Xiaomi 14 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಕುರಿತು ಮಾಹಿತಿ ಇಲ್ಲಿದೆ ನೋಡಿ
Xiaomi 14 : ಶವೊಮಿ ಇಂಡಿಯಾ (Xiaomi) ಕಂಪನಿಯು ತನ್ನ ಹೊಸ ಮೊಬೈಲ್ ಸರಣಿ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದ್ದು, ಅಧಿಕೃತ ಮಾಹಿತಿಯೊಂದನ್ನು ಹೊರಡಿಸಿದೆ.
Xiaomi 14 smartphone : ಶವೊಮಿ ತನ್ನ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್ ಮತ್ತು ಅಪ್ಡೇಟ್ ಮೊಬೈಲ್ ಫೋನ್‌ಗಳನ್ನು ನೀಡುವ ಸಲುವಾಗಿ ತನ್ನ ಹೊಸ ಮೊಬೈಲ್ ಸರಣಿ ಬಿಡುಗಡೆ ದಿನಾಂಕ ನಿಗದಿ ಮಾಡಿದೆ. ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಶವೊಮಿ ಮೊಬೈಲ್ ಕಂಪನಿಯು ತನ್ನ ಮುಂದಿನ Xiaomi 14 ಅನ್ನು ಭಾರತದಲ್ಲಿ ಇದೇ ಮಾರ್ಚ್ 07 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತ ಮಾಹಿತಿ ನೀಡಿದೆ.
ಈ ಶವೊಮಿ ಸರಣಿಯಲ್ಲಿ ಮೂರು ಮಾದರಿಗಳು ಲಭ್ಯವಾಗಲಿವೆ. Xiaomi 14, Xiaomi 14 Pro ಮತ್ತು Xiaomi 14 Ultra ಎಂಬ ಮೂರು ಮಾದರಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಗೆಡ್ಜೆಟ್ ಮಾರುಕಟ್ಟೆ ಪ್ರವೇಶಿಸಲಿವೆ.
ಇದನ್ನು ಓದಿ : Dhananjay: ರಾಜಕೀಯಕ್ಕೆ ನಟರಾಕ್ಷಸನ ಎಂಟ್ರೀ! ಏನಂದ್ರು ಧನಂಜಯ್..??
ಚೀನಾದಲ್ಲಿ ಬಿಡುಗಡೆ ಶವೊಮಿ ಮೂಲತಃ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆಗೊಳಿಸಿತ್ತು. Xiaomi 14 Ultra ಸಹ ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ Xiaomi 14 ಮೊಬೈಲ್ ಗಳು ಮಾರ್ಚ್ 7 ಮೊದಲ ವಾರ ಬುಕ್ಕಿಂಗ್‌ಗೆ ಲಭ್ಯವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಫೆಬ್ರವರಿ 25 ರಂದು ಬಿಡುಗಡೆ ಚೀನಾ ಮೂಲಕ ತಯಾರಕರು ಸಾಮಾಜಿಕ ಜಾಲತಾಣ (X) ನಲ್ಲಿ ಹೊಸ ಫೋನ್ Xiaomi 14 ಬಿಡುಗಡೆ ದಿನಾಂಕ ಕುರಿತು ಮಾಹಿತಿ ನೀಡಿದೆ. ಈ ಹಿಂದೆ ಕಂಪನಿಯು ಅಧಿಕೃತ Xiaomi ಇಂಡಿಯಾ Leica ಪಾಲುದಾರಿಕೆ ಕುರಿತು ಮಾತನಾಡಿತ್ತು. ಇದೀಗ ಹೊಸ ಸರಣಿಯನ್ನು ಇದೇ ಫೆಬ್ರವರಿ 25 ರಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಬಿಡುಗಡೆಯ ವೇಳಾಪಟ್ಟಿಗೆ ಅಧಿಕೃತವಾಗಿ ಒಳಗೊಳ್ಳಲಿದೆ. ಚೀನಾದಲ್ಲಿ ಕಂಪನಿಯು ತನ್ನ ಶವೊಮಿ ಮೊಬೈಲ್ ಸರಣಿ ಬಿಡುಗಡೆ ಮಾಡಲಿದೆ. ಬಿಡುಗಡೆಯ ನಂತರದ ಎರಡು ವಾರಗಳಲ್ಲಿ Xiaomi 14 ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಲಿದೆ.
