Xiaomiಯ 5G ಸ್ಮಾರ್ಟ್ ಫೋನ್ ಮೇಲೆ ಸಿಗುತ್ತಿದೆ ಬಂಪರ್ ಡಿಸ್ಕೌಂಟ್ ಜೊತೆಗೆ ಇಷ್ಟೆಲ್ಲಾ ಆಫರ್

 Xiaomi MI 11X 5G Smartphone: ಕಂಪನಿಗಳು 5G ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತರ ಕಂಪನಿಗಳಂತೆ, Xiaomi  ಕೂಡಾ 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

Written by - Ranjitha R K | Last Updated : Jul 19, 2021, 05:22 PM IST
  • ಎಂಐ 11 ಎಕ್ಸ್ 5 ಜಿ ಸ್ಮಾರ್ಟ್‌ಫೋನ್‌ ಮೇಲೆ ಸಿಗುತ್ತಿದೆ ಡಿಸ್ಕೌಂಟ್
  • ಈ ಫೋನ್ ಅನ್ನು 2 ಸಾವಿರ ರೂಪಾಯಿಗಳಷ್ಟು ಅಗ್ಗದ ಬೆಲೆಗೆ ಖರೀದಿಸಬಹುದು.
  • ಶಿಯೋಮಿ ಎಂಐ 11 ಎಕ್ಸ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ
Xiaomiಯ  5G  ಸ್ಮಾರ್ಟ್ ಫೋನ್ ಮೇಲೆ ಸಿಗುತ್ತಿದೆ ಬಂಪರ್ ಡಿಸ್ಕೌಂಟ್ ಜೊತೆಗೆ ಇಷ್ಟೆಲ್ಲಾ  ಆಫರ್  title=
ಎಂಐ 11 ಎಕ್ಸ್ 5 ಜಿ ಸ್ಮಾರ್ಟ್‌ಫೋನ್‌ ಮೇಲೆ ಸಿಗುತ್ತಿದೆ ಡಿಸ್ಕೌಂಟ್ (file photo)

ನವದೆಹಲಿ : Xiaomi MI 11X 5G Smartphone: ಕಂಪನಿಗಳು 5G ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತರ ಕಂಪನಿಗಳಂತೆ, Xiaomi  ಕೂಡಾ 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. 4 G ಬಿಟ್ಟು 5 G ಫೋನ್ ಖರೀದಿಸುವ ಯೋಚನೆಯಿದ್ದರೆ,  Xiaomi MI 11X 5G ಉತ್ತಮ ಆಯ್ಕೆಯಾಗಿದೆ. ಕಂಪನಿಯು  MI 11X 5G ಮೇಲೆ ಭಾರೀ ಆಫರ್ ನೀಡುತ್ತಿದೆ. ಈ ಆಫರ್ ಮೂಲಕ ಫೋನ್ ಅನ್ನು ಅಗ್ಗದ ದರದಲ್ಲಿ  ಖರೀದಿಸಬಹುದು. ಈ ಫೋನ್‌ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ.  

MI 11X 5G ವೈಶಿಷ್ಟ್ಯಗಳು :
MI 11X 5G  ಫೋನ್‌ನಲ್ಲಿ 6.67 ಇಂಚಿನ ಎಫ್‌ಎಚ್‌ಡಿ + ಡಿಸ್ಪ್ಲೇ ಸಪೋರ್ಟ್ ನೀಡಲಾಗಿದೆ. ಫೋನ್‌ನ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ನೊಂದಿಗೆ ಬರುತ್ತದೆ. 11 ಎಕ್ಸ್ ನಲ್ಲಿ  ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ. ಶಿಯೋಮಿ ಎಂಐ 11 ಎಕ್ಸ್ (Xiaomi MI 11X) ಅನ್ನು 6 ಜಿಬಿ RAM + 128 ಜಿಬಿ ಮತ್ತು 8 ಜಿಬಿ RAM + 256 ಜಿಬಿ ಸ್ಟೋರೇಜ್ ನ ಎರಡು ವೆರಿಯೆಂಟಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ನಲ್ಲಿ HDR10 + ಸಪೋರ್ಟ್ ನೀಡಲಾಗಿದೆ. ಅಲ್ಲದೆ ಇದರಲ್ಲಿ 4,250mAh ಬ್ಯಾಟರಿಯನ್ನು ನೀಡಲಾಗಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ . 

ಇದನ್ನೂ  ಓದಿ : Samsung ಲಾಂಚ್ ಮಾಡಿದೆ ಸೂಪರ್ ಸ್ಮಾರ್ಟ್ ಫೋನ್ , ಬ್ಯಾಟರಿ ಕ್ಯಾಮರಾ ಸೇರಿದಂತೆ ಜಬರ್ ದಸ್ತ್ ವೈಶಿಷ್ಟ್ಯ

ಕ್ಯಾಮೆರಾ :
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಪ್ರೈಮರಿ ಲೆನ್ಸ್ 48 ಮೆಗಾಪಿಕ್ಸೆಲ್‌ ಆಗಿದ್ದು, ಎರಡನೇ ಲೆನ್ಸ್ 8 ಮೆಗಾಪಿಕ್ಸೆಲ್‌ ನ  ಅಲ್ಟ್ರಾ ವೈಡ್ ಆಗಿದ್ದು, ಮೂರನೇ ಲೆನ್ಸ್  5 ಮೆಗಾಪಿಕ್ಸೆಲ್‌ ನ ಮ್ಯಾಕ್ರೋ ಆಗಿದೆ. ಸೆಲ್ಫಿಗಾಗಿ, ಇದರಲ್ಲಿ 20 ಮೆಗಾಪಿಕ್ಸೆಲ್ ಕ್ಯಾಮೆರ ಹೊಂದಿದೆ. 

ಆಫರ್ ಏನು ? 
ಈ ಫೋನ್‌ನ ಆರಂಭಿಕ ಬೆಲೆ 29,999 ರೂಗಳಾಗಿವೆ. ಆದರೆ ಈ ಫೋನ್ ಅನ್ನು 2 ಸಾವಿರ ರೂಪಾಯಿಯಷ್ಟು ಕಡಿಮೆ ಬೆಲೆಗಳಿಗೆ ಸಿಗಲಿದೆ. ಆಫರ್ ಸಿಗಬೇಕಾದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI credit card) ಬಳಸಬೇಕಾಗುತ್ತದೆ. ನೀವು ಎಸ್‌ಬಿಐ (SBI) ಕಾರ್ಡ್‌ನೊಂದಿಗೆ ಫೋನ್ ಖರೀದಿಸಿದರೆ, ನಿಮಗೆ ತ್ವರಿತ ರಿಯಾಯಿತಿ 2 ಸಾವಿರ ರೂಗಳ ಡಿಸ್ಕೌಂಟ್ ಸಿಗಲಿದೆ. 

ಇದನ್ನೂ  ಓದಿ : ಬೆರಳುಗಳಿಂದಲೇ ಚಾರ್ಜ್ ಆಗಲಿದೆ ಫೋನ್, ಬೆವರಿನಿಂದಲೇ ಉತ್ಪತ್ತಿಯಾಗುತ್ತದೆ ವಿದ್ಯುತ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News