನು ಸ್ಥಾಪಿಸಿದಾಗ ಅದನ್ನು ಜಪಾನೀ ಭಾಷೆಯಲ್ಲಿ 'ಗೋ ಸಿಗ್ನಲ್' "AO" ಎಂದು ವಿವರಿಸಲಾಯಿತು. ಜಪಾನಿನಲ್ಲಿ "AO" ಎಂಬುದು ನೀಲಿ ಮತ್ತು ಹಸಿರು ಎರಡೂ ಬಣ್ಣಗಳನ್ನು ಸೂಚಿಸುತ್ತದೆ. ಹಾಗಾಗಿ, ಜಪಾನ್‌ನಲ್ಲಿ ನೀಲಿ ಟ್ರಾಫಿಕ್ ಲೈಟ್ (Blue Traffic Light In Japan) ಅನ್ನು ಬಳಸಲಾಗುತ್ತದೆ.
ಇದನ್ನೂ ಓದಿ- ನಿಮ್ಮ ಮನೆಯನ್ನೇ ಸಣ್ಣ ಸಿನಿಮಾ ಹಾಲ್ ನ್ನಾಗಿ ಮಾಡಲಿದೆ ಈ ಪ್ರೊಜೆಕ್ಟರ್...!
ಇನ್ನೂ 1960 ರದಶಕದ ಅಂತ್ಯದಲ್ಲಿ ವಿಯೆನ್ನಾ ಸಮಾವೇಶವು ಟ್ರಾಫಿಕ್ ಸಿಗ್ನಲ್‌ಗಳನ್ನು (ಹಸಿರು ಟ್ರಾಫಿಕ್ ದೀಪಗಳನ್ನು ಒಳಗೊಂಡಂತೆ) ಪ್ರಮಾಣೀಕರಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಜಪಾನ್‌ನ ಸಾಮಾನ್ಯ ಜನರು ಮತ್ತು ಭಾಷಾ ತಜ್ಞರು ಇದನ್ನು ವಿರೋಧಿಸಿದರು. ಜಪಾನ್‌ನ ನಿಯಮಗಳಿಗೆ AO ಬಣ್ಣಗಳ ಬಳಕೆಯ ಅಗತ್ಯವಿದ್ದರೆ, ಅವರು ಹಾಗೆ ಮಾಡಬೇಕು ಎಂದು ಅವರು ನಂಬಿದ್ದರು. ಹಾಗಾಗಿ ಜಪಾನ್ ಟ್ರಾಫಿಕ್ ದೀಪಕ್ಕೆ ಹಸಿರು ಬಣ್ಣದ ಬದಲಿಗೆ "ao" ಪದವನ್ನು ಬಳಸಿತು. ಜಪಾನ್‌ನ ಅಧಿಕೃತ ಸಂಚಾರ ನಿಯಮಗಳು ಮತ್ತು ದಾಖಲೆಗಳಲ್ಲಿ, ಹಸಿರು ಟ್ರಾಫಿಕ್ ಲೈಟ್ ಅನ್ನು Ao ಎಂದು ಕರೆಯಲಾಗುತ್ತಿತ್ತು.
ಇದನ್ನೂ ಓದಿ- T20 WorldCup: ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ವಾಟ್ಸಾಪ್, ಡೌನ್‌ಲೋಡ್ ಮಾಡಲು ಇಲ್ಲಿದೆ ಸುಲಭ ವಿಧಾನ
ಆದಾಗ್ಯೂ, ನಂತರದ ದಿನಗಳಲ್ಲಿ ಜಪಾನ್ ಅಂತರಾಷ್ಟೀಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು. 1973ರ ಕ್ಯಾಬಿನೆಟ್ ಆದೇಶದಲ್ಲಿ ಸರ್ಕಾರವು ಟ್ರಾಫಿಕ್ ದೀಪಗಳಿಗೆ ಹಸಿರು ನೀಲಿ ಛಾಯೆಯನ್ನು ಬಳಸಲು ನಿರ್ದೇಶಿಸಿತು. ಅಂದರೆ ಹಸಿರು ಆದರೆ ನೀಲಿ ಬಣ್ಣವನ್ನು ಕಾಣುವ ಬಣ್ಣ. ಜಪಾನ್‌ನಲ್ಲಿ ನೀಲಿ ಟ್ರಾಫಿಕ್ ಲೈಟ್‌ಗಳಿವೆ ಎಂದು ಇಂದು ಜನರು ಹೇಳುತ್ತಿದ್ದರೂ, ಅವು ನೀಲಿ ಅಲ್ಲ, ಆದರೆ ನೀಲಿ ಬಣ್ಣದಲ್ಲಿ ಕಂಡುಬರುವ ಹಸಿರು ಛಾಯೆ ಎಂದು ಸರ್ಕಾರ ವಾದಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.