ನವದೆಹಲಿ: ನೀವು ನೆಟ್‌ಫ್ಲಿಕ್ಸ್ ನಲ್ಲಿ (Netflix) ಬರುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಯಸುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ. ಈ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ (OTT Platform) ಬರುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಇನ್ನು ಮುಂದೆ ಇಂಟರ್ ನೆಟ್ (Internet) ಅಗತ್ಯವಿಲ್ಲ. ನೆಟ್ಫಿಕ್ಸ್ ಹೊಸ ಫೀಚರ್ ಆನ್ನು ಆರಂಭಿಸಿದೆ.  ಪ್ರಾರಂಭಿಸಿದೆ. ಹಾಗಾಗಿ ಇನ್ನು ಮುಂದೆ,  ಇಂಟರ್ ನೆಟ್ ಇಲ್ಲದೆಯೇ ಮನರಂಜನೆ ಪಡೆಯಬಹುದು. 


COMMERCIAL BREAK
SCROLL TO CONTINUE READING

ಬಂದಿದೆ ಡೌನ್ ಲೋಡ್ ಫಾರ್ ಯು ಫೀಚರ್ : 
ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ, ನೆಟ್‌ಫ್ಲಿಕ್ಸ್ (Netflix) ಇತ್ತೀಚೆಗೆ  Download for you ಎಂಬ ಫೀಚರ್ ಅನ್ನು ಆರಂಭಿಸಿದೆ.  ಈ ವೈಶಿಷ್ಟ್ಯದ ಸಹಾಯದಿಂದ, ನಿಮ್ಮ ನೆಚ್ಚಿನ ವೆಬ್ ಸರಣಿ (Web series) ಮತ್ತು ಚಲನಚಿತ್ರ  ಡೌನ್‌ಲೋಡ್ ಆಗುತ್ತದೆ.


ಇದನ್ನೂ ಓದಿ : Virus attack : ಆಪಲ್ ಮ್ಯಾಕ್ ಬುಕ್ ಗೂ ಅಟಕಾಯಿಸಿಬಿಟ್ಟಿತು ವೈರಸ್, ಕಂಪನಿಗೆ ಗೊತ್ತೇ ಆಗಲಿಲ್ಲ ಕಾರಣ..!


ಡೌನ್ ಲೋಡ್ ಫಾರ್ ಯು ಹೇಗೆ ಕಾರ್ಯನಿರ್ವಹಿಸುತ್ತದೆ :
ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನ  ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ (Artificial Intelligence)ಮೂಲಕ ಕಾರ್ಯನಿರ್ವಹಿಸುತ್ತದೆ. ಅಂದರೆ, ನೀವು ವೆಬ್ ಸರಣಿಯನ್ನು ವೀಕ್ಷಿಸುತ್ತಿದ್ದರೆ, ನೆಟ್‌ಫ್ಲಿಕ್ಸ್ ಮುಂದಿನ ಸಂಚಿಕೆಯನ್ನು ನಿಮ್ಮ ಮೊಬೈಲ್‌ನಲ್ಲಿ (Mobile) ಡೌನ್‌ಲೋಡ್ ಮಾಡುತ್ತದೆ. ಇದಲ್ಲದೆ, ನಿಮ್ಮ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು, ಅಪ್ಲಿಕೇಶನ್ ಸ್ವತಃ ಇದೇ ರೀತಿಯ ಚಲನಚಿತ್ರಗಳನ್ನು ಡೌನ್‌ಲೋಡ್ (Download) ಮಾಡುತ್ತದೆ. ನೀವು ವೈ-ಫೈ ಸ್ಥಳದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಬಳಸಿದ ತಕ್ಷಣ, ಮುಂದಿನ ಸರಣಿ ಅಥವಾ ಚಲನಚಿತ್ರ ತನ್ನಷ್ಟಕ್ಕೇ  ಡೌನ್‌ಲೋಡ್ ಆಗುತ್ತದೆ. 


ಈ ಮೊದಲು ಇದೇ ರೀತಿಯ ಫೀಚರ್ ಪರಿಚಯಿಸಲಾಗಿತ್ತು : 
ಇದು ನೆಟ್‌ಫ್ಲಿಕ್ಸ್‌ನಲ್ಲಿ ಹೊಸದಾಗಿರಬಹುದು. ಆದರೆ ಕೆಲವು ಸಮಯದ ಹಿಂದೆ Smart downloads ಎಂಬ ಫೀಚರ್ ಅನ್ನು  ವೆಬ್ ಸರಣಿಗಾಗಿ ಮಾತ್ರ ಬಳಸಲಾಗುತ್ತಿತ್ತು.   ಆದರೆ ಡೌನ್ ಲೋಡ್ ಫಾರ್ ಯುನಲ್ಲಿ ಚಲನಚಿತ್ರಗಳನ್ನು ಸಹ ಡೌನ್‌ಲೋಡ್ ಮಾಡಬಹುದು.


ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾದ Microsoft Surface Pro 7+, ಬೆಲೆ ಎಷ್ಟು?


ಬಳಸುವುದು ಹೇಗೆ ?
ಮಾಹಿತಿಯ ಪ್ರಕಾರ, ನೆಟ್‌ಫ್ಲಿಕ್ಸ್‌ನಲ್ಲಿ ಡೌನ್ ಲೋಡ್ ಫಾರ್ ಯು ಅನ್ನು ಬಳಸುವುದು ತುಂಬಾ ಸುಲಭ. ಇದಕ್ಕಾಗಿ, ಮೊದಲು ಈ ಅಪ್ಲಿಕೇಶನ್‌ನ ಡೌನ್‌ಲೋಡ್ ಆಯ್ಕೆಗೆ ಹೋಗಿ. ಈಗ ನೀವು ಇಲ್ಲಿ ಡೌನ್‌ಲೋಡ್ ಮಾಡಲು ಬಯಸುವ ವಿಷಯವನ್ನು ಆಯ್ಕೆ ಮಾಡಿ. ನಿಮ್ಮ ಡಿವೈಸ್ ನಲ್ಲಿಇರುವ ಫ್ರೀ ಮೆಮೊರಿಗೆ ಅನುಗುಣವಾಗಿ ವೆಬ್-ಸರಣಿ ಅಥವಾ ಚಲನಚಿತ್ರವನ್ನು (Films) ಡೌನ್‌ಲೋಡ್ ಮಾಡಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.