How To Cool Devices :ಮೊಬೈಲ್ ಫೋನ್‌ಗಳು ಬಿಸಿಯಾಗಿ ಸ್ಪೋಟವಾಗುವ ಸುದ್ದಿ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳಿ ಬರುತ್ತಿದೆ.ಈ ಬಾರಿ ಬಿಸಿಲ ತಾಪ ಕೂಡಾ ಹೆಚ್ಚು.ಮಳೆ ಸುರಿಯುತ್ತಿದ್ದರೂ ಮಳೆ ನಿಂತ ಕೂಡಲೇ ಬಿಸಿಲು ಸುಡಲು ಆರಂಭಿಸುತ್ತಿದೆ.ಇದರಿಂದ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ವಿದ್ಯುತ್ ಉಪಕರಣಗಳಿಗೂ ಹೆಚ್ಚು ಅಪಾಯವಿದೆ.ತಾಪಮಾನವು ಗಗನಕ್ಕೇರಿದಾಗ, ಸ್ಮಾರ್ಟ್‌ಫೋನ್‌ಗಳು,ಲ್ಯಾಪ್‌ಟಾಪ್,ಟಿವಿ ಮತ್ತು ಹವಾನಿಯಂತ್ರಣಗಳು ಸಹ ಅತಿಯಾಗಿ ಬಿಸಿಯಾಗಬಹುದು.ಕೆಲವೊಂದು ಸಂದರ್ಭಗಳಲ್ಲಿ ಸ್ಪೋಟವಾಗುವ ಭಯ ಕೂಡಾ ಇರುತ್ತದೆ. ಹಾಗಿದ್ದರೆ ಈ ಡಿವೈಸ್ ಗಳು ಏಕೆ ಹೆಚ್ಚು ಬಿಸಿಯಾಗುತ್ತವೆ ಅದನ್ನು ನಿಯಂತ್ರಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಡಿವೈಸ್ ಗಳು ಏಕೆ ಬಿಸಿಯಾಗುತ್ತವೆ? :
ಮೊಬೈಲ್ ಫೋನ್ ಮತ್ತು ಎಸಿ ಬಳಕೆಯಲ್ಲಿದ್ದಾಗ ಸ್ವಲ್ಪ ಮಟ್ಟದ ಶಾಖವನ್ನು ಉತ್ಪಾದಿಸುತ್ತವೆ.ಇದರ ಜೊತೆಗೆ ಹೊರಗಿನ ಹವಾಮಾನವು ತುಂಬಾ ಬಿಸಿಯಾಗಿರುವಾಗ,ಈ ಸಾಧನಗಳನ್ನು ತಂಪಾಗಿರಿಸುವ ಫ್ಯಾನ್‌ಗಳು ಮತ್ತು ಇತರ ವಸ್ತುಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.ಈ ಕಾರಣದಿಂದಾಗಿ,ಈ ಉಪಕರಣಗಳು ಹೆಚ್ಚು ಬಿಸಿಯಾಗುತ್ತವೆ.ಇದು ಅವುಗಳ ಆಂತರಿಕ ಭಾಗಗಳನ್ನು ಹಾನಿಗೊಳಿಸುತ್ತದೆ ಅಥವಾ ಬೆಂಕಿ ಹತ್ತಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Realme P1 Pro: ಈ ಸ್ಮಾರ್ಟ್‌ಫೋನ್ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ
ಈ ಕಾರಣಕ್ಕಾಗಿಯೇ ವಿಮಾನಯಾನ ಕಂಪನಿಗಳು ನಿಮ್ಮ ಚೆಕ್-ಇನ್ ಲಗೇಜ್‌ನಲ್ಲಿ ಫೋನ್‌ಗಳು,ಪವರ್ ಬ್ಯಾಂಕ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಅವುಗಳನ್ನು ನಿಮ್ಮ ಕ್ಯಾರಿ-ಆನ್ ಬ್ಯಾಗ್‌ನಲ್ಲಿ ಇರಿಸಿಕೊಳ್ಳುವಂತೆ ಹೇಳುತ್ತವೆ.ಲಗೇಜ್ ವಿಭಾಗದಲ್ಲಿ ಕಡಿಮೆ ಗಾಳಿಯ ಪ್ರಸರಣವಿರುತ್ತದೆ. ಇಲ್ಲಿ ತಾಪಮಾನ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳು ಬೆಂಕಿಯನ್ನು ಉಂಟುಮಾಡುವ ಅಪಾಯವನ್ನು ಹೆಚ್ಚಿಸುತ್ತದೆ.ಅದೇ ರೀತಿ,ವಿಪರೀತ ಶಾಖದಲ್ಲೂ,ಬ್ಯಾಟರಿ ಮತ್ತು ಸಾಧನದ ಇತರ ಭಾಗಗಳು ಬಿಸಿಯಾಗುವುದರೊಂದಿಗೆ ಬೆಂಕಿಯ ಅಪಾಯ ಹೆಚ್ಚುತ್ತದೆ. ಇದೇ ಕಾರಣದಿಂದ ಮಧ್ಯಾಹ್ನದ ಸಮಯದಲ್ಲಿ ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಬಳಕೆಯಲ್ಲಿ ಇಲ್ಲದಿದ್ದರೂ ಬಿಸಿಯಾಗುತ್ತವೆ.ಇದು ಅದರೊಳಗೆ ಅಳವಡಿಸಲಾಗಿರುವ ಬ್ಯಾಟರಿ ಕಾರಣದಿಂದ ಆಗುತ್ತದೆ.
