ನವದೆಹಲಿ : ಚೀನಾದ ಪ್ರಸಿದ್ಧ ಫೋನ್ ತಯಾರಕ Xiaomi, ಆಗಸ್ಟ್ 10 ರಂದು  Mi Mix 4 flagship ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸುದ್ದಿಯನ್ನು ಕಂಪನಿ ಪ್ರಕಟಿಸಿದ ದಿನದಿಂದ, ಪ್ರಾಡಕ್ಟ್ ಅನ್ನು ಪ್ರಸಿದ್ದಿಗೊಳಿಸುವ ನಿಟ್ಟಿನಲ್ಲಿ, ಟೀಸರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಟೀಸರ್ ಪ್ರಕಾರ, ಬಿಡುಗಡೆಯಾಗಲಿರುವ ಈ ಡಿವೈಸ್, Ultra-Wideband (UWB) ತಂತ್ರಜ್ಞಾನದ ಮೂಲಕ ಕೆಲಸ ಮಾಡಲಿದೆ. ಇದು under display (UD) ಕ್ಯಾಮೆರಾ ತಂತ್ರಜ್ಞಾನವನ್ನು ಸಹ ಹೊಂದಿದೆ ಎನ್ನುವುದು ಟೀಸರ್ ನಿಂದ ತಿಳಿದು ಬರುತ್ತದೆ. ಸೆಲ್ಫಿ ಕ್ಯಾಮೆರಾ ಸ್ಕ್ರೀನ್ ಮೇಲೆ ಕಾಣುವುದಿಲ್ಲ. 


COMMERCIAL BREAK
SCROLL TO CONTINUE READING

ಏನಿದು Ultra-Wideband ? 
ಶಿಯೋಮಿಯ (Xiaomi) Mix 4  UWB ಚಿಪ್ ಹೊಂದಿರಬಹುದು ಎಂದು ಕೆಲವು ತಿಗಳ ಹಿಂದೆ ವರದಿಯಾಗಿತ್ತು. ಚೀನೀ ಸ್ಮಾರ್ಟ್ ಫೋನ್ ಬ್ರಾಂಡ್ ಗಳಲ್ಲಿ (Smartphone) ಕಂಡುಬರುವ ಪೀಯರ್-ಟು-ಪೀಯರ್ ಫೈಲ್ ಟ್ರಾನ್ಸ್ಫರ್ ಡಿವೈಸ್,  Mi Share ಈ ಚಿಪ್ ಅನ್ನು ಬಳಸುತ್ತದೆ. ಅಲ್ಟ್ರಾ-ವೈಡ್‌ಬ್ಯಾಂಡ್  ತಂತ್ರಜ್ಞಾನವು ರೇಡಿಯೋ ಆಧಾರಿತ ಸಂವಹನ ತಂತ್ರಜ್ಞಾನವಾಗಿದ್ದು, ಡೇಟಾವನ್ನು ವೇಗವಾಗಿ ಮತ್ತು ಸ್ಥಿರವಾಗಿ ರವಾನಿಸಲು ಮತ್ತು ಅಲ್ಪ-ಶ್ರೇಣಿಯ ಬಳಕೆಗಾಗಿ (short range use) ಬಳಸಲಾಗುತ್ತದೆ. ಇದನ್ನು ಬ್ಲೂಟೂತ್‌ನ ಅಭಿವೃದ್ಧಿಪಡಿಸಿದ ಆವೃತ್ತಿ ಎನ್ನಲಾಗುತ್ತಿದೆ.  ಏಕೆಂದರೆ ಈ ತಂತ್ರಜ್ಞಾನವು ಕೆಲವು ಸೆಂಟಿಮೀಟರ್‌ಗಳ ದೂರದಲ್ಲಿರುವ ಸ್ಮಾರ್ಟ್ ಡಿವೈಸ್ ಗಳನ್ನು ಲೊಕೇಟ್  ಮಾಡುತ್ತದೆ. Apple ಮತ್ತು Samsung Smart Tags ನಂತಹ ಪ್ರಾಡಕ್ಟ್ ಗಳು ಕೂಡ ಇದೇ UWB ತಂತ್ರಜ್ಞಾನವನ್ನು ಬಳಸುತ್ತದೆ.    ಟಿವಿಯನ್ನು ವ್ಯಕ್ತಿಯೊಬ್ಬ ಫೋನ್ ಮೂಲಕ ಚಲಾಯಿಸುವುದನ್ನು ಕಾಣಬಹುದು. ಅಂದರೆ, ಫೋನ್ ಟಿವಿಯ ರಿಮೋಟ್ ಆಗಿಯೂ ಕಾರ್ಯ ನಿರ್ವಹಿಸಲಿದೆ. 


