ನವದೆಹಲಿ: ಮಾರ್ಚ್ 8ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಗೌರವಿಸಲು ಇದುವೇ ಉತ್ತಮ ಸಂದರ್ಭ. ನಮ್ಮ ತಾಯಿ, ಸಹೋದರಿ, ಪತ್ನಿ ಮತ್ತು ಇತರ ಮಹಿಳೆಯರು ನಮಗೆ ನೀಡಿದ ಪ್ರೀತಿ-ಕಾಳಜಿಗೆ ಯಾವುದೇ ದುಬಾರಿ ಉಡುಗೊರೆ ನೀಡಿದರೂ ಕಡಿಮೆ. ಮಹಿಳೆಯರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ.


COMMERCIAL BREAK
SCROLL TO CONTINUE READING

ಮಹಿಳಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿ-ಪಾತ್ರರಿಗೆ ಒಂದು ಒಳ್ಳೆಯ ಗಿಫ್ಟ್ ನೀಡಲು ಬಯಸಿದರೆ ಇಲ್ಲಿದೆ ಉತ್ತಮ ಆಯ್ಕೆ. ನೀವು ಸ್ಮಾರ್ಟ್‌ಫೋನ್ ಉಡುಗೊರೆ ನೀಡುವ ಮೂಲಕ ಅವರ ಮುಖದಲ್ಲಿ ನಗು ತರಿಸಬಹುದು. ಇಂತಹ ಹಲವು ಸ್ಮಾರ್ಟ್‍ಫೋನ್‍ಗಳು ಮಾರುಕಟ್ಟೆಯಲ್ಲಿವೆ. iPhone 14 Pro Max, Samsung Galaxy S23 Ultra ಸೇರಿದಂತೆ ಇನ್ನೂ ಅನೇಕ ಫೋನ್‍ಗಳಿವೆ.


1. Apple iPhone 14 Pro Max


ಐಫೋನ್ 14 ಪ್ರೊ ಮ್ಯಾಕ್ಸ್ 6.7-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇಯಲ್ಲಿ ಹೊಸ 'ಡೈನಾಮಿಕ್ ಐಲ್ಯಾಂಡ್' ನಾಚ್ ಹೊಂದಿದೆ. ಇದು 1TB ವರೆಗಿನ ಸ್ಟೋರೇಜ್‍ನೊಂದಿಗೆ ಹೊಸ A16 ಬಯೋನಿಕ್‌ ಚಿಪ್‍ನಿಂದ ಕಾರ್ಯನಿರ್ವಹಿಸುತ್ತದೆ. iPhone 14 Pro Max ಹೊಸ 48MP ಪ್ರಾಥಮಿಕ ಸೆನ್ಸಾರ್‍ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.


ಇದನ್ನೂ ಓದಿ: Smartphone Trick: ನೆಟ್‌ವರ್ಕ್ ಇಲ್ಲದಿದ್ದರೂ CALL ಮಾಡಬಹುದು.. ಈ ಟ್ರಿಕ್ ತಿಳಿದರೆ ಶಾಕ್ ಆಗ್ತೀರಾ!


2. Samsung Galaxy S23 Ultra


ಹೊಸ Samsung Galaxy S23 Ultra ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಇದು 6.8-ಇಂಚಿನ ಕ್ವಾಡ್ HD+ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. ಇದು 200MPಯ ಉತ್ತಮ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಅತ್ಯಧಿಕ ರೆಕಾರ್ಡಿಂಗ್ ರೆಸಲ್ಯೂಶನ್ ಉತ್ತಮ ವಿಶೇಷತೆಯಾಗಿದೆ.


3. Google Pixel 7 Pro


ಗೂಗಲ್ ಪಿಕ್ಸೆಲ್ 7 ಪ್ರೊ ಈ ಬಾರಿ ಉತ್ತಮ ವಿನ್ಯಾಸದೊಂದಿಗೆ ಬಂದಿದೆ. ಫೋನ್ ಟೆನ್ಸರ್ ಜಿ2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 48MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಕ್ಯಾಮರಾ ವ್ಯವಸ್ಥೆಯು Googleನ AI ಪ್ರಕ್ರಿಯೆ ವ್ಯವಸ್ಥೆಯಿಂದ ಚಾಲಿತವಾಗಿದೆ.


4. Xiaomi 12 Pro


Xiaomi 12 Pro 5G ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್ ಹೊಂದಿದೆ. Xiaomi 12 Pro 120W ವೇಗದ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.


ಇದನ್ನೂ ಓದಿ: 7 ಮತ್ತು 9 ಸೀಟರ್ ಆಯ್ಕೆಗಳೊಂದಿಗೆ ಮಹೀಂದ್ರ ಹೊರ ತರುತ್ತಿದೆ ಮತ್ತೊಂದು ಸ್ಕಾರ್ಪಿಯೋ!


5. Samsung Galaxy Z ಫೋಲ್ಡ್ 4


Samsung Galaxy Z Fold 4 ಸ್ಯಾಮ್‌ಸಂಗ್‌ನಿಂದ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದ್ದು, ಇದು 8K ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿರುವ ಉತ್ತಮ ಕ್ಯಾಮೆರಾಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಅತ್ಯಧಿಕ ರೆಕಾರ್ಡಿಂಗ್ ರೆಸಲ್ಯೂಶನ್ ಉತ್ತಮ ವಿಶೇಷತೆಯಾಗಿದೆ. Galaxy Z Fold 4 ಸಹ 45W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಇಡೀ ದಿನದ ಬ್ಯಾಟರಿ ಅವಧಿಯನ್ನು ನಿಮಗೆ ನೀಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.