Shoaib Jamai Attacked During Live TV Show: ಸ್ವಯಂ ಘೋಷಿತ ಇಸ್ಲಾಮಿ ವಿದ್ವಾಂಸ ಶೋಯೆಬ್ ಜಮೈ ಮೇಲೆ ಟಿವಿ ಚಾನೆಲ್ ನ ಮಹಿಳಾ ಸಹ-ಪ್ಯಾನೆಲಿಸ್ಟ್ ಸುಬುಹಿ ಖಾನ್ ಎಂಬವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಬಳಿಕ ಶೋನಿಂದ ಹೊರ ನಡೆಯುವಂತೆ ಆತನ ಮೇಲೆ ಒತ್ತಡ ಹೇರಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Harvard University: ಅಮೇರಿಕಾದಲ್ಲಿ ಈ ಭಾರತದ ಸಂಜಾತೆಗೆ ಸಿಕ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿ
ಈ ವಿಡಿಯೋದಲ್ಲಿ ಸುಬುಹಿ ಖಾನ್, ಜಮೈ ವಿರುದ್ಧ ಕೂಗಾಡುತ್ತಿರುವುದನ್ನು ಕಾಣಬಹುದು. 'ಅಖಂಡ ಭಾರತ'ದ ಕುರಿತ ಜಮೈ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇತ್ತೀಚೆಗೆ ಜಮೈ ನೀಡಿದ ಹೇಳಿಕೆಯೊಂದು ವೈರಲ್ ಆಗಿತ್ತು. ಅದರಲ್ಲಿ ಜಮೈ ಅಖಂಡ ಭಾರತವನ್ನು ಪ್ರತಿಪಾದಿಸುತ್ತಿರುವುದು ಕಂಡುಬಂದಿದೆ, ಇದು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮರನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು.
“ಭಾರತವು ಅಖಂಡ ಭಾರತವಾಗಿ ಬದಲಾಗುವ ದಿನ ಶೀಘ್ರದಲ್ಲೇ ಬರಲಿ ಎಂದು ನಾನು ಅಲ್ಲಾಹನನ್ನು ಬೇಡಿಕೊಳ್ಳುತ್ತೇನೆ. ಬಾಂಗ್ಲಾದೇಶದ 25 ಕೋಟಿ ಮುಸ್ಲಿಮರು, ಪಾಕಿಸ್ತಾನದ 25 ಕೋಟಿ ಮುಸ್ಲಿಮರು ಮತ್ತು ಭಾರತದಿಂದ 25 ಕೋಟಿ ಮುಸ್ಲಿಮರು ಒಗ್ಗೂಡಿ ಭಾರತವನ್ನು ವಶಪಡಿಸಿಕೊಂಡ ದಿನ ಭಾರತವು ಮುಸ್ಲಿಂ ಪ್ರಧಾನಿಯನ್ನು ಪಡೆಯುತ್ತದೆ. ಜೊತೆಗೆ 250 ಕ್ಕೂ ಹೆಚ್ಚು ಮುಸ್ಲಿಮರು ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ” ಎಂಬ ಮಾತು ವೈರಲ್ ವಿಡಿಯೋದಲ್ಲಿ ಕೇಳಿ ಬಂದಿತ್ತು.
Now that's what I call real Desi Dhulai
Well done @SubuhiKhan01 🔥
Shoaib Jamai ko Dho Daala 🤣 pic.twitter.com/SxFTvCb83b
— Kashmiri Hindu (@BattaKashmiri) June 9, 2023
ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ ನಟಸಿಂಹ ಬಾಲಕೃಷ್ಣ ʼಭಗವಂತ್ ಕೇಸರಿʼ ಟೀಸರ್..!
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಸಂಬಂಧ ಕೋಪಗೊಂಡ ಮಹಿಳೆ, ಲೈವ್ ಟಿವಿಯಲ್ಲಿ ಜಮೈ ಮೇಲೆ ಈ ದಾಳಿ ನಡೆಸಿರಬಹುದು ಎಂದು ಹೇಳಲಾಗಿದೆ. ಆದರೆ ಈ ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