World most expensive Headphone : ಒಂದು ಕೋಟಿ ರೂ. ಸಿಕ್ಕರೆ ಕಾರು, ಬಂಗಲೆ, ಸಕಲ ಸೌಕರ್ಯ ಮಾಡ್ಕೊಂಡು ಆರಾಮಾಗಿ ಜೀವನ ಸಾಗಿಸಬಹುದು ಅಂತ ನಾವು ಭಾವಿಸುತ್ತೇವೆ. ಆದರೆ ಕೆಲವರು ಅದೇ ಹಣವನ್ನು ಖರ್ಚುಮಾಡಿ ದುಬಾರಿ ಹೆಡ್‌ಫೋನ್‌ಗಳ ಖರೀದಿಸುವ ಹವ್ಯಾಸಗಳನ್ನು ಹೊಂದಿದ್ದಾರೆ ಅಂದ್ರೆ ನೀವು ನಂಬಲೇಬೇಕು. 6.19 ಕೋಟಿ ಬೆಲೆಯ ಹೆಡ್‌ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಾಗಲು ಇದೇ ಕಾರಣ. ವಿಶ್ವದ ಅತ್ಯಂತ ದುಬಾರಿ ಹೆಡ್‌ಫೋನ್‌ಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಇಂದೇ ತಿಳಿಯಿರಿ..


COMMERCIAL BREAK
SCROLL TO CONTINUE READING

6 ಕೋಟಿ ಹೆಡ್‌ಫೋನ್ : ವಿಶ್ವದ ಅತ್ಯಂತ ದುಬಾರಿ ಹೆಡ್‌ಫೋನ್ ʼಬೀಟ್ಸ್ ಪ್ರೊʼ ಆಗಿದ್ದು, ಇದರ ಬೆಲೆ 6.19 ಕೋಟಿ ರೂ. ಇದನ್ನು ತಯಾರಿಸಲು 6.5 ಕ್ಯಾರೆಟ್ ಚಿನ್ನ ಮತ್ತು ಮಾಣಿಕ್ಯವನ್ನು ಬಳಸಲಾಗುತ್ತದೆ. ಇದರೊಂದಿಗೆ, ಅದರ ತಯಾರಿಕೆಯಲ್ಲಿ ಪ್ಲಾಟಿನಮ್ ಅನ್ನು ಸಹ ಬಳಸಲಾಗುತ್ತದೆಯಂತೆ. ಇದನ್ನು ಲಂಡನ್‌ನ ಆಭರಣ ಕಂಪನಿ ತಯಾರಿಸಿದೆ.


ಇದನ್ನೂ ಓದಿ: Biparjoy Update: 24 ಗಂಟೆಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಬಿಪರಜಾಯ್ ಚಂಡಮಾರುತ, ಹವಾಮಾನ ಇಲಾಖೆ ಎಚ್ಚರಿಕೆ!


18 ಕ್ಯಾರೆಟ್ ಚಿನ್ನದ ಹೆಡ್‌ಫೋನ್‌ಗಳು : ಎರಡನೇ ಅತ್ಯಂತ ದುಬಾರಿ ಹೆಡ್‌ಫೋನ್ ʼಫೋಕಲ್ ಯ್ಟೋಪಿಯಾʼ ಇದರ ಬೆಲೆ ಸುಮಾರು ರೂ. 88 ಲಕ್ಷ. ಇದರಲ್ಲಿ 18 ಕ್ಯಾರೆಟ್ ಚಿನ್ನ ಬಳಸಲಾಗಿದೆ.


ಓಂಕ್ಯಾ H900M ಹೆಡ್‌ಫೋನ್ : ಮೂರನೇ ಅತ್ಯಂತ ದುಬಾರಿ ಹೆಡ್‌ಫೋನ್ Onkyo H900M ಡೈಮಂಡ್. ಇದನ್ನು ತಯಾರಿಸಲು 20 ಕ್ಯಾರೆಟ್ ವಜ್ರವನ್ನು ಬಳಸಲಾಗಿದೆ. ಇದರ ಬೆಲೆ ಬರೋಬ್ಬರಿ 100,000 ಡಾಲರ್ ಅಂದರೆ ಸುಮಾರು 82 ಲಕ್ಷ ರೂಪಾಯಿ.


ಇದನ್ನೂ ಓದಿ: ‘ಅಖಂಡ ಭಾರತ’ ವೈರಲ್ ವಿಡಿಯೋ.. ಜಮಾಯಿ ಮೇಲೆ ಹಲ್ಲೆ! ಟಿವಿ ಶೋವೊಂದರಲ್ಲಿ ಮುಸ್ಲಿಂ ಮಹಿಳೆಯಿಂದಲೇ ತಪರಾಕಿ


43 ಲಕ್ಷ ಹೆಡ್‌ಫೋನ್‌ಗಳು : ದುಬಾರಿ ಹೆಡ್‌ಫೋನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಹೆಸರು ಸೆನ್‌ಹೈಸರ್ ಬ್ರಾಂಡ್‌ಗೆ ಸೇರಿದೆ. ಇದರ ಹೆಸರು ʼSennheiser Orpheus/HE 1ʼ ಈ ಹೆಡ್‌ಫೋನ್‌ ಬೆಲೆ ಸುಮಾರು 12,000 ಪೌಂಡ್‌ಗಳು ಅಂದರೆ ಸುಮಾರು 43 ಲಕ್ಷ ರೂಪಾಯಿಗಳು.


10 ಲಕ್ಷದ ಹೆಡ್‌ಫೋನ್ : ವಿಶ್ವದ ಐದನೇ ಅತ್ಯಂತ ದುಬಾರಿ ಹೆಡ್‌ಫೋನ್ ಬಗ್ಗೆ ಹೇಳುವುದಾದ್ರೆ, ಈ ಪಟ್ಟಿಯಲ್ಲಿ ʼಸ್ಪಿರಿಟ್ ಟೊರಿನೊ ವಾಲ್ಕಿರಿಯಾ ಟೈಟಾನಿಯಂʼ ಹೆಸರು ಬರುತ್ತದೆ. ಇದರ ಬೆಲೆ $12,800 ಅಂದರೆ ಸುಮಾರು 10 ಲಕ್ಷ ರೂ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.