ನವದೆಹಲಿ: Microsoft Surface Pro 7+ launched in india - ತಂತ್ರಜ್ಞಾನದ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಭಾರತದಲ್ಲಿ (Microsoft India) Surface Pro 7+ ಬಿಡುಗಡೆಗೊಳಿಸಿದೆ. Surface Pro 7 ಬಳಿಕ ಮೈಕ್ರೋಸಾಫ್ಟ್ ಭಾರತದಲ್ಲಿ ಈ ಲ್ಯಾಪ್ ಟಾಪ್ ಅನ್ನು ಮಾರುಕಟ್ಟೆಗೆ ಇಳಿಸಿದೆ. ಇದು ಸೋಮವಾರದಿಂದ ವಿಶೇಷವಾಗಿ ಕಮರ್ಷಿಯಲ್ ಹಾಗೂ ಶೈಕ್ಷಣಿಕ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದರಲ್ಲಿ ಇಂಟೆಲ್ ನ ಲೇಟೆಸ್ಟ್ 11 ನೇ ತಲೆಮಾರಿನ ಪ್ರೊಸೆಸರ್, ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ, ರಿಮೂವೆಬಲ್ SSD ಹಾಗೂ LTE ಕನೆಕ್ಟಿವಿಟಿ ಸಿಗಲಿದೆ. ಪ್ರಸ್ತುತ ಮೈಕ್ರೋಸಾಫ್ಟ್ (Microsoft) ಹಲವು ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇವು Intel Core i3 ನಿಂದ ಆರಂಭಗೊಂಡು Intel Core i7 ಆವೃತ್ತಿಯವರೆಗೆ ಇರಲಿವೆ. ಆರಂಭಿಕ ಆವೃತ್ತಿಯ ಬೆಲೆ ರೂ.83999 ನಿಗದಿಪಡಿಸಲಾಗಿದೆ.
ಇದನ್ನೂ ಓದಿ- ಕೇವಲ 790 ರೂಪಾಯಿಗೆ ಪಡೆಯಿರಿ 12,990 ರೂ ಮೌಲ್ಯದ ಸ್ಮಾರ್ಟ್ ಫೋನ್..!
Microsoft Surface Pro 7+ ವೈಶಿಷ್ಟ್ಯಗಳು
Surface Pro 7+ ನಲ್ಲಿ 50.4 Wh ಅತಿ ದೊಡ್ದದ ಬ್ಯಾಟರಿ ಇದೆ, ಇದರ ಸಹಾಯದಿಂದ ನೀವು ಈ ಡಿವೈಸ್ ಅನ್ನು ಒಮ್ಮೆ ಚಾರ್ಜ್ ಮಾಡಿದ ಬಳಿಕ ಸತತ 15 ಗಂಟೆಗಳ ಬ್ಯಾಕಪ್ ಸಿಗಲಿದೆ. ಇದರಲ್ಲಿ ರಿಮೂವೆಬಲ್ SSD ಇದೆ. ಇದರಿಂದ ಬಳಕೆದಾರರು ತಮ್ಮ ಡ್ರೈವ್ ಅನ್ನು ತೆಗೆದು ಮುಖ್ಯವಾದ ದತ್ತಾಂಶವನ್ನು ಸಂಗ್ರಹಿಸಿಡಬಹುದು.
ಇದನ್ನೂ ಓದಿ- Sandes ಆ್ಯಪ್‌ನಲ್ಲಿರುವ ಈ ವಿಶಿಷ್ಟ್ಯಗಳನ್ನು ನೀವು Whatsappನಲ್ಲಿಯೂ ನೋಡಿರಲಿಕ್ಕಿಲ್ಲ!
ಇದಲ್ಲದೆ Surface Pro 7+ ನಲ್ಲಿ ವಿಂಡೋಸ್ ಎನ್ಹಾನ್ಸ್ಡ್ ಹಾರ್ಡ್ ವೆಯರ್ ಸಿಕ್ಯೋರಿಟಿ ವೈಶಿಷ್ಟ್ಯ ಹಾಗೂ ವಿಂಡೋಸ್ ಅಟೋಪೈಲೆಟ್ ಇದೆ. ಇದರ ಒಟ್ಟಾರೆ ಸಂರಚನೆ ಮೊದಲಿನ ಮಾಡೆಲ್ ಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಸ್ಕ್ರೀನ್ ಸೈಜ್ ಹಾಗೂ ಪೋರ್ಟ್ ಸಿಲೆಕ್ಷನ್ ಮೊದಲಿನಂತೆಯೇ ಇದೆ. ಇದರಲ್ಲಿ 12.3 ಇಂಚಿನ ಡಿಸ್ಪ್ಲೇ 2736x1824 ಪಿಕ್ಸಲ್ ರೆಸೊಲ್ಯುಶನ್, ಸಿಂಗಲ್ USB ಟೈಪ್ C ಪೋರ್ಟ್, ಒಂದು USB ಟೈಪ್ ಪೋರ್ಟ್, 3.5 mm ನ ಆಡಿಯೋ ಜ್ಯಾಕ್ ಹಾಗೂ ಸರ್ಫೇಸ್ ಕನೆಕ್ಟ್ ಪೋರ್ಟ್ ಇದೆ. ಇದುವರೆಗೂ ಕೂಡ ಇದರಲ್ಲಿ ಥಂಡರ್ ಬೋಲ್ಟ್ ಕನೆಕ್ಟಿವಿಟಿ ನೀಡಲಾಗಿಲ್ಲ.
ಇದನ್ನೂ ಓದಿ- Whatsapp Privacy Policy : ನಿಮ್ಮ ಮಾಹಿತಿಯನ್ನು ಕದ್ದು ಓದುತ್ತಾ ವಾಟ್ಸಾಪ್..? ಮತ್ತೆ ಬದಲಾಗಿದೆ ಪ್ರೈವೆಸಿ ಪಾಲಿಸಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.