ಕಾರಣಗಳು ಏನಿರಬಹುದು? :
ನಿರ್ಬಂಧಿಸಲಾದ ಗಾಳಿಯ ಮಾರ್ಗ: ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ಶಾಖವನ್ನು ತೆಗೆದುಹಾಕಲು vents ಹೊಂದಿರುತ್ತವೆ.ಈ ಜಾಲರಿಗಳನ್ನು ಮುಚ್ಚಿದ ಗಾಳಿಯ ಹರಿವು ನಿಂತು ಹೋಗಿ ಅದು ತುಂಬಾ ಬಿಸಿಯಾಗಿರುತ್ತದೆ.
ನಿರಂತರ ಬಳಕೆ: ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಹೆಚ್ಚು ಸಮಯ ಬಳಸಿದರೆ, ಅವು ಹೆಚ್ಚು ಬಿಸಿಯಾಗುತ್ತವೆ.ವಿಶೇಷವಾಗಿ ಗೇಮ್ ಆಡುವಾಗ ಅಥವಾ ವೀಡಿಯೊ ಎಡಿಟ್ ಮಾಡುವಾಗ,ಹೆಚ್ಚಿನ ಸಂಸ್ಕರಣಾ ಶಕ್ತಿಯನ್ನು ಬಳಸಲಾಗುತ್ತದೆ. ಇದರಿಂದಾಗಿ ಈ ಸಾಧನಗಳು ಇನ್ನಷ್ಟು ಬಿಸಿಯಾಗುತ್ತವೆ.
ಹೊರಗಿನ ತಾಪಮಾನ: ಹೊರಗಿನ ಹವಾಮಾನವು ತುಂಬಾ ಬಿಸಿಯಾಗಿದ್ದರೆ, ಉಪಕರಣಗಳು ತಣ್ಣಗಾಗಲು ಕಷ್ಟವಾಗುತ್ತದೆ. ನೀವು ಅವುಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿ ಕಾರಿನಲ್ಲಿ ಬಿಟ್ಟರೆ,ಅವು ಇನ್ನಷ್ಟು ಬಿಸಿಯಾಗಬಹುದು.
ಧೂಳು ಶೇಖರಣೆ: ಕೆಲವೊಮ್ಮೆ ಫೋನ್, ಎಸಿ, ಲ್ಯಾಪ್‌ಟಾಪ್ ಇತ್ಯಾದಿಗಳಲ್ಲಿನ ಫ್ಯಾನ್ ಹಾಳಾಗುತ್ತದೆ. ಥರ್ಮಲ್ ಪೇಸ್ಟ್ ಹಾಳಾಗುತ್ತದೆ ಅಥವಾ ಧೂಳು ಸಂಗ್ರಹವಾಗುತ್ತದೆ.ಈ ಎಲ್ಲಾ ಕಾರಣಗಳಿಂದ, ಉಪಕರಣಗಳನ್ನು ತಂಪಾಗಿರಿಸುವ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ಗೂಗಲ್ ಫೋಟೋಸ್ ನಿಂದ ಕೆಲವೇ ಕ್ಷಣಗಳಲ್ಲಿ ಎಲ್ಲಾ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.. ಹೇಗೆ ಗೊತ್ತಾ?
ಸಾಧನವನ್ನು ತಂಪಾಗಿಡುವುದು ಹೇಗೆ ? :
- ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ. ಸ್ಕ್ರೀನ್ ಬ್ರೈಟ್ ನೆಸ್ ಅನ್ನು ಕಡಿಮೆ ಮಾಡಿ.
- ನೀವು ಫೋನ್‌ಗಾಗಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಬಹುದು ಇದರಿಂದ ಅದು ಕಡಿಮೆ ಬಿಸಿಯಾಗುತ್ತದೆ.
- ನೇರ ಸೂರ್ಯನ ಬೆಳಕಿನಿಂದ ದೂರವಿರುವ ತಂಪಾದ ಮತ್ತು ನೆರಳಿನ ಸ್ಥಳದಲ್ಲಿ ಸಾಧನವನ್ನು ಇರಿಸಿ.ಮೊಬೈಲ್ ಫೋನ್ ಕವರ್ ಅನ್ನು ತೆಗೆದುಹಾಕುವುದರಿಂದಲೂ ಅದು ತ್ವರಿತವಾಗಿ ತಣ್ಣಗಾಗುತ್ತದೆ.ನೀವು ಲ್ಯಾಪ್‌ಟಾಪ್ ಅನ್ನು ತಲೆಕೆಳಗಾಗಿ ಇರಿಸಬಹುದು ಇದರಿಂದ ಕೆಳಭಾಗದಲ್ಲಿರುವ ಫ್ಯಾನ್ ಗಾಳಿಯನ್ನು ಸೆಳೆಯುತ್ತದೆ.
- ಲ್ಯಾಪ್‌ಟಾಪ್‌ಗಾಗಿ, ಫ್ಯಾನ್ ಹೊಂದಿರುವ ಕೂಲಿಂಗ್ ಪ್ಯಾಡ್ ಅನ್ನು ಬಳಸಬಹುದು. ಟೆಲಿವಿಷನ್‌ಗಳು ಅಥವಾ ಗೇಮಿಂಗ್ ಕನ್ಸೋಲ್‌ಗಳಂತಹ ದೊಡ್ಡ ಉಪಕರಣಗಳಿಗಾಗಿ, ಪ್ರತ್ಯೇಕ ಫ್ಯಾನ್ ಅನ್ನು ಅಳವಡಿಸುವ ಮೂಲಕ ಗಾಳಿಯ ಪ್ರಸರಣವನ್ನು ಸುಧಾರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