ಇದನ್ನೂ ಓದಿ: Whatsapp- ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಲಾದ ಸಂದೇಶ ಓದಲು ಇಲ್ಲಿದೆ ಸುಲಭ ಟ್ರಿಕ್


ಅಂಡರ್ ಡಿಸ್‌ಪ್ಲೇ ಕ್ಯಾಮೆರಾ : 
ಕಂಪನಿಯು ಬಿಡುಗಡೆ ಮಾಡಿರುವ ಹೊಸ ಟೀಸರ್ ಪ್ರಕಾರ, Mix 4 under display (UD) camera ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. Mi Mix ಸರಣಿಯ ಮೊದಲ ಫೋನ್ ಬಿಡುಗಡೆಯಾದಾಗ  Xiaomi ಇದನ್ನು ಫುಲ್ ಸ್ಕ್ರೀನ್ ಮತ್ತು ನಾಚ್ಲೆಸ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿಟ್ಟು. ಇದು ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸರಣಿಯ ಇತರ ಮಾದರಿಗಳಲ್ಲಿ, ಕಂಪನಿಯು  ಪಾಪ್-ಅಪ್ ಕ್ಯಾಮೆರಾ (pop-up camera) ಮತ್ತು ಸ್ಲೈಡರ್ ಕ್ಯಾಮೆರಾ (slider camera) ವಿನ್ಯಾಸ ಸೇರಿದಂತೆ ಕೆಲವು ಹೊಸ ತಂತ್ರಜ್ಞಾನ ತರಲು ಪ್ರಯತ್ನಿಸಿದೆ.  


ಫೋನಿನ ವಿಶೇಷತೆ : 
ಬ್ಲಾಗರ್ ಈ ಫೋನ್‌ಗೆ ಸಂಬಂಧಿಸಿದ ಸುದ್ದಿಯನ್ನು ಲೀಕ್ ಮಾಡಿದ್ದಾರೆ.  ಇದರಲ್ಲಿ ಅವರು ಮಿಕ್ಸ್ 4 ರ ಟೆಂಪರ್ಡ್ ಗ್ಲಾಸ್‌ನ ಫೋಟೋವನ್ನು ಹಾಕಿದ್ದಾರೆ. ಮಿ 11 ರ ಟೆಂಪರ್ಡ್ ಗ್ಲಾಸ್ ಅನ್ನು ಇಟ್ಟು, ಎರಡರ ಹೋಲಿಕೆ ಮಾಡಿರುವ ಪ್ರಕಾರ, ಮಿಕ್ಸ್ 4 ನ ಡಿಸ್‌ಪ್ಲೇ ಎಫೆಕ್ಟ್ ಉತ್ತಮವಾಗಿರಲಿದೆ ಎನ್ನಲಾಗಿದೆ. 


ಇದನ್ನೂ ಓದಿ: 5,000mAh ಬ್ಯಾಟರಿ ಸಾಮರ್ಥ್ಯದ Vivo Y12G ಸ್ಮಾರ್ಟ್‌ಫೋನ್ ಬಿಡುಗಡೆ; ಇದರ ಬೆಲೆ, ವಿಶೇಷತೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