ಇದನ್ನು ಓದಿ : ಆನೆಯಿಂದ ಬಚಾವ್ ಆದ್ರೂ ಬಂಡೀಪುರ ಅರಣ್ಯಾಧಿಕಾರಿಗಳ ‘ದಂಡ’ದ ಬಲೆಗೆ ಬಿದ್ದ ಇಬ್ಬರು!!
ಶವೊಮಿ ಸರಣಿ ಮೊಬೈಲ್ ಫೀಚರ್ಸ್
ಚೀನಾದಲ್ಲಿ Xiaomi 14, ಸ್ನಾಪ್‌ಟ್ರಾಗನ್ (Snapdragon) 8 ಜನರೇಷನ್ 3 SoC ಅನ್ನು ಫಿಚರ್ಸ್ ಹೊಂದಿದೆ.
ಅಲ್ಲದೇ 1.5K ರೆಸಲ್ಯೂಶನ್ ಮತ್ತು ಅಡಾಪ್ಟಿವ್ 120Hz ರಿಫ್ರೆಶ್ ಒಳಗೊಂಡಿದ್ದು, 6.36-ಇಂಚಿನ LTPO ಡಿಸ್ಪ್ಲೇಯನ್ನು ಹೊಂದಿದೆ.
ಕ್ಯಾಮೆರಾಗೆ ಆದ್ಯತೆ
ಕ್ಯಾಮೆರಾಗೆ ಆದ್ಯತೆ ಚೀನಾದಂತೆ ಭಾರತದಲ್ಲೂ ಹೊಸ ವಿನ್ಯಾಸ, ಫೀಚರ್‌ಗಳಲ್ಲಿ ಸಿಗುವ ಸಾಧ್ಯತೆ ಇದೆ.
ಇದು 12GB ವರೆಗೆ ಹಾಗೂ 1TB ವರೆಗೆ ಇಂಟರ್ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ.
ಈ ಫೋನ್‌ನಲ್ಲಿ Summilux ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್+ 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇದೆ.
ಇನ್ನೊಂದು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹಾಗೂ ಫ್ರಂಟ್ ಕ್ಯಾಮೆರೆ 32 ಎಂಪಿ ಸಹ ಈ ಹೊಂದಿದೆ.
ಈ ಹ್ಯಾಂಡ್ಸೆಟ್ IP68 ರೇಟಿಂಗ್ ಅನ್ನು ಸಹ ಪಡೆದಿದೆ.
ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.
ಇದರಿಂದ ಕೆಲವೇ ನಿಮಿಷಗಳಲ್ಲಿ ಇದರ 4,610mAh ಸಾಮರ್ಥ್ಯದ ಬ್ಯಾಟರಿ ಚಾರ್ಜ್ ಆಗಲಿದೆ.
ಈ ಶವೊಮಿ 14 ಸ್ಮಾರ್ಟ್ ಫೋನ್ ಚೀನಾದಲ್ಲಿ ಜೆಡ್ ಗ್ರೀನ್, ಕಪ್ಪು, ಬಿಳಿ ಮತ್ತು ಸ್ನೋ ಮೌಂಟೇನ್ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ.
ಭಾರತದಲ್ಲಿ ಮೊಬೈಲ್ ದರ
ಚೀನಾದಲ್ಲಿನ ಈ ಬೆಲೆಯನ್ನು ಪರಿಗಣಿಸಿ, ಶವೊಮಿ 14 ಒಟ್ಟು 8GB RAM/256 ಮೂಲ ರೂಪಾಂತರದ ಬೆಲೆ ಸುಮಾರು ₹50,000 ಇರಲಿದೆ. ಭಾರತದಲ್ಲಿ ಮೊಬೈಲ್ ದರ ಇನ್ನೂ ಭಾರತದಲ್ಲಿ Xiaomi 14 ಅನ್ನು ಚೀನಾದಲ್ಲಿ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಆರಂಭಿಸಲಾಗಿದೆ. ಇಲ್ಲಿ ಬೆಲೆಗಳು ₹50,000 ರಿಂದ ₹60,000 ವರೆಗೆ ಇರಬಹುದು ಎಂದು ಅಂದಾಜಿಸಾಳಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.