BSNL 4G : ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಫೋನ್ ಎಲ್ಲರಿಗೂ ಅನಿವಾರ್ಯವಾಗಿದೆ.ಬ್ಯಾಂಕಿಂಗ್,ಆನ್‌ಲೈನ್ ಪಾವತಿ,ಮನರಂಜನೆ,ಟಿಕೆಟ್ ಬುಕಿಂಗ್, ಶಿಕ್ಷಣ ಮತ್ತು ಆನ್‌ಲೈನ್ ಶಾಪಿಂಗ್‌ನಂತಹ ಅನೇಕ ಪ್ರಮುಖ ಕಾರ್ಯಗಳು ಮೊಬೈಲ್ ಫೋನ್‌ಗಳ ಮೂಲಕವೇ ನೆರವೇರಿ ಬಿಡುತ್ತದೆ.ಈ ಕಾರ್ಯಗಳನ್ನು ಉತ್ತಮವಾಗಿ ಮಾಡಲು, ವೇಗವಾದ ಮತ್ತು ಸ್ಥಿರವಾದ ನೆಟ್‌ವರ್ಕ್ ಇರುವುದು ಬಹಳ ಮುಖ್ಯ.ಆದರೆ,ಕೆಲವೊಮ್ಮೆ ನೆಟ್ವರ್ಕ್ ಸಿಗುವುದೇ ಇಲ್ಲ.ಇದು ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.


COMMERCIAL BREAK
SCROLL TO CONTINUE READING

ವಿಶೇಷ ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಏರಿಯಾದಲ್ಲಿ ಮೊಬೈಲ್ ನೆಟ್‌ವರ್ಕ್‌ ಸಿಗುತ್ತದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬಹುದು. ಇದನ್ನು ಸಿಗ್ನಲ್ ಸಾಮರ್ಥ್ಯ ಎಂದೂ ಸಹ ಕರೆಯಲಾಗುತ್ತದೆ.OpenSignal ನಂತಹ ಅಪ್ಲಿಕೇಶನ್‌ಗಳೊಂದಿಗೆ, BSNL, Jio, Airtel ಅಥವಾ Vodafone Ideaನಂತಹ ವಿಭಿನ್ನ ನೆಟ್‌ವರ್ಕ್‌ಗಳು ನಿಮ್ಮ ಏರಿಯಾದಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು  ಕಂಡುಹಿಡಿಯಬಹುದು.


ಇದನ್ನೂ ಓದಿ : Google Pay ನಿಂದ ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡುವ ಸಿಂಪಲ್‌ ಟ್ರಿಕ್‌ ಇಲ್ಲಿದೆ ನೋಡಿ


OpenSignal ಅಪ್ಲಿಕೇಶನ್‌ನಿಂದ ಎಲ್ಲವೂ ಸ್ಪಷ್ಟ :
ಫೋನ್‌ನಲ್ಲಿ ಓಪನ್‌ಸಿಗ್ನಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ನಂತರ,ನೆಟ್‌ವರ್ಕ್ ಸ್ಪೀಡ್ ಅನ್ನು ಪರಿಶೀಲಿಸಬಹುದು.ಈ ಮೂಲಕ ನಿಮ್ಮ ಏರಿಯಾದಲ್ಲಿ ಯಾವ ನೆಟ್‌ವರ್ಕ್  ಚೆನ್ನಾಗಿ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.ಯಾವ ನೆಟ್‌ವರ್ಕ್ ಸಿಗ್ನಲ್‌ಗಳು ಎಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎನ್ನುವುದು ಕೂಡಾ ಇದರಿಂದ ಕಂಡು ಹಿಡಿಯಬಹುದು. 


ಈ ಅಪ್ಲಿಕೇಶನ್ ನಿಮ್ಮ ಏರಿಯಾದ ನಕ್ಷೆಯನ್ನು ತೋರಿಸುತ್ತದೆ. ಇಲ್ಲಿರುವ ಹಸಿರು ಬಣ್ಣದ ಸರ್ಕಲ್ ನೆಟ್‌ವರ್ಕ್ ಸಿಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ.   OpenSignal ನ  ಸಹಾಯದಿಂದ Jio, Airtel, BSNL ಮತ್ತು VI ನೆಟ್‌ವರ್ಕ್‌ಗಳನ್ನು  ಸುಲಭವಾಗಿ ಕಂಡುಹಿಡಿಯಬಹುದು.ಹೊಸ ಸಿಮ್ ಖರೀದಿಸುವ ಮುನ್ನ   ನಿಮ್ಮ ಏರಿಯಾದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ. 


ಇದನ್ನೂ ಓದಿ : ದುಬಾರಿ ಫೋನ್‌ʼಗಳಿಗಿರುವ ಫೀಚರ್ಸ್‌... ಕ್ಯಾಮರಾ-ಬ್ಯಾಟರಿ ಎಲ್ಲವೂ ಸೂಪರ್‌!‌ ಕೇವಲ 6,499 ರೂ.ಗೆ ಲಭ್ಯವಿದೆ ಈ ಸ್ಮಾರ್ಟ್‌ಫೋನ್!


ನೆಟ್‌ವರ್ಕ್‌ ಚೆಕ್ ಮಾಡುವುದು ಹೇಗೆ ? :
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ OpenSignal ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ  ಇನ್ಸ್ಟಾಲ್ ಮಾಡಿಕೊಳ್ಳಿ. 
ಹಂತ 2: ಅಪ್ಲಿಕೇಶನ್ ಅನ್ನು  ಸೆಟ್ ಮಾಡಿಕೊಳ್ಳಿ.
ಹಂತ 3: BSNL ನ 4G ಸಿಗ್ನಲ್ ವೀಕ್ಷಿಸಲು, ಅಪ್ಲಿಕೇಶನ್‌ನ ಹೋಮ್ ಸ್ಕ್ರೀನ್‌ನಲ್ಲಿ ಕೆಳಗಿನ ಮೆನುವಿನಲ್ಲಿರುವ ಪಿನ್ ಬಾಣದ ಮೇಲೆ ಕ್ಲಿಕ್ ಮಾಡಿ.
ಹಂತ 4: ಮೇಲಿನ ಮೆನುವಿನಲ್ಲಿ BSNL ಆಯ್ಕೆಮಾಡಿ ಮತ್ತು 'ಟೈಪ್' ಕಾಲಂನಲ್ಲಿ 4G ಆಯ್ಕೆಮಾಡಿ.
ಹಂತ 5: ನಕ್ಷೆಯಲ್ಲಿನ ಹಸಿರು ವಲಯಗಳು ಉತ್ತಮ ಸಂಕೇತವನ್ನು ಸೂಚಿಸುತ್ತವೆ ಮತ್ತು ಕೆಂಪು ವಲಯಗಳು ದುರ್ಬಲ ಸಂಕೇತವನ್ನು ಸೂಚಿಸುತ್ತವೆ. ಇಷ್ಟು ಮಾತರವಲ್ಲದೆ ಇದು ನಿಮ್ಮ ಏರಿಯಾದಲ್ಲಿ ಡೌನ್‌ಲೋಡ್,ಅಪ್‌ಲೋಡ್ ಮತ್ತು ಲೇಟೆನ್ಸಿಯನ್ನು ಸಹಾ ತಿಳಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.